ಐಪಿಲ್ ಸೀಸನ್ 16ಕ್ಕೆ ಎಲ್ಲಾ ಐಪಿಎಲ್ ತಂಡಗಳು ತಯಾರಿ ಆರಂಭಿಸಿವೆ. ಈ ಬಾರಿ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟು ಬಲಿಷ್ಠ ತಂಡವನ್ನು ಕಟ್ಟಲು ಪಣ ತೊಟ್ಟಿವೆ. ಆಟಗಾರರನ್ನು ಅಳೆದು ತೂಗಿ ಎಲ್ಲಾ ಫ್ರಾಂಚೈಸಿಗಳು ಆಯ್ಕೆ ಮಾಡುತ್ತಿವೆ.
ಆರ್ಸಿಬಿ ಈ ಬಾರಿ ಕಪ್ ಗೆಲ್ಲಲೇಬೆಂದು ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಒಳ್ಳೆಯ ಆಟಗಾರರನ್ನು ಖರೀದಿ ಮಾಡಲು ಯೋಚಿಸಿದೆ. ಮೂಲಗಳ ಪ್ರಕಾರ ಆರ್ಸಿಬಿ ಯಾರನ್ನು ತಂಡದಿಂದ ಕೈಬಿಡುತ್ತೆ ಯಾರನ್ನು ಉಳಿಸಿಕೊಳ್ಳುತ್ತೆ ಅನ್ನೊದರ ಡಿಟೇಲ್ಸ್ ಇಲ್ಲಿದೆ.
ರಿಟೇನ್ ಆಗಬಹುದಾದ ಆಟಗಾರರು:ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್,ವನಿಂದು ಹಸರಂಗ, ಮೊಹ್ಮದ್ ಸೀರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್
ರಿಲೀಸ್ ಆಗಬಹದಾದ ಆಟಗಾರರು: ಸಿದ್ದಾರ್ಥ್ ಕೌಲ್, ಕರಣ್ ಶರ್ಮಾ, ಡೇವಿಡ್ ವಿಲ್ಲಿ, ಆಕಾಶ್ ದೀಪ್. ಜಾಸನ್ ಬೆಹ್ರೆನ್ ಡ್ರಾಫ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿದೆ.