ಐಪಿಎಲ್ನಲ್ಲಿ ಇದು ನಾಕಾಟ್ ಮ್ಯಾಚ್. ಇಲ್ಲಿ ಗೆದ್ದವರು ಫೈನಲ್ ಸ್ಥಾನಕ್ಕಾಗಿ ಕ್ವಾಲಿಫೈಯರ್ 2ರಲ್ಲಿ ಆಡಲಿದ್ದಾರೆ. ಸೋತವರು ಪ್ಯಾಕಪ್ ಮಾಡಿ ಮನೆಗೆ ತೆರಳಿದ್ದಾರೆ. ಹೀಗಾಗಿ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿದೆ.
ಲಖನೌ ಸೂಪರ್ ಜೈಂಟ್ಸ್ ಟೂರ್ನಿಯ ಆರಂಭದಲ್ಲಿ ತೋರಿದ ಸ್ಥಿರತೆಯನ್ನು 2ನೇ ಭಾಗದಲ್ಲಿ ತೋರಿಸಿಲ್ಲ. ಹೀಗಾಗಿ ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದೃಷ್ಟದ ಮೇಲೆ ಪ್ಲೇ-ಆಫ್ ಪ್ರವೇಶಿಸಿದೆ. ಹೀಗಾಗಿ ಎರಡು ತಂಡಗಳ ನಡುವೆ ಹೆಚ್ಚು ಅಂತರವಿಲ್ಲ.
ರಾಯಲ್ ಚಾಲೆಂಜರ್ಸ್ ತಂಡದ ಕಾಂಬಿನೇಷನ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ವಿರಾಟ್ ಕೊಹ್ಲಿ ಸೀಸನ್ ಉದ್ದಕ್ಕೂ ವೈಫಲ್ಯ ಕಂಡರೂ, ಕೊನೆಯ ಪಂದ್ಯದಲ್ಲಿ ಮಿಂಚಿದ್ದಾರೆ. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸ್ಥಿರ ಆಟ ಆಡಿಲ್ಲ. ಇಷ್ಟಾದರೂ ಟಾಪ್ ಆರ್ಡರ್ ಮೇಲೆ ನಂಬಿಕೆ ಇದೆ. ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೊರ್ ಕೂಡ ಕೈ ಜೋಡಿಸಬೇಕಿದೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಫಿನಿಷಿಂಗ್ ಟಚ್ ಕೊಡಬಲ್ಲರು
ಬೌಲಿಂಗ್ನಲ್ಲಿ ಆರ್ಸಿಬಿ ಕೊಂಚ ವಿಶ್ವಾಸ ಹೆಚ್ಚಿಸಿದೆ. ಜೋಶ್ ಹ್ಯಾಜಲ್ವುಡ್ ಮತ್ತು ವನಿಂದು ಹಸರಂಗ ಉತ್ತಮ ಫಾರ್ಮ್ ತೋರಿಸಿದ್ದಾರೆ. ಆದರೆ ಸಿರಾಜ್ ಆಟ ಇಂಪ್ರೆಸ್ಸಿವ್ ಇಲ್ಲ. ಹರ್ಷಲ್ ಪಟೇಲ್ ಫಿಟ್ನೆಸ್ ಪ್ರಶ್ನೆಯಲ್ಲಿದೆ. ಮ್ಯಾಕ್ಸ್ ವೆಲ್, ಶಹಬಾಸ್ ಮತ್ತು ಲೊಮ್ರೊರ್ ಬೌಲಿಂಗ್ ಮಾಡುವ ತಾಕತ್ತು ಹೊಂದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿಕಾಕ್ ಎದುರಾಳಿ ಬೌಲರ್ಗಳನ್ನು ಚಚ್ಚಿ ಬಿಸಾಡಿದ್ದಾರೆ. ದೀಪಕ್ ಹೂಡ ಎಲ್ಲಾ ಪೊಸಿಷನ್ ನಲ್ಲೂ ಮಿಂಚಿದ್ದಾರೆ. ಕೃನಾಲ್ ಪಾಂಡ್ಯಾ, ಮಾರ್ಕಸ್ ಸ್ಟೋಯ್ನಿಸ್ ಮತ್ತು ಆಯುಷ್ ಬಡೋನಿ ಕಡೆಯಿಂದ ಹೆಚ್ಚು ಕೊಡುಗೆ ಬಂದಿಲ್ಲ. ಜೇಸನ್ ಹೋಲ್ಡರ್ ಬ್ಯಾಟಿಂಗ್ ಮರೆತಂತಿದೆ.
ಲಖನೌ ಬೌಲಿಂಗ್ ಲೈನ್ ಚೆನ್ನಾಗಿದೆ. ದುಷ್ಮಂತ್ ಚಾಮಿರಾ, ಆವೇಶ್ ಖಾನ್, ಹೋಲ್ಡರ್ ಮತ್ತು ಮೌಸಿನ್ ಖಾನ್ ವೇಗದ ಬೌಲಿಂಗ್ನಲ್ಲಿ ಮಿಂಚುತ್ತಿದ್ದಾರೆ. ರವಿ ಬಿಷ್ಣೋಯಿ ಸ್ಪಿನ್ ಯಶ ಸಾಧಿಸಿದೆ. ಕೃನಾಲ್ ಪಾಂಡ್ಯಾ ಮತ್ತು ಸ್ಟೋಯ್ನಿಸ್ ಬೌಲಿಂಗ್ ಆಯ್ಕೆಯೂ ಇದೆ.
ಈಡನ್ ಗಾರ್ಡನ್ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳು ಬೌಲರ್ಗಳ ಮೇಲೆ ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ಬ್ಯಾಟರ್ ಗಳ ಆಟ ನಿರ್ಣಾಯಕ.