Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ರಾಯಲ್ಸ್​​​​​​​  ಬ್ಯಾಟಲ್​​ನಲ್ಲಿ ಯಾರಿಗೆ ಫೈನಲ್​​ ಸ್ಥಾನ..? ರಾಜಸ್ಥಾನ, ಬೆಂಗಳೂರಿಗೆ ನಾಕೌಟ್​​ ಮ್ಯಾಚ್​​

May 27, 2022
in Cricket, ಕ್ರಿಕೆಟ್
IPL 2022: ರಾಯಲ್ಸ್​​​​​​​  ಬ್ಯಾಟಲ್​​ನಲ್ಲಿ ಯಾರಿಗೆ ಫೈನಲ್​​ ಸ್ಥಾನ..? ರಾಜಸ್ಥಾನ, ಬೆಂಗಳೂರಿಗೆ ನಾಕೌಟ್​​ ಮ್ಯಾಚ್​​

RCB VS RR

Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ಯಾರೂ ಅಂದುಕೊಳ್ಳದೇ ಇರುವುದು ನಡೆಯುವುದು ಸಾಮಾನ್ಯ. ಮೊದಲಿಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಪ್ಲೇ-ಆಫ್​​ ಲೆಕ್ಕಾಚಾರದಲ್ಲಿ ಇರಲೇ ಇಲ್ಲ. ಮುಂಬೈ-ಡೆಲ್ಲಿ ಮ್ಯಾಚ್​​ ಮತ್ತು ಇತರೆ ಪಂದ್ಯಗಳಲ್ಲಿ ಅಂದುಕೊಂಡ ಫಲಿತಾಂಶ ಬಾರದೇ ಇದ್ದಿದ್ದು ಆರ್​​ಸಿಬಿಗೆ ಬೋನಸ್​​ ಆಯಿತು. ಎಲಿಮಿನೇಟರ್​​ನಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಆರ್​​ಸಿಬಿ ಲಕ್ನೋ ಸೂಪರ್​​ ಜೈಂಟ್ಸ್​​ಗೆ  ಶಾಕ್​​ ನೀಡಿ ಕ್ವಾಲಿಫೈಯರ್​​ 2 ಪ್ರವೇಶಿಸಿದೆ. ಈಗ ಫೈನಲ್​​ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್​​ ವಿರುದ್ಧ ಆಡಲಿದೆ.

ಆರ್​​ಸಿಬಿ ಪ್ಲೇ-ಆಫ್​​ನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್​​ ಶಕ್ತಿ ಹೆಚ್ಚಿದೆ. ವಿರಾಟ್​​, ಫಾಫ್​​ ಮತ್ತು ಗ್ಲೆನ್​​ ಮ್ಯಾಕ್ಸ್​​ವೆಲ್​​​ ಬ್ಯಾಟ್​​ನಿಂದ ಬಾಕಿ ಇರುವ ಇನ್ನಿಂಗ್ಸ್​​ ಬಂದರೆ ಎಲ್ಲಾ ಲೆಕ್ಕ ಚುಕ್ತಾ ಆಗಲಿದೆ. ರಜತ್​ ಪಾಟೀದಾರ್​​​ ಬೆಂಗಳೂರು ಪಾಲಿಗೆ ಚಿನ್ನದ ಹುಡುಗ. ಮಹಿಪಾಲ್​​ ಲೊಮ್ರೊರ್​ ಮತ್ತು ದಿನೇಶ್​​ ಕಾರ್ತಿಕ್​​ ಬಲದ ಬಗ್ಗೆ ಗೊತ್ತಿದೆ. ಶಹಬಾಸ್​​ ಅಹ್ಮದ್​​ ಟೀಮ್​​ ಮ್ಯಾನ್​​​.

ಬೌಲಿಂಗ್​​ನಲ್ಲಿ ಸಮಸ್ಯೆ ದೂರವಾದಂತಿದೆ. ಜೋಶ್​​ ಹ್ಯಾಜಲ್​​ವುಡ್​​ ಎಂದಿನ ಲಯದಲ್ಲಿದ್ದಾರೆ. ಮೊಹಮ್ಮದ್​​ ಸಿರಾಜ್​​ ಬಿಗ್​​ ಮ್ಯಾಚ್​ ಪ್ಲೇಯರ್​​. ಹರ್ಷಲ್​​ ಪಟೇಲ್​​​ ಮತ್ತು ವನಿಂದು ಹಸರಂಗ ವಿಕೆಟ್​ ಬೇಟೆಯಲ್ಲಿದ್ದಾರೆ. ಮ್ಯಾಕ್ಸಿ, ಲೊಮ್ರೊರ್​​ ಮತ್ತು ಶಹಬಾಸ್​​​ 5ನೇ ಬೌಲರ್​​ ಕೆಲಸ ಮಾಡುತ್ತಿದ್ದಾರೆ.

Screenshot 20220526 071830

ರಾಜಸ್ಥಾನ ರಾಯಲ್ಸ್​ ಮೊದಲ ಕ್ವಾಲಿಫೈಯರ್​​ನಲ್ಲಿ ಗುಜರಾತ್​​ ವಿರುದ್ಧ ಸೋತು ಈಗ ಫೈನಲ್​​ಗೇರುವ 2ನೇ ಅವಕಾಶದಲ್ಲಿ ಆಡುತ್ತಿದೆ. ಆರ್​​. ಆರ್​. ಬ್ಯಾಟಿಂಗ್​ ಬಗ್ಗೆ ಮಾತಿಲ್ಲ. ಜೋಸ್​​ ಬಟ್ಲರ್​​​​ ಒಬ್ಬರೇ ಎಲ್ಲಾ ಕೆಲಸ ಮಾಡಿ ಮುಗಿಸಬಲ್ಲರು. ಯಶಸ್ವಿ ಜೈಸ್ವಾಲ್​​ ಮತ್ತು ಸಂಜು ಸ್ಯಾಮ್ಸನ್​​ ಕೂಡ ಲಯದಲ್ಲಿದ್ದಾರೆ. ಪಡಿಕಲ್​​ ಮತ್ತು ಹೆಟ್ಮಯರ್​​​​​​​ ಆಟ ನಿರ್ಣಾಯಕ. ಅಶ್ವಿನ್​​ ಆಲ್​​ರೌಂಡರ್​. ರಿಯಾನ್​​ ಪರಾಗ್​​​ ಆಟದ ಝಲಕ್​​ ಸಿಕ್ಕಿದೆ.

ಟ್ರೆಂಟ್​​ ಬೋಲ್ಟ್​​ ಬೌಲಿಂಗ್​​ ವಿಭಾಗದ ನಾಯಕನಾದರೂ ಹೆಚ್ಚು ರನ್​ ಕೊಡುತ್ತಿದ್ದಾರೆ. ಪ್ರಸಿಧ್​ ಕೃಷ್ಣ ಮತ್ತು ಕುಲ್​​ದೀಪ್​​ ಸೇನ್​​​​​​​​ ಗುಜರಾತ್​​ ವಿರುದ್ಧ ಮುಗ್ಗರಿಸಿದ್ದರು. ಅಶ್ವಿನ್​​ ಮತ್ತು ಚಹಲ್​​ ಜೋಡಿ ವಿಕೆಟ್​ ಎತ್ತಿ ರನ್​​ಗೆ ಕಡಿವಾಣ ಹಾಕಿದೆ.

ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣ ಸ್ಪಿನ್​​ ಬೌಲರ್​​ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ದೊಡ್ಡ ಮೊತ್ತದ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

 

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022RCBRR
ShareTweetSendShare
Next Post
IPL 2022: ಹಸರಂಗ -ಸ್ಯಾಮ್ಸನ್​​ ಫೈಟ್​​, ಕಾರ್ತಿಕ್​​ಗೆ ಚಹಲ್​​ ಅಸ್ತ್ರ, ಇದು ನಾಕೌಟ್​​ ಮ್ಯಾಚ್​ ಗೇಮ್​​ಪ್ಲಾನ್​​

IPL 2022: ಹಸರಂಗ -ಸ್ಯಾಮ್ಸನ್​​ ಫೈಟ್​​, ಕಾರ್ತಿಕ್​​ಗೆ ಚಹಲ್​​ ಅಸ್ತ್ರ, ಇದು ನಾಕೌಟ್​​ ಮ್ಯಾಚ್​ ಗೇಮ್​​ಪ್ಲಾನ್​​

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram