ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ರುತುರಾಜ್ ಗಾಯಕ್ವಾಡ್ ಆಟದ ಶೈಲಿ ಬಗ್ಗೆ ಮಾಜಿ ಆಟಗಾರರು ಕೊಂಡಾಡುತ್ತಾರೆ. ಸೂಪರ್ ಮ್ಯಾನ್ ದೇಹದಾರ್ಢ್ಯತೆ ಇಲ್ಲದೇ ಇದ್ದರೂ ಸೂಪರ್ ಫಾಸ್ಟ್ ಆಗಿ ಆಡುತ್ತಾರೆ. ಟೆಕ್ನಿಕಲಿ ರುತುರಾಜ್ ಸೂಪರ್ ಆಗಿದ್ದಾರೆ. ರಸೆಲ್, ಬಟ್ಲರ್ರಂತಹ ಪವರ್ ಇಲ್ಲದೆ ಇದ್ದರೂ ಪವರ್ ಹಿಟ್ಟಿಂಗ್ನಲ್ಲಿ ಕಡಿಮೆ ಇಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಧಾರವಾಗಿರುವ ರುತುರಾಜ್ ಗಾಯಕ್ವಾಡ್ ಐಪಿಎಲ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸಮಗೊಳಿಸಿದ್ದಾರೆ. ಸಚಿನ್, ಐಪಿಎಲ್ ನಲ್ಲಿ 1000 ರನ್ ಪೂರೈಸಲು ಕೇವಲ 31 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಈಗ ರುತುರಾಜ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಸಮಗೊಳಿಸಿದ್ದಾರೆ. ರುತುರಾಜ್ ಕೂಡ 31 ಇನ್ನಿಂಗ್ಸ್ ಗಳಲ್ಲಿ 1000 ರನ್ ಪೂರ್ತಿ ಮಾಡಿದ್ದಾರೆ.
ಸಿಎಸ್ಕೆಯ ಮಾಜಿ ಆಟಗಾರ ಸುರೇಶ್ ರೈನಾ 34 ಇನ್ನಿಂಗ್ಸ್ ಗಳಲ್ಲಿ 1000 ರನ್ ಪೂರೈಸಿದ್ದರು. ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ 35 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮೊದಲ 3 ಸ್ಥಾನಗಳಲ್ಲಿ ಭಾರತೀಯ ಕ್ರಿಕೆಟಿಗರೇ ಇದ್ದಾರೆ ಅನ್ನುವುದು ಮತ್ತೊಂದು ಹೆಮ್ಮೆ.
ಹೈದ್ರಾಬಾದ್ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದ ರುತುರಾಜ್ 99 ರನ್ಗಳಿಸಿ ಔಟಾದರು. ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಬಾರಿಗೆ ರುತುರಾಜ್ ತನ್ನ ನೈಜ ಆಟ ಪ್ರದರ್ಶಿಸಿದ್ದಾರೆ.