ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಿದ್ದು ಗೊತ್ತೇ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ಲೇ-ಆಫ್ ಮತ್ತು ಫೈನಲ್ ಮಿಸ್ ಮಾಡಿಕೊಂಡಿದ್ದು ಅಪರೂಪ. ಆರ್ ಸಿಬಿ ಕಪ್ ಗೆಲ್ಲದೆ ಪರದಾಡುತ್ತಿದೆ. ಅಚ್ಚರಿ ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ ಹಂತವನ್ನು ಹಲವು ಬಾರಿ ತಲುಪಿದೆ. ಆದರೆ ಕೊನೆಯಲ್ಲಿ ಎಡವಿದ್ದು ಆರ್ ಸಿಬಿಯನ್ನು ಕಪ್ಗಾಗಿ ಪರದಾಡುವಂತೆ ಮಾಡಿದೆ.
ಈ ಬಾರಿ ಕಪ್ ನಮ್ದೆ ಅಂತ ಪ್ರತೀ ವರ್ಷವೂ ಆರ್ಸಿಬಿ ಅಭಿಮಾನಿಗಳು ಘಂಟಾಘೋಷವಾಗಿ ಹೇಳುತ್ತಾರೆ. 8ನೇ ಬಾರಿಗೆ ಪ್ಲೇ-ಆಫ್ ತಲುಪಿರುವ ಆರ್ಸಿಬಿಗೆ ಎಲಿಮಿನೇಟರ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುವ ಈ ಪಂದ್ಯ ಆರ್ಸಿಬಿಯ ಫೈನಲ್ ಎಂಟ್ರಿಗೆ ಮತ್ತೊಂದು ಹೆಜ್ಜೆ.
ಆರ್ಸಿಬಿ ಫೈನಲ್ ಎಂಟ್ರಿ ಪಡೆಯಬೇಕಾದರೆ ಇನ್ನೂ ಎರಡು ಪಂದ್ಯ ಗೆಲ್ಲಬೇಕು. ಎಲಿಮಿನೇಟರ್ನಲ್ಲಿ ಲಖನೌ ಸವಾಲು ಗೆದ್ದ ಮೇಲೆ, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್ನಲ್ಲಿ ಸೋತ ತಂಡ ಎದುರಾಗಲಿದೆ. ಇಲ್ಲಿ ಗೆದ್ದರೆ ಮಾತ್ರ ಫೈನಲ್ ಸ್ತಾನ ಪಕ್ಕಾ. ಅಂದಹಾಗೇ, ಆರ್ಸಿಬಿ 8 ಸೀಸನ್ಗಳಲ್ಲಿ ಪ್ಲೇ-ಆಫ್ ತಲುಪಿದ 3ನೇ ತಂಡ ಮುಂಬೈ ಮತ್ತು ಚೆನ್ನೈ ಈ ಸಾಧನೆ ಮಾಡಿದ ಮೊದಲ 2 ತಂಡಗಳಾಗಿವೆ.
ಆರ್ಸಿಬಿ ಪ್ಲೇ-ಆಫ್ ಲೆಕ್ಕ
ವರ್ಷ ಸ್ಥಾನ
2009 ರನ್ನರ್ ಅಪ್
2010 ಪ್ಲೇ-ಆಫ್
2011 ರನ್ನರ್ ಅಪ್
2015 ಪ್ಲೇ-ಆಫ್
2016 ರನ್ನರ್ ಅಪ್
2020 ಪ್ಲೇ-ಆಫ್
2021 ಪ್ಲೇ-ಆಫ್
2022 ಪ್ಲೇ-ಆಫ್