ಪಾಕ್ ತಂಡದ ನಾಯಕ ಬಾಬರ್ ಅಜಂ ಮತ್ತು ಮೊಹ್ಮದ್ ರಿಜ್ವಾನ್ ಟಿ20 ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳು.
2021ರ ನಂತರ ಅತಿ ಹೆಚ್ಚು ರನ್ ಚೇಸ್ ಮಾಡಿದ ಜೋಡಿ ಎಂದರೆ ಅದು ಮೊಹ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ. ಟಾಪ್ 10 ತಂಡಗಳ ಪೈಕಿ ಇವರಿಬ್ಬರು ಮೊದಲ ಎರಡು ಸ್ಥಾನಗಳಲ್ಲಿ ನಿಲ್ಲುತ್ತಾರೆ.
ಚೇಸಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಮೊಹ್ಮದ್ ರಿಜ್ವಾನ್ 26 ಇನ್ನಿಂಗ್ಸ್ ಗಳಿಂದ 1038 ರನ್ ಗಳಿಸಿದ್ದಾರೆ.
ಎರಡನೆ ಸ್ಥಾನದಲ್ಲಿರುವ ಬಾಬರ್ ಅಜಂ 26 ಇನ್ನಿಂಗ್ಸ್ ಗಳಿಂದ 877 ರನ್ ಕಲೆ ಹಾಕಿದ್ದಾರೆ.
ವೆಸ್ಟ್ಇಂಡೀಸ್ ನ ನಿಕೊಲೊಸ್ ಪೂರಾನ್ ಮೂರನೆ ಸ್ಥಾನದಲ್ಲಿದ್ದು 26 ಇನ್ನಿಂಗ್ಸ್ ಗಳಿಂದ 638 ರನ್ ಕಲೆ ಹಾಕಿದ್ದಾರೆ.
ನಾಲ್ಕನೆ ಸ್ಥಾನದಲ್ಲಿರುವ ಮಿಚೆಲ್ ಮಾರ್ಷ್ 21 ಇನ್ನಿಂಗ್ಸ್ ಗಳಿಂದ 605 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ 18 ಇನ್ನಿಂಗ್ಸ್ ಗಳಿಂದ 573 ರನ್ ಪೇರಿಸಿದ್ದಾರೆ.