pakistan – ಅಬ್ಬಾ…. ಐಪಿಎಲ್ ನಲ್ಲಿ ಪಾಕ್ ವೇಗಿ ಶಾಹೀನ್ ಆಫ್ರಿದಿ ಬೆಲೆ 200 ಕೋಟಿಯಂತೆ..!
ಶಾಹೀನ್ ಶಾ ಆಫ್ರೀದಿ.. ಪಾಕಿಸ್ತಾನದ ಮಾರಕ ವೇಗಿ. ಸದಾ ಸುದ್ದಿಯಲ್ಲಿರುವ ಶಾಹೀನ್ ಶಾ ಆಫ್ರೀದಿ ಅವರು ಈಗ ಮತ್ತೊಮ್ಮೆ ಸುದ್ದಿಯ ಆಹಾರವಾಗಿದ್ದಾರೆ.
ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ವಿಕೆಟ್ ಕಬಳಿಸಿ ಹ್ಯಾಟ್ರಿಕ್ ವಿಕೆಟ್ ಪಡೆಯಬೇಕು ಎಂಬ ಹೇಳಿಕೆಯನ್ನು ನೀಡಿದ್ದರು. ಶಾಹೀನ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲ ತಾಣದಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು.
ಇದೀಗ ಅಂತಹುದ್ದೇ ಒಂದು ಸುದ್ದಿ ಹರಿದಾಡುತ್ತಿದೆ. ಅದಕ್ಕೆ ನೆಟ್ಟಿಗರು ತಮಾಷೆ, ಅಪಹಾಸ್ಯ ಮಾಡಿ ಛೇಡಿಸಿದ್ದಾರೆ.
ಆದ್ರೆ ಈ ಬಾರಿ ಹೇಳಿಕೆ ನೀಡಿರುವುದು ಶಾಹೀನ್ ಶಾ ಆಫ್ರಿದಿಯಲ್ಲ. ಬದಲಾಗಿ ಶಾಹೀನ್ ಶಾ ಆಫ್ರಿದಿ ಪರವಾಗಿ ಪಾಕಿಸ್ತಾನದ ಪತ್ರಕರ್ತ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ವಿಚಾರ.
ಅಷ್ಟಕ್ಕೂ ಪಾಕ್ ಪತ್ರಕರ್ತ ಟ್ವಿಟರ್ ನಲ್ಲಿ ಬರೆದುಕೊಂಡಿರುವುದನ್ನು ನೋಡಿದ್ರೆ ಎಂಥವರಿಗೂ ಅಚ್ಚರಿಯಾಗಬಹುದು. ಕನಿಷ್ಠ ಪರಿಜ್ಞಾನ ಇಲ್ಲದೆ ತನ್ನ ದೇಶದ ಕ್ರಿಕೆಟಿಗನ ಪರವಾಗಿ ಈ ರೀತಿ ಬರೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೂಡ ಮೂಡುತ್ತದೆ.
ಅಷ್ಟಕ್ಕೂ ಪಾಕ್ ಪತ್ರಕರ್ತ ಇಸ್ತಿಶಾಮ್ ಉಲ್ ಹಕ್ ತನ್ನ ಟ್ವಿಟರ್ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಒಂದು ವೇಳೆ ಶಾಹೀನ್ ಶಾ ಆಫ್ರಿದಿ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗಿಯಾಗುತ್ತಿದ್ರೆ 200 ಕೋಟಿ ರೂಪಾಯಿಗೆ ಹರಾಜು ಆಗುತ್ತಿದ್ದರು.
ಅಬ್ಬಾ 200 ಕೋಟಿ ಅಂದ್ರೆ ತಮಾಷೆನಾ ? 200 ಕೋಟಿಗೆ ಎಷ್ಟು ಸೊನ್ನೆಗಳಿವೆ ಎಂಬುದಾದ್ರೂ ಗೊತ್ತಿದೆಯಾ ? ಪಾಕಿಸ್ತಾನದ ಜಿಡಿಪಿ ಇಷ್ಟಿದೆಯಾ ? ಪಿಸಿಬಿಯ ಬೊಕ್ಕಸದಲ್ಲಿ ಇಷ್ಟು ಮೊತ್ತದ ಹಣವಿದೆಯಾ ? ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಯಾಕೆ ಇಷ್ಟೊಂದು ಮೊತ್ತದ ಹಣವನ್ನು ನೀಡಿಲ್ಲ ? ಹೀಗೆ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೆಟ್ಟಿಗರು ನೀಡಿದ್ದಾರೆ.
ಇನ್ನೊಂದೆಡೆ ಪಾಕ್ ಪತ್ರಕರ್ತನಿಗೆ ಐಪಿಎಲ್ ಬಿಡ್ಡಿಂಗ್ ಬಗ್ಗೆ ಸ್ವಲ್ಪನಾದ್ರೂ ಮಾಹಿತಿಯಾದ್ರೂ ಇದೆಯಾ ? ಇಲ್ಲಿ ಪ್ರತಿ ತಂಡಗಳು 90 ಕೋಟಿ ರೂಪಾಯಿ ಮಾತ್ರ ಆಟಗಾರರಿಗೆ ಖರ್ಚು ಮಾಡಬೇಕು ಎಂಬ ನಿಯಮವಿದೆ. ಬಹುಶಃ ಪಾಕ್ ಪತ್ರಕರ್ತ ಇಸ್ತಿಶಾಮ್ ಉಲ್ ಹಕ್ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅನ್ಸುತ್ತೆ. ಪಿಎಸ್ ಎಲ್ ನಲ್ಲಿ ಈ ರೀತಿಯ ನಿಯಮಗಳು ಇಲ್ಲ ಅಂತ ಕಾಣುತ್ತೆ. Rs 200 crore for Shaheen Afridi at IPL auction?
ಅದೇನೇ ಇರಲಿ, ಶಾಹೀನ್ ಶಾ ಆಫ್ರಿದಿ ಅದ್ಭುತ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ಈ ರೀತಿ ಹೇಳಿಕೊಳ್ಳುವುದು ಸಮಂಜಸವಲ್ಲ. ಎಲ್ಲದಕ್ಕೂ ಒಂದು ಮೀತಿ ಅಂತ ಇರುತ್ತೆ. ನೆನಪಿಡಿ. ಒಬ್ಬ ಶ್ರೇಷ್ಠ ಕ್ರಿಕೆಟಿಗ ತಮ್ಮನ್ನು ತಾವೇ ಬಿಂಬಿಸಿಕೊಳ್ಳುವುದಿಲ್ಲ. ಸೈಲೆಂಟಾಗಿ ಎಲ್ಲದಕ್ಕೂ ಉತ್ತರ ನೀಡ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.