IPL 2022- CSK -MSDhoni- ಎಸ್ ಆರ್ ಎಚ್ ಹುಡುಗರಿಗೆ ಧೋನಿ ಮಾಸ್ಟರ್ ಕ್ಲಾಸ್.

ಹಿರಿಯ ಆಟಗಾರರು ಕಿರಿಯ ಆಟಗಾರರಿಗೆ ಸಲಹೆ ಸೂಚನೆ, ಮಾರ್ಗದರ್ಶನ ನೀಡುವುದು ಮಾಮೂಲಿ. ಅದರಲ್ಲೂ ಐಪಿಎಲ್ ನಲ್ಲಿ ಯುವ ಆಟಗಾರರಿಗೆ ಸೀನಿಯರ್ ಪ್ಲೇಯರ್ಸ್ ಟಿಪ್ಸ್ ಕೊಡುತ್ತಿರುವುದನ್ನು ನೋಡಿದ್ದೀರಿ. ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಯುವ ಆಟಗಾರರಿಗೆ ಸಲಹೆ ನೀಡುತ್ತಿದ್ದರು.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಮುಗಿದ ನಂತರ ಎದುರಾಳಿ ತಂಡದ ಯುವ ಆಟಗಾರರು ಮಹೇಂದ್ರ ಸಿಂಗ್ ಧೋನಿಯವರನ್ನು ಸುತ್ತುವರಿಯುತ್ತಾರೆ. ಕ್ರಿಕೆಟ್ ನ ಚಾಣಕ್ಯ ಮಹೇಂದ್ರ ಸಿಂಗ್ ಅತ್ಯಮೂಲ್ಯವಾದ ಸಲಹೆಗಳನ್ನು ನೀಡುತ್ತಾರೆ. IPL 2022- CSK -MSDhoni-SRH youngsters listen attentively to MSD
ಇದಕ್ಕೆ ಹೈದ್ರಬಾದ್ ತಂಡದ ಆಟಗಾರರು ಹೊರತಲ್ಲ. ಐಪಿಎಲ್ ಟೂರ್ನಿಯ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಸ್ ಆರ್ ಎಚ್ ತಂಡವನ್ನು ಸೋಲಿಸಿತ್ತು. ಸಿಎಸ್ ಕೆ ತಂಡವನ್ನು ಮತ್ತೆ ಧೋನಿ ಮುನ್ನಡೆಸಿದ್ದರು. ರವೀಂದ್ರ ಜಡೇಜಾ ನಾಯಕತ್ವವನ್ನು ಮತ್ತೆ ಧೋನಿಯ ಕೈಗೆ ನೀಡಿದ್ದರು. ಇದೀಗ ಸಿಎಸ್ ಕೆ ಧೋನಿ ನಾಯಕತ್ವದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಈ ನಡುವೆ, ಸನ್ ರೈಸರ್ಸ್ ಹೈದ್ರಬಾದ್ ತಂಡದ ಘಾತಕ ವೇಗಿ ಉಮ್ರಾನ್ ಮಲ್ಲಿಕ್ ಅವರು ಧೋನಿ ಜೊತೆಗೆ ಕೆಲವು ಸಮಯ ಕಳೆದ್ರು. ಈ ವೇಳೆ ಧೋನಿ ಮಲ್ಲಿಕ್ ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದರು.
ಹಾಗೇ ಎಸ್ ಆರ್ ಎಚ್ ತಂಡದ ಯುವ ಆಟಗಾರರಿಗೂ ಧೋನಿ ಕ್ರಿಕೆಟ್ ಬಗ್ಗೆ ಕೆಲವೊಂದು ಟೆಕ್ನಿಕ್ ಗಳನ್ನು ಹೇಳಿಕೊಟ್ಟಿದ್ದಾರೆ.

ಇನ್ನೊಂದೆಡೆ ಎಸ್ ಆರ್ ಎಚ್ ತಂಡದ ಬೌಲಿಂಗ್ ಕೋಚ್ ಡೇಯ್ನ್ ಸ್ಟೈನ್ ಅವರು ಧೋನಿಯವರಿಂದ ಆಟೋಗ್ರಾಫ್ ಪಡೆದುಕೊಂಡ್ರೆ, ನಾಯಕ ಕೇನ್ ವಿಲಿಯಮ್ಸನ್ ಅವರು ಧೋನಿಯ ಜೊತೆ ಮಾತುಕತೆ ನಡೆಸಿದ್ದಾರೆ.
ಮತ್ತೊಂದೆಡೆ ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಹಾಗೂ ಎಸ್ ಆರ್ ಎಚ್ ತಂಡದ ವಿಕೆಟ್ ಕೀಪರ್ ನಿಕೊಲಾಸ್ ಪೂರನ್ ಕೂಡ ಧೋನಿಯವರಿಂದ ಸಲಹೆ ಪಡೆದುಕೊಳ್ಳುವುದನ್ನು ಮರೆಯಲಿಲ್ಲ.
ಐಪಿಎಲ್ ನ ಹಿರಿಯ ಆಟಗಾರನಾಗಿರುವ ಧೋನಿ ಮುಂದಿನ ವರ್ಷವೂ ಆಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಧೋನಿಯ ಸಲಹೆ, ಮಾರ್ಗದರ್ಶನ ಪಡೆದುಕೊಂಡ್ರೆ ಆಟಗಾರರಿಗೆ ವರದಾನವಾಗುತ್ತದೆ ಎಂಬುದು ಅಷ್ಟೇ ಸತ್ಯ. ಇದಕ್ಕೆ ಸಾಕ್ಷಿ ಹಲವು ಆಟಗಾರರು ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವುದು. ಧೋನಿಯ ಕ್ರಿಕೆಟ್ ಪಾಠದಲ್ಲಿ ಅಂತಹ ತಾಕತ್ತು ಇದೆ. ಅದಕ್ಕೆ ಧೋನಿ ಯುವ ಕ್ರಿಕೆಟಿಗರಿಗೆ ದಾರಿ ದೀಪ