ಇದು ಎರಡೂ ತಂಡಗಳಿಗೂ ಮಾಡು ಇಲ್ಲವೆ ಮಡಿ ಪಂದ್ಯ. ಇಲ್ಲಿ ಗೆದ್ದರೆ ಕಪ್ ಎತ್ತು ಕನಸು ಉಳಿಯಲಿದೆ. ಸೋತರೆ ಮನೆಗೆ ನಡೆಯುವುದು ಪಕ್ಕಾ. ಹೀಗಾಗಿ ಆರ್‍ಸಿಬಿ ಮತ್ತು ಆರ್ಆರ್ ನಡುವಿನ ಕ್ವಾಲಿಫೈಯರ್-2ರಲ್ಲೂ ಸಾಕಷ್ಟು ರಣತಂತ್ರಗಳು ಅಡಗಿವೆ. ಲೆಕ್ಕಾಚಾರಗಳು ನಿಂತಿವೆ.
ಹಸರಂಗ ಮತ್ತು ಸಂಜುಸ್ಯಾಮ್ಸನ್ ನಡುವಿನ ಫೈಟ್ ಸಖತ್ ಇಂಟರೆಸ್ಟಿಂಗ್ ಇದೆ. ಆರ್‍ಸಿಬಿ ಲೆಗ್ಗಿ ಸಂಜು ರನ್ನು 6 ಇನ್ನಿಂಗ್ಸ್ಗಳಲ್ಲಿ 5ಬಾರಿ ಔಟ್ ಮಾಡಿದ್ದಾರೆ. ಸ್ಯಾಮ್ಸನ್ ವಿರುದ್ಧ ಸಿರಾಜ್ ಕೂಡ ಮೇಲುಗ ಸಾಧಿಸಿದ್ದಾರೆ. ಸಿರಾಜ್ ಕೂಡ ಎರಡು ಬಾರಿ ಔಟ್ ಮಾಡಿದ್ದಾರೆ. ಹೀಗಾಗಿ ಸ್ಯಾಮ್ಸನ್ ವಿರುದ್ಧ ಎರಡೆರಡು ಅಸ್ತ್ರವನ್ನು ಆರ್‍ಸಿಬಿ ಬಳಸಿಕೊಳ್ಳಬಹುದು.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2021ರಿಂದ ಈಚೆಗೆ ಒಟ್ಟು 17 ಪಂದ್ಯಗಳು ನಡೆದಿವೆ. 6 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದರೆ, 11 ಪಂದ್ಯಗಳಲ್ಲಿ ಚೇಸಿಂಗ್ ಟೀಮ್ ಗೆದ್ದಿದೆ.
ಯಜುವೇಂದ್ರ ಚಹಲ್ ದಿನೇಶ್ ಕಾರ್ತಿಕ್ರನ್ನು 10 ಇನ್ನಿಂಗ್ಸ್ಗಳಲ್ಲಿ 3 ಬಾರಿ ಔಟ್ ಮಾಡಿದ್ದಾರೆ. ಚಹಲ್ ವಿರುದ್ಧ ಕಾರ್ತಿಕ್ ಕೇವಲ 12.66 ಸರಾಸರಿ ಹೊಂದಿದ್ದಾರೆ.
ಪ್ರಸಿಧ್ ಕೃಷ್ಣ ಆರಂಭದ 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಆಗ ಅವರ ಎಕಾನಮಿ 7.8 ಇತ್ತು. ನಂತರ 7 ಪಂದ್ಯಗಳಲ್ಲಿ ಕೃಷ್ಣ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದಾರೆ. ಎಕಾನಮಿ ರೇಟ್ 9ಕ್ಕೇರಿದೆ.
ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್ನಲ್ಲಿ ಬೆಸ್ಟ್ ಸ್ಪಿನ್ ದಾಳಿ ಹೊಂದಿದೆ. ರಾಯಲ್ಸ್ ಸ್ಪಿನ್ ಮೂಲಕ 38 ವಿಕೆಟ್ ಪಡೆದಿದ್ದರೆ, ಆರ್‍ಸಿಬಿ 35 ವಿಕೆಟ್ ಪಡೆದಿದೆ.