ಆರ್ಸಿಬಿ ಎದುರು 59 ರನ್ ಗೆ ಆಲೌಟ್ ಆಗುವ ಮೂಲಕ ಐಪಿಎಲ್ನಲ್ಲಿ ಇತಿಹಾಸದಲ್ಲೆ ರಾಜಸ್ಥಾನ ಮೂರನೆ ಅತಿ ಕನಿಷ್ಠ ಮೊತ್ತ ದಾಖಲಿಸಿದೆ.
ಕಡಿಮೆ ಮೊತ್ತ ದಾಖಲಿಸಿದ ತಂಡಗಳ ವಿವರ ಇಲ್ಲಿದೆ.2017ರಲ್ಲಿ ಆರ್ಸಿಬಿ ತಂಡ ಕೋಲ್ಕತ್ತಾ ವಿರುದ್ಧ 49ರನ್ ಗಳಿಗೆ ಆಲೌಟ್ ಆಗಿತ್ತು. 2009ರಲ್ಲಿ ರಾಜಸ್ಥಾ ತಂಡ ಆರ್ಸಿಬಿ ಎದುರು 58 ರನ್ಗಗಳಿಗೆ ಸರ್ವಪತನ ಕಂಡಿತ್ತು.2023ರಲ್ಲಿ ರಾಜಸ್ಥಾನ ತಂಡ ಆರ್ಸಿಬಿ ಎದುರು 59 ರನ್ ಗಳಿಗೆ ಆಲೌಟ್ ಆಗಿದೆ.
2017ರಲ್ಲಿ ಡೆಲ್ಲಿ ತಂಡ ಮುಂಬೈ ಎದುರು 66 ರನ್ ಗಳಿಗೆ ಕುಸಿದಿತ್ತು.
ನಾಲ್ಕನೆ ಬಾರಿ ಕಡಿಮೆ ಮೊತ್ತ ದಾಖಲಿಸಿದ ರಾಜಸ್ಥಾನ
ರಾಜಸ್ಥಾನ ತಂಡ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಐಪಿಎಲ್ನಲ್ಲಿ ನಾಲ್ಕು ಬಾರಿ ಕಡಿಮೆ ಮೊತ್ತ ಪೇರಿಸಿದೆ. 2009ರಲ್ಲಿ ಆರ್ಸಿಬಿ ವಿರುದ್ಧ 58 ರನ್, ನಿನ್ನೆ ಆರ್ಸಿಬಿ ವಿರುದ್ಧ 59 ರನ್ಗೆ ಆಲೌಟ್ ಆಗಿದೆ. 2011ರಲ್ಲಿ ಕೋಲ್ಕತ್ತಾ ವಿರುದ್ಧ 81 ರನ್ಗಳಿಸಿತ್ತುಘಿ. 2021ರಲ್ಲಿ ಕೋಲ್ಕತ್ತಾ ವಿರುದ್ಧ 85 ರನ್ಗಳಿಗೆ ಸರ್ವಪತನ ಕಂಡಿತ್ತುಘಿ.