ಕ್ರಿಕೆಟ್ನಲ್ಲಿ ಎಲ್ಲವೂ ಲೆಕ್ಕಾಚಾರದಂತೆಯೇ ನಡೆಯುವುದು. ಓವರ್ ಎಸೆಯಲು ತೆಗೆದುಕೊಳ್ಳುವ ಸಮಯ, ಬಾರಿಸಿದ ಫೋರ್, ಸಿಡಿದ ಸಿಕ್ಸರ್ ಗಳೆಲ್ಲವೂ ದಾಖಲೆಯಾಗುತ್ತದೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜಸ್ ನಡುವಿನ ಪಂದ್ಯದಲ್ಲೂ ಲೆಕ್ಕಾಚಾರ ಸಾಕಷ್ಟಿದೆ.
ಸಂದೀಪ್ ಸಂಕಟ:
ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸಂದೀಪ್ ಶರ್ಮಾ ಮತ್ತು ಕಗಿಸೋ ರಬಾಡಾ ವಿರುದ್ಧ ಒಟ್ಟು 15 ಬಾರಿ ಔಟ್ ಆಗಿದ್ದಾರೆ. ಸಂದೀಪ್ ಶರ್ಮಾ ವಿರಾಟ್ ಅವರನ್ನು 9 ಬಾರಿ ಔಟ್ ಮಾಡಿದ್ದರೆ, 6 ಬಾರಿ ರಬಾಡಾ ಫಾಫ್ಗೆ ಪವೆಲಿಯನ್ ದಾರಿ ತೋರಿಸಿದ್ದಾರೆ. ಹೀಗಾಗಿ ಸಂದೀಪ್ ಮತ್ತು ರಬಾಡಾ ಜೋಡಿ ಡೇಂಜಸರ್ ಓಪನಿಂಗ್ ಬೌಲರ್ ಗಳಾಗಬಹುದು.
ಪ್ಲಾನ್ ಚೇಂಜ್..?
ಶಿಖರ್ ಧವನ್ ಮತ್ತು ಜಾನಿ ಬೇರ್ ಸ್ಟೋವ್ ವನಿಂದು ಹಸರಂಗ ವಿರುದ್ಧ 100ಕ್ಕಿಂತಲೂ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೆ ಭಾನುಕಾ ರಾಜಪಕ್ಸೆ ಮತ್ತು ಲಿಯಂ ಲಿವಿಂಗ್ ಸ್ಟೋನ್ ಲೆಗ್ ಸ್ಪಿನ್ನರ್ ಗಳನ್ನು ಚಿಂದಿ ಉಡಾಯಿಸಿದ್ದಾರೆ. ಹೀಗಾಗಿ ಜೋಶ್ ಹ್ಯಾಜಲ್ ವುಡ್ ಜೊತೆ ಹಸರಂಗ ಬೌಲಿಂಗ್ ಆರಂಭಿಸುವ ಪ್ಲಾನ್ ಕೂಡ ಇದೆ.
ನಂಬರ್ ಗೇಮ್:
- ಈ ಬಾರಿಯ ಐಪಿಎಲ್ನಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾದಾಗ 27 ಸಿಕ್ಸರ್ ಸಿಡಿದಿತ್ತು. ಇದು ಈ ಬಾರಿಯ ಐಪಿಎಲ್ನಲ್ಲಿ ಪಂದ್ಯವೊಂದರಲ್ಲಿ ಸಿಡಿದ ಗರಿಷ್ಠ ಸಿಕ್ಸರ್ ಆಗಿದೆ.
- ಅರ್ಶದೀಪ್ ಸಿಂಗ್ ಈ ಬಾರಿಯ ಐಪಿಎಲ್ನಲ್ಲಿ 38 ಓವರ್ ಗಳನ್ನು ಎಸೆದಿದ್ದಾರೆ. ಆದರೆ ಕೇವಲ 5 ಸಿಕ್ಸರ್ ಮಾತ್ರ ಬಿಟ್ಟು ಕೊಟ್ಟಿದ್ದಾರೆ.
- ಐಪಿಎಲ್ 2022ರಲ್ಲಿ ವಿರಾಟ್ ಕೊಹ್ಲಿ 8 ಬಾರಿ ಇನ್ನಿಂಗ್ಸ್ ನ ಮೊದಲ 15 ಎಸೆತಗಳ ಒಳಗಡೆ ಔಟ್ ಆಗಿದ್ದರೆ.
- ಪಂಜಾಬ್ ವೇಗಿ ಕಗಿಸೋ ರಬಾಡಾ 18 ವಿಕೆಟ್ ಪಡೆದಿದ್ದಾರೆ. ಇದು ಈ ಬಾರಿ ಐಪಿಎಲ್ನಲ್ಲಿ ವೇಗದ ಬೌಲರ್ ಒಬ್ಬ ಪಡೆದಿರುವ ಗರಿಷ್ಠ ವಿಕೆಟ್