ಐಪಿಎಲ್ನಲ್ಲಿ ಪ್ರತೀ ತಂಡಕ್ಕೂ ದೊಡ್ಡ ಫ್ಯಾನ್ ಬೇಸ್ ಇದೆ. ಮೈದಾನದಲ್ಲಿ ತಂಡಗಳು ಆಟಕ್ಕಿಳಿದಾಗ 12ನೇ ಆಟಗಾರನ ರೀತಿಯಲ್ಲಿ ಬಲ ನೀಡುವುದೇ ಈ ಅಭಿಮಾನಿಗಳು. ಅಭಿಮಾನಿಗಳು ಅಂದರೆ ಆಟಗಾರರಿಗೂ ಇಷ್ಟ. ಫುಲ್ ಹೌಸ್ ಸ್ಟೇಡಿಯಂನಲ್ಲಿ ಪಂದ್ಯ ನೋಡುವುದು ಅಭಿಮಾನಿಗಳಿಗೆ ಹಬ್ಬವಾದರೆ, ಅವರ ಮುಂದೆ ಆಡುವುದು ಆಟಗಾರರಿಗೆ ಇಷ್ಟ.15ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ರೇಕ್ಷಕರಿಗೆ ಕೇವಲ 25 ಪ್ರತಿಶತ ಮಾತ್ರ ಅವಕಾಶ ನೀಡಲಾಗುತ್ತಿದೆ.
ಐಪಿಎಲ್ನಲ್ಲಿ ಒಬ್ಬೊಬ್ಬ ಆಟಗಾರನಿಗೂ ಅಭಿಮಾನಿಗಳ ಬಳಗವಿದೆ. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಅಂದರೆ ಆರ್ಸಿಬಿ ಅಭಿಮಾನಿಗಳಿಗೆ ಸಖತ್ ಇಷ್ಟ. ಧೋನಿ, ಜಡೇಜಾ, ಬ್ರಾವೋ ಅಂದರೆ ಚೆನ್ನೈ ತಂಡ. ರಿಷಬ್ ಪಂತ್ ಡೆಲ್ಲಿಗಾದರೆ, ಮುಂಬೈ ತಂಡದ ರೋಹಿತ್, ಬುಮ್ರಾ ಅಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡದ ಬಿದ್ಧವೈರಿ ಎಂದರೆ ಅದು ಸಿಎಸ್ಕೆ . ಈ ಎರಡು ತಂಡಗಳ ನಡುವಿನ ಹೋರಾಟ ಅಂದರೆ ಅಭಿಮಾನಿಗಳಿಗೂ ಸಖತ್ ಥ್ರಿಲ್. ಎರಡೂ ತಂಡಗಳು ಅಭಿಮಾನಿಗಳು ತಮ್ಮ ತಂಡವನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಆದರೆ ಈಗ ಆರ್ಸಿಬಿಗೆ ಸಿಎಸ್ಕೆ ಫ್ಯಾನ್ಸ್ ಬೆಂಬಲ ಸಿಕ್ಕಿದೆ.
ಹೌದು, ಇದು ಅಚ್ಚರಿ ಆದರೂ ಸತ್ಯ. ಕೆಕೆಆರ್ ಮತ್ತು ಆರ್ಸಿಬಿ ಪಂದ್ಯ ವೇಳೆ ಸಿಎಸ್ಕೆ ಅಭಿಮಾನಿಗಳು ಮೈದಾನದಲ್ಲಿದ್ದರು. ಅಷ್ಟೇ ಅಲ್ಲ ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದರು. ಆದರೆ ಇದಕ್ಕೆಲ್ಲಾ ಕಾರಣವಾಗಿದ್ದು ಫಾಫ್ ಡು ಪ್ಲೆಸಿಸ್. ಫಾಪ್ ಸದ್ಯ ಆರ್ಸಿಬಿಯ ಕ್ಯಾಪ್ಟನ್. ಆದರೆ ಕೆಲ ವರ್ಷಗಳಿಂದ ಸಿಎಸ್ಕೆ ಭಾಗವಾಗಿದ್ದರು. ಡು ಪ್ಲೆಸಿಸ್ ಈಗ ಆರ್ಸಿಬಿ ಭಾಗವಾಗಿದ್ದರೂ ಸಿಎಸ್ಕೆ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಡು ಪ್ಲೆಸಿಸ್ನಿಂದ ಆರ್ಸಿಬಿಗೆ ಹೊಸ ಅಭಿಮಾನಿ ಬಳಗ ಸಿಕ್ಕಿದೆ.