RCB star Glenn Maxwell- ವೈರಲ್ ಆಗುತ್ತಿದೆ ಗ್ಲೇನ್ ಮ್ಯಾಕ್ಸ್ ವೆಲ್ – ವಿನಿ ರಾಮನ್ ಮದುವೆ ವಿಡಿಯೋ…!

ಆಸ್ಟ್ರೇಲಿಯಾದ ಕ್ರಿಕೆಟಿಗ, ಆರ್ ಸಿಬಿ ಯ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಕಳೆದ ವಾರ ವಿವಾಹವಾಗಿರುವುದು ಗೊತ್ತಿರುವ ವಿಚಾರವೇ.
ವಿನಿ ರಾಮನ್ ಅವರು ಮೆಲ್ಬರ್ನ್ ನಲ್ಲಿ ವಾಸವಾಗಿದ್ರೂ ಕೂಡ ಅವರು ತಮಿಳುನಾಡಿನವರು. ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಅವರು ಕಳೆದ ಕೆಲವು ವರ್ಷಗಳಿಂದ ಜೊತೆಯಾಗಿ ಓಡಾಡುತ್ತಿದ್ದರು. ಅಲ್ಲದೆ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಐಪಿಎಲ್ ಟೂರ್ನಿ ಆರಂಭವಾಗುವುದಕ್ಕಿಂತ ಮುನ್ನವೇ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಅವರು ಮದುವೆಯಾಗಿದ್ದಾರೆ. ಎರಡು ಕುಟುಂಬಗಳ ಸಾಂಪ್ರದಾಯವನ್ನು ಗೌರವಿಸುವ ಹಿನ್ನಲೆಯಲ್ಲಿ ಎರಡು ವಿವಾಹ ಸಮಾರಂಭವನ್ನು ಏರ್ಪಡಿಸಿದ್ದರು. RCB star Glenn Maxwell- completes Indian wedding rituals with wife Vini Raman
ಇದೀಗ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಅವರ ತಮಿಳು ಸಾಂಪ್ರದಾಯದಲ್ಲಿ ಮದುವೆಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಈಗಾಗಲೇ ಮದುವೆಗೋಸ್ಕರ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಆಸ್ಟ್ರೇಲಿಯಾದ ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಹಾಗೇ ಐಪಿಎಲ್ ನ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಇದೀಗ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡಿರುವ ಗ್ಲೇನ್ ಮ್ಯಾಕ್ಸ್ ವೆಲ್ ಸದ್ಯದಲ್ಲೇ ಆರ್ ಸಿಬಿ ಕ್ಯಾಂಪ್ ಅನ್ನು ಸೇರಿಕೊಳ್ಳಲಿದ್ದಾರೆ.
Vanakam da Mapla @Gmaxi_32 😁💛#WhistlePodu | #IPL2022 pic.twitter.com/wRVdrUrGv6
— CSK Fans Army™ (@CSKFansArmy) March 28, 2022
ಕಳೆದ ವರ್ಷದಿಂದ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಆರ್ ಸಿಬಿ ತಂಡದ ಪರ ಆಡುತ್ತಿದ್ದಾರೆ. ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿರುವ ಕಾರಣ ಆರ್ ಸಿಬಿ 2022ರ ಐಪಿಎಲ್ ಟೂರ್ನಿಗಾಗಿ ಆರ್ ಸಿಬಿ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ರಿಟೇನ್ ಮಾಡಿಕೊಂಡಿತ್ತು.