ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಭಾರತ ಎರಡನೆ ಬಾರಿ ಚಾಂಪಿಯನ್ನಾಗಿ ಹೊರಹೊಮ್ಮಿದೆ.
ಲೆಬನಾನ್ ವಿರುದ್ಧ ನಡೆದ ಫನಲ್ನಲ್ಲಿ 2-0 ಗೋಲುಗಳಿಂದ ಗೆದ್ದಕೊಂಡಿತು. ಮೊದಲಾರ್ಧದಲ್ಲಿ ಗೋಲಿಲ್ಲದೇ ಮುಕ್ತಾಯಗೊಂಡರೂ ಎರಡನೆ ಅವಯಲ್ಲಿ ಸುನಿಲ್ ಚೆಟ್ರಿ (46ನೇ ನಿಮಿ) ಗೋಲು ಹೊಡೆದರು.
ನಂತರ 65ನೇ ನಿಮಿಷದಲ್ಲಿ ಚಾಂಗ್ಟೆ ಹೊಡೆದ ಗೋಲು ಅಂತರವನ್ನು ಹೆಚ್ಚಿಸಿ ಪ್ರಶಸ್ತಿಯನ್ನು ಖಾತ್ರಿಪಡಿಸಿತು. 2018ರ ಚೊಚ್ಚಲ ಆವೃತ್ತಿಯಲ್ಲೂ ಭಾರತ ಪ್ರಶಸ್ತಿ ಗೆದ್ದಿತ್ತುಘಿ.
ಭಾರತ ತಂಡಕ್ಕೆ 1 ಕೋಟಿ ರೂ. ಬಹುಮಾನ
ಇಂಟರ್ಕಾಂಟಿನೆಂಟಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಭಾರತ ಫುಟ್ಬಾಲ್ ತಂಡಕ್ಕೆ 1 ಕೋಟಿ ರೂ, ಬಹುಮಾನ ಘೋಷಿಸಿದ್ದಾರೆ.ಪ್ರತಿಷ್ಠಿತ ಇಂಟರ್ ಕಾಂಟಿನೆಂಟಲ್ ಪ್ರಶಸ್ತಿ ಗೆಲುವು ನಮಗೆ ಗೌರವ ತಂದಿದೆ ಎಂದು ತಿಳಿಸಿದ್ದಾರೆ.ಯಶಸ್ವಿಯಾಗಿ ಟೂರ್ನಿಯನ್ನು ನಡೆಸಿಕೊಟ್ಟಿದಕ್ಕಾಗಿ ಆಲ್ ಇಂಡಿಯಾ ಫೂಟ್ಬಾಲ್ ಪೆಡರೇಶನ್ `ಧನ್ಯವಾದ ಹೇಳಿದೆ.