Mayank Agarwal – ಟೀಮ್ ಇಂಡಿಯಾಗೆ ಕೋವಿಡ್ ಶಾಕ್ -ಏಕದಿನ ತಂಡ ಸೇರಿಕೊಂಡ ಮಯಾಂಕ್..!
ವೆಸ್ಟ್ ಇಂಡೀಸ್ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿ ಫೆಬ್ರವರಿ 6ರಿಂದ ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಗೆ ಉಭಯ ತಂಡಗಳು ಸಜ್ಜಾಗುತ್ತಿವೆ.
ಇದರ ಬೆನ್ನಲ್ಲೆ ಟೀಮ್ ಇಂಡಿಯಾಗೆ ಕೋವಿಡ್ ಸೋಂಕು ಅಘಾತ ನೀಡಿದೆ. ಟೀಮ್ ಇಂಡಿಯಾದ ಆರಂಭಿಕ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿ ಹಾಗೂ ಮೂವರು ತಂಡದ ಸಿಬ್ಬಂದಿಗಳಿಗೆ ಕೋವೀಡ್ ಸೋಂಕು ಆವರಿಸಿಕೊಂಡಿದೆ.
ನಿನ್ನೆ ನಡೆದ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಆರಂಭಿಕ ಸ್ಥಾನಕ್ಕಾಗಿ ಮಯಾಂಕ್ ಅಗರ್ ವಾಲ್ ಅವರನ್ನು ತಂಡದೊಳಗೆ ಸೇರಿಸಿಕೊಳ್ಳಲಾಗಿದೆ. ಆಯ್ಕೆ ಸಮಿತಿಯು ತುರ್ತು ಸಭೆ ನಡೆಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
Mayank Agarwal has been added to India’s ODI squad for WI
ಈಗಾಗಲೇ ಏಳು ಮಂದಿ ಕೂಡ ಒಂದು ವಾರಗಳ ಕಾಲ ಐಸೋಲೇಷನ್ ನಲ್ಲಿರಲಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರಿಗೆ ಇದು ಎರಡನೇ ಬಾರಿ ಕೋವಿಡ್ ಸೋಂಕು ಆವರಿಸಿಕೊಂಡಿದೆ, ಈ ಹಿಂದೆ ಐಪಿಎಲ್ ಪಂದ್ಯದ ವೇಳೆ ರುತುರಾಜ್ ಗಾಯಕ್ವಾಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು
ಭಾರತ ಮತ್ತು ವೆಸ್ಟ್ ಇಂಡೀಶ್ ತಂಡಗಳ ಏಕದಿನ ಸರಣಿಯ ಪಂದ್ಯಗಳು, ಫೆಬ್ರವರಿ 6, 9 ಮತ್ತು 11ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ. ಹಾಗೇ ಕೊಲ್ಕತ್ತಾದಲ್ಲಿ ಫೆಬ್ರವರಿ 16, 18, 20 ರಂದು ಟಿ-20 ಪಂದ್ಯಗಳು ನಡೆಯಲಿವೆ.
ಅಂದ ಹಾಗೇ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಐತಿಹಾಸಿಕ ಪಂದ್ಯವಾಗಲಿದೆ. ಟೀಮ್ ಇಂಡಿಯಾ ಒಂದು ಸಾವಿರ ಏಕದಿನ ಪಂದ್ಯವನ್ನಾಡಿದ ತಂಡ ಎಂಬ ಗೌರವಕ್ಕೆ ಪಾತ್ರವಾಗಲಿದೆ
ಇನ್ನು ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರು ಪೂರ್ಣ ಪ್ರಮಾಣದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.