Rishab pant – ಚಂಚಲ ಮನಸ್ಥಿತಿಯ ಹುಡುಗ …!

ರಿಷಬ್ ಪಂತ್… 24 ಹರೆಯದ ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್. ಈಗಾಗಲೇ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಅನಾರವಣಗೊಳಿಸಿರುವ ರಿಷಬ್ ಪಂತ್ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಖಾಯಂಗೊಳಿಸುವ ಸೂಚನೆಯನ್ನು ನೀಡುತ್ತಿದ್ದಾರೆ.
ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಭವಿಷ್ಯದ ನಾಯಕ ಅಂತನೇ ಬಿಂಬಿಸಲಾಗುತ್ತಿದೆ. ಈಗಾಗಲೇ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ರಿಷಬ್ ಪಂತ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆದ್ರೆ ರಿಷಬ್ ಪಂತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿಯೇ ಪಂತ್ ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ.
ಅಂದ ಹಾಗೇ, ರಿಷಬ್ ಪಂತ್ ಮ್ಯಾಚ್ ವಿನ್ನರ್ ಎಂಬುದರಲ್ಲಿ ಎರಡು ಮಾತಿಲ್ಲ. ಏಕಾಂಗಿಯಾಗಿಯೇ ಪಂದ್ಯದ ಗತಿಯನ್ನೇ ಬದಲಾಯಿಸುವಂತಹ ತಾಕತ್ತು ಪಂತ್ ಗಿದೆ. ಅದನ್ನು ಈಗಾಗಲೇ ಸಾಬಿತುಪಡಿಸಿದ್ದಾರೆ. ಎದುರಾಳಿ ಯಾವುದೇ ತಂಡವಿರಲಿ, ಯಾರೇ ಬೌಲರ್ ಇರಲಿ. ಪಂತ್ ಕ್ಯಾರೇ ಅನ್ನೊಲ್ಲ. ಹೊಡಿಬಡಿ ಆಟದ ಜೊತೆಗೂ ತಾಳ್ಮೆಯ ಆಟವನ್ನೂ ಆಡ್ತಾರೆ. ಆದ್ರೆ ಯಾವಾಗ ಹೇಗೆ ಆಡ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಪರಿಸ್ಥಿತಿಯನ್ನು ಅರಿತುಕೊಂಡು ಅಡುವ ಕಲೆ ಗೊತ್ತಿದ್ರೂ ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಳ್ಳುತ್ತಿರುವುದು ರಿಷಬ್ ಪಂತ್ ಗೆ ರೂಢಿಯಾಗಿಬಿಟ್ಟಿದೆ.
ಯಾರು ಎಷ್ಟೇ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ರೂ ರಿಷಬ್ ಪಂತ್ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸುತ್ತಾರೆ. ಸುಖಾ ಸುಮ್ಮನೆ ವಿಕೆಟ್ ಕೈಚೆಲ್ಲಿಕೊಂಡು ನಿರಾಸೆ ಅನುಭವಿಸುತ್ತಾರೆ. ಇದು ರಿಷಬ್ ಪಂತ್ ಅವರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಅಷ್ಟಕ್ಕೂ ರಿಷಬ್ ಪಂತ್ ಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಆದ್ರೆ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ರಿಷಬ್ ಪಂತ್ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಪಂಡಿತರು ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಾರೆ. ಆದ್ರೆ ಕ್ಷಣ ಮಾತ್ರದಲ್ಲಿ ಮನಸ್ಸು ಬದಲಾಯಿಸುವ ಚಂಚಲ ಮನಸ್ಥಿತಿಯಿಂದ ತನ್ನ ಅದ್ಭುತ ಕ್ರಿಕೆಟ್ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಭಾವನೆ ಕೂಡ ಮೂಡುತ್ತಿದೆ. Rishab pant -We are changing our views and opinions about him every other day

ಒಂದು ರೀತಿಯಲ್ಲಿ ರಿಷಬ್ ಪಂತ್ ಅವರ ಬ್ಯಾಟಿಂಗ್ ಅನ್ನು ಮೆಚ್ಚಿಕೊಳ್ಳಬೇಕೋ… ಅಥವಾ ಟೀಕೆ ಮಾಡಬೇಕೋ ಅನ್ನೋ ಗೊಂದಲಗಳು ಮೂಡುತ್ತಿವೆ. ಯಾಕಂದ್ರೆ ಒಂದು ಇನಿಂಗ್ಸ್ ನಲ್ಲಿ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟಿಂಗ್ ಮಾಡ್ತಾರೆ. ಹಾಗೆ ನಂತರದ ಪಂದ್ಯದಲ್ಲಿ ಕೆಟ್ಟದಾಗಿ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಹಿಂತಿರುಗುತ್ತಾರೆ. ಹೀಗಾಗಿ ರಿಷಬ್ ಪಂತ್ ಅವರ ಬ್ಯಾಟಿಂಗ್ ಮೇಲೆ ನಂಬಿಕೆ ಇಡೋದು ಕಷ್ಟವಾಗುತ್ತಿದೆ.
ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್ ಅವರು ಇನ್ನೂ ಸುಧಾರಿಸಿಕೊಂಡಿಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ಪಂತ್ ತನ್ನ ಬ್ಯಾಟಿಂಗ್ ಸುಧಾರಣೆ ಮಾಡಿಕೊಳ್ಳುವತ್ತ ಖಡಕ್ ವಾರ್ನಿಂಗ್ ಅನ್ನು ನೀಡಲೇಬೇಕು. ಅಲ್ಲದೆ ರಿಷಬ್ ಪಂತ್ ಜವಾಬ್ದಾರಿಯನ್ನು ಅರಿತುಕೊಂಡು ಬ್ಯಾಟ್ ಬೀಸಬೇಕು. 21 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹಾಗಂತ ಕೆಟ್ಟ ಆಟವನ್ನು ಆಡಿಲ್ಲ. ಆದ್ರೆ ನಾಲ್ಕನೇ ಕ್ರಮಾಂಕದಲ್ಲಿ ಆಡುವಾಗ ಎಚ್ಚರಿಕೆಯಿಂದ ಆಡಿಕೊಂಡು ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುವಂತಹ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕಿದೆ. ಒಂದು ವೇಳೆ ರಿಷಬ್ ಪಂತ್ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಆಡಿದ್ರೆ ಭವಿಷ್ಯದ ಟೀಮ್ ಇಂಡಿಯಾದ ನಾಯಕನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.