Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

RCBvsRR ರಾಯಲ್ಸ್ ಕೆಡವಿದ ಆರ್‍ಸಿಬಿಗೆ ಪ್ಲೇ ಆಫ್ ಆಸೆ  ಜೀವಂತ

RCBvsRR ರಾಯಲ್ಸ್ ಕೆಡವಿದ ಆರ್‍ಸಿಬಿಗೆ ಪ್ಲೇ ಆಫ್ ಆಸೆ  ಜೀವಂತ

May 15, 2023
in Cricket, ಕ್ರಿಕೆಟ್
RCBvsRR ರಾಯಲ್ಸ್ ಕೆಡವಿದ ಆರ್‍ಸಿಬಿಗೆ ಪ್ಲೇ ಆಫ್ ಆಸೆ  ಜೀವಂತ

Jaipur: Royal Challengers Bangalore players celebrate after winning their IPL 2023 cricket match against Rajasthan Royals, at Sawai Mansingh Stadium in Jaipur, Sunday, May 14, 2023. Bangalore won by 112 runs. (PTI Photo)(PTI05_14_2023_000215B)

Share on FacebookShare on TwitterShare on WhatsAppShare on Telegram

ಆರ್‍ಸಿಬಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 112 ರನ್‍ಗಳ  ಭರ್ಜರಿ ಗೆಲುವು ದಾಖಲಿಸುವ ಮೂಲಕ ಐಪಿಎಲ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.  ಆರ್‍ಸಿಬಿ 15 ಅಂಕಗಳೊಂದಿಗೆ ಐದನೆ ಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‍ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ (44 ಎಸೆತ 55ರನ್), ಗ್ಲೆನ್ ಮ್ಯಾಕ್ಸ್‍ವೆಲ್ (33 ಎಸೆತ, 54 ರನ್)ಅರ್ಧ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 171 ರನ್‍ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ರಾಜಸ್ಥಾನ ತಂಡ 10.3 ಓವರ್‍ಗಳಲ್ಲಿ 59 ರನ್‍ಗಳಿಗೆ ಆಲೌಟ್ ಆಯಿತು.

ಆರ್‍ಸಿಬಿ ವೇಗಿ ವಾಯ್ನೆ ಪಾರ್ನೆಲ್ (10ಕ್ಕೆ 3 ವಿಕೆಟ್) ಪಡೆದು ಮಿಂಚಿದರು. ಸ್ಪಿನ್ನರ್‍ಗಳಾದ ಮೈಕಲ್ ಬ್ರೇಸ್‍ವೆಲ್ (16ಕ್ಕೆ 2ವಿಕೆಟ್ ಮತ್ತು ಕರಣ್ ಶರ್ಮಾ 19ಕ್ಕೆ 2 ವಿಕೆಟ್ ಪಡೆದರು. ರನ್ ಯಂತ್ರ ವಿರಾಟ್ ಕೊಹ್ಲಿ (18ರನ್) ವೇಗಿ ಆಸಿïಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು.

ಕೊಹ್ಲಿ ಹಾಗು ನಾಯಕ ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್‍ಗೆ 50 ರನ್ ಸೇರಿಸಿದರು.  ಆರ್‍ಸಿಬಿ ಪರ ಫಾಫ್ ಡುಪ್ಲೆಸಿಸ್ ಮತ್ತು ಮ್ಯಾಕ್ಸ್‍ವೆಲ್ ಎರಡನೆ ವಿಕೆಟ್‍ಗೆ 69 ರನ್ ಸೇರಿಸಿದರು. ಆದರೆ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಎಡವಿತು.

ನಂತರ ಬಂದ ಮಹಿಪಾಲ್ ಲೊಮ್ರೊರೊರ್ 1, ದಿನೇಶ್ ಕಾರ್ತಿಕ್ 0, ಮೈಕಲ್ ಬ್ರೇಸ್‍ವೆಲ್ ಅಜೇಯ 9 ರನ್ ಗಳಿಸಿದರು. ಕೊನೆಯಲ್ಲಿ ಅನೂಜ್ ರಾವತ್ 11 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೆಯ 29 ರನ್ ಕಲೆ ಹಾಕಿದರು.

ರಾಜಸ್ಥಾನ ರಾಯಲ್ಸ್ ಪರ  ಆ್ಯಡಮ್ ಜಾಂಪ 25ಕ್ಕೆ 2, ಕೆ.ಎಂ.ಆಸೀಫ್ 42ಕ್ಕೆ 2 ವಿಕೆಟ್ ಪಡೆದರು.  ಸಂದೀಪ್ ಶರ್ಮಾ 34ಕ್ಕೆ 1 ವಿಕೆಟ್ ಪಡೆದರು.

172 ರನ್‍ಗಳ ರನ್ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ವೇಗಿಗಳಾದ ಮೊಹ್ಮದ್ ಸಿರಾಜ್ ಮತ್ತು ವಾಯ್ನೆ ಪರ್ನೆಲ್ ಆಘಾತಗಳ ಆಘಾತ ನೀಡಿದರು.

ಯಶಸ್ವಿ ಜೈಸ್ವಾಲ್ (0)ಸಿರಾಜ್‍ಗೆ ವಿಕೆಟ್ ಒಪ್ಪಿಸಿದರು, ನಂತರ ದಾಳಿಗಿಳಿದ ವೇಗಿ ಪಾರ್ನೆಲ್ , ಜೋಸ್ ಬಟ್ಲರ್ (0), ಸಂಜು ಸ್ಯಾಮ್ಸನ್ 4,  ಜೋ ರೂಟ್ 10 ಅವರುಗಳನ್ನು ಬಲಿತೆಗೆದುಕೊಂಡು ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು.

ನಂತರ ಸ್ಪಿನ್ನರ್‍ಗಳಾದ ಮೈಕಲ್ ಬ್ರೇಸ್ ವೆಲ್ ದಾಳಿಗಿಳಿದು ದೇವದತ್ ಪಡಿಕಲ್ 4ರನ್ , ಧ್ರುವ್ ಜುರೆಲ್‍ಗೆ  (1 ರನ್)ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.  ಆರ್.ಅಶ್ವಿನ್ ರನೌಟ್ ಬಲೆಗೆ ಬಿದ್ದರು.

ಏಕಾಂಗಿ ಹೋರಾಟ ಮಾಡಿದ ಶಿಮ್ರಾನ್ ಹೇಟ್ಮಯರ್ 35, ಮ್ಯಾಕ್ಸ್‍ವೆಲ್‍ಗೆ ವಿಕೆಟ್ ಒಪ್ಪಿಸಿದರು.  ಆ್ಯಡಮ್ ಜಾಂಪ 2 ರನ್ ಗಳಿಸಿವುದರೊಂದಿಗೆ ರಾಜಸ್ಥಾನ ತಂಡ ಸುಲಭವಾಗಿ ಶರಣಾಯಿತು.

ಆರ್‍ಸಿಬಿ ಪರ ವಾಯ್ನೆ ಪಾರ್ನೆಲ್ 10ಕ್ಕೆ 3, ಮೈಕಲ್ ಬ್ರೇಸ್‍ವೆಲ್ 16ಕ್ಕೆ 2,ಕರಣ್ ಶರ್ಮಾ 19ಕ್ಕೆ 2, ಮೊಹ್ಮದ್ ಸಿರಾಜ್ 10ಕ್ಕೆ1, ಗ್ಲೆನ್ ಮ್ಯಾಕ್ಸ್‍ವೆಲ್ 3ಕ್ಕೆ 1 ವಿಕೆಟ್ ಪಡೆದರು.

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Faf DuplesisGlenn MaxwellIPL Season 16Rajasthan RoyalsRCBvsRRroyal chalengers bengaluruSports KarnatakaWayne Parnell
ShareTweetSendShare
Next Post
RCBvsRR ಐಪಿಎಲ್ ಇತಿಹಾಸದಲ್ಲೆ ಕನಿಷ್ಠ ಮೊತ್ತ ದಾಖಲಿಸಿದ ರಾಜಸ್ಥಾನ

RCBvsRR ಐಪಿಎಲ್ ಇತಿಹಾಸದಲ್ಲೆ ಕನಿಷ್ಠ ಮೊತ್ತ ದಾಖಲಿಸಿದ ರಾಜಸ್ಥಾನ

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram