ಆರ್ಸಿಬಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗುತ್ತಿದೆ. ಕಪ್ ನಮ್ದೇ ಅನ್ನುವುದು ಹೆಚ್ಚು ಸದ್ದು ಮಾಡದೇ ಇದ್ದರೂ, ಕಪ್ ಎತ್ತಬಹುದು ಅನ್ನುವ ಲೆಕ್ಕಾಚಾರವಿದೆ. ಈ ನಡುವೆ ನಾಕೌಟ್ ಮ್ಯಾಚ್ಗೂ ಮುನ್ನ ಹಲವು ಲೆಕ್ಕಾಚಾರಗಳು ನಡೆಯುತ್ತಿದೆ. ಅಂಕಿಅಂಶಗಳ ಪಂಚ್ ರೋಚಕವಾಗಿದೆ.
- ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಈ ಟೂರ್ನಿಯಲ್ಲಿ ಆಧಾರವಾಗಿ ನಿಂತಿರುವುದು ನಾಯಕ ರಾಹುಲ್. ಅನುಭವಿ ಕ್ವಿಂಟಾನ್ ಡಿ ಕಾಕ್ ಮತ್ತು ದೀಪಕ್ ಹೂಡ. ರಾಹುಲ್ 537 ರನ್ಗಳಿಸಿದರೆ, ಡಿ ಕಾಕ್ 502 ರನ್ಗಳಿಸಿದ್ದಾರೆ. ಹೂಡ 406 ರನ್ಗಳ ಕೊಡುಗೆ ನೀಡಿದ್ದಾರೆ. ಆದರೆ ಉಳಿದ ಬ್ಯಾಟ್ಸ್ ಮನ್ಗಳು ಕೇವಲ 17.2 ಸರಾಸರಿಯಲ್ಲಿ 789 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಲಖನೌ ತಂಡದ ಎರಡು ವಿಕೆಟ್ ಉರುಳಿದರೆ ಮ್ಯಾಚ್ ಆರ್ಸಿಬಿ ಪಾಲಾಗುತ್ತದೆ ಅನ್ನುವ ಮಾತಿದೆ.
- ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಸೂಪರ್ ಜೈಂಟ್ಸ್ ಬೌಲಿಂಗ್ನಲ್ಲಿ 96 ವಿಕೆಟ್ ಪಡೆದ ಏಕೈಕ ತಂಡವಾಗಿದೆ. ಲೀಗ್ ಪಂದ್ಯಗಳಲ್ಲಿ ಲಖನೌ 17.1ರ ಸ್ಟ್ರೈಕ್ ರೇಟ್ನಲ್ಲಿ ವಿಕೆಟ್ ಪಡೆದು ಡೇಂಜರಸ್ ತಂಡವಾಗಿ ಕಾಣಿಸಿದೆ.
- ಟಿ-20 ಕ್ರಿಕೆಟ್ನಲ್ಲಿ ಮ್ಯಾಕ್ಸ್ವೆಲ್ ರಾಹುಲ್ಗೆ 23 ಎಸೆತಗಳಲ್ಲಿ 23ರನ್ ಮಾತ್ರ ಕೊಟಟಿದ್ದಾರೆ. ಅಷ್ಟೇ ಅಲ್ಲ 2 ಬಾರಿ ಔಟ್ ಕೂಡ ಮಾಡಿದ್ದಾರೆ. ಹೀಗಾಗಿ ಆರ್ಸಿಬಿ ಮ್ಯಾಕ್ಸ್ವೆಲ್ ಕೈಯಿಂದ ಬೌಲಿಂಗ್ ಆರಂಭಿಸಿದರೂ ಅಚ್ಚರಿ ಇಲ್ಲ.
- ಕೃನಾಲ್ ಪಾಂಡ್ಯಾ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಪಾಲಿಗೆ ಕಂಟಕವಾದ ಇತಿಹಾಸ ಇದೆ. ಮ್ಯಾಕ್ಸಿ 4 ಬಾರಿ ಕೃನಾಲ್ಗೆ ಔಟಾದರೆ, ದಿನೇಶ್ ಕಾರ್ತಿಕ್ 2 ಬಾರಿ ಔಟ್ ಆಗಿದ್ದಾರೆ.
- ಈಡನ್ ಗಾರ್ಡನ್ನಲ್ಲಿ ಕಳೆದ 4 ವರ್ಷಗಳಲ್ಲಿ 16 ಐಪಿಎಲ್ ಪಂದ್ಯಗಳು ನಡೆದಿವೆ. ಟಾಸ್ ಗೆದ್ದ ಎಲ್ಲಾ ನಾಯಕರು ಬೌಲಿಂಗ್ ಆರಿಸಿಕೊಂಡಿದ್ದಾರೆ. ಈ ಪೈಕಿ 9 ರಲ್ಲಿ ಟಾಸ್ ಗೆದ್ದವರು ಜಯ ಪಡೆದಿದ್ದಾರೆ. 2018ರಿಂದ ಈಚೆಗೆ ಈಡನ್ ಗಾರ್ಡನ್ನಲ್ಲಿ ಸರಾಸರಿ ಮೊತ್ತ 183.
- ಆರ್ಸಿಬಿ ಈ ಬಾರಿಯ ಐಪಿಎಲ್ನಲ್ಲಿ ಎದುರಾಳಿಗಳಿಗೆ 123 ಸಿಕ್ಸರ್ ಬಿಟ್ಟುಕೊಟ್ಟಿದೆ. ಈಡನ್ ಗಾರ್ಡನ್ನಲ್ಲಿ ಪ್ರತೀ ಪಂದ್ಯದಲ್ಲಿ ಸರಾಸರಿ 17 ಸಿಕ್ಸರ್ ಸಿಡಿದ ದಾಖಲೆ ಇದೆ.
- ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ನ ಬೆಸ್ಟ್ ಫಿನಿಷರ್. ಕಾರ್ತಿಕ್ ಡೆತ್ ಓವರುಗಳಲ್ಲಿ 226.37ಸ್ಟ್ರೈಕ್ ರೇಟ್ ಹೊಂದಿದ್ದಾರೆ.