Happy Birthday Harbhajan – ಪಾಜಿ ಪಾರ್ಟಿ ಎಲ್ಲಿ ? ಹ್ಯಾಪಿ ಬರ್ತ್ ಡೇ ಹರ್ಭಜನ್ ಸಿಂಗ್…!
ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರಿಗೆ ಇಂದು (ಜುಲೈ 3) 42ನೇ ಹುಟ್ಟುಹಬ್ಬದ ಸಂಭ್ರಮ.
ಟೀಮ್ ಇಂಡಿಯಾ ಮತ್ತು ಐಪಿಎಲ್ ನಿಂದ ದೂರ ಸರಿದ ನಂತರ ಹರ್ಭಜನ್ ಸಿಂಗ್ ಅವರು ಹಾಯಾಗಿ ತನ್ನ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.
ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಟರ್ಬನೇಟರ್. ತನ್ನ ಅದ್ಭುತ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುತ್ತಿದ್ದ ಭಜ್ಜಿ ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದಾರೆ.
ಐತಿಹಾಸಿಕ ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿರುವ ಹರ್ಭಜನ್ ಸಿಂಗ್, 2007ರ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಆಟಗಾರನಾಗಿದ್ದರು.
ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಗಮನ ಸೆಳೆಯುತ್ತಿದ್ದ ಭಜ್ಜಿ ಹಲವು ವಿವಾದಗಳಿಂದಲೂ ಸುದ್ದಿಯಾಗಿದ್ದರು. ಆಂಡ್ರ್ಯೂ ಸೈಮಂಡ್ಸ್ ಜೊತೆಗಿನ ಜನಾಂಗಿಯ ನಿಂದನೆ, ಶ್ರೀಶಾಂತ್ ಗೆ ಕಪಾಲಮೋಕ್ಷ ಮಾಡಿದ್ದು ಹೀಗೆ ಹರ್ಭಜನ್ ಸಿಂಗ್ ಅವರ ಹೆಸರಿಗೆ ಕಪ್ಪುಚುಕ್ಕೆಗಳಾಗಿದ್ದವು. ಆದ್ರೆ ತನ್ನ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ವಹಿಸಿದ್ದರು.
ಇನ್ನು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಅಡಿದ್ದರು.
ಇದೀಗ 42ನೇ ಹುಟ್ಟುಹಬ್ಬವವನ್ನು ಆಚರಿಸಿಕೊಳ್ಳುತ್ತಿರುವ ಹರ್ಭಜನ್ ಸಿಂಗ್ ಗೆ ಟೀಮ್ ಇಂಡಿಯಾದ ಒಡನಾಡಿಗಳು ಶುಭ ಹಾರೈಸಿದ್ದಾರೆ. ಹಾಗೇ ಅಭಿಮಾನಿಗಳು ಕೂಡ ಶುಭ ಕೋರಿದ್ದಾರೆ.
ಶಿಖರ್ ಧವನ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ಹರ್ಭಜನ್ ಸಿಂಗ್.. ಪಾಜಿ ಪಾರ್ಟಿ ? ಎಂದು ಬರೆದುಕೊಂಡಿದ್ದಾರೆ.
ಇನ್ನು ಯುವರಾಜ್ ಸಿಂಗ್ ಕೂಡ ಹರ್ಭಜನ್ ಸಿಂಗ್ ಜೊತೆಗಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಶುಭಕೋರಿದ್ದಾರೆ.
ಹ್ಯಾಪಿ ಬರ್ತ್ ಡೇ ಭಜ್ಜಿ ಪಾ.. ನೀನು ಬೌಲಿಂಗ್ ನಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದೀಯಾ.. ಆದ್ರೆ ಮನರಂಜನೆಯನ್ನು ಯಾವತ್ತೂ ಮಾಡಿಲ್ಲ. ಶುಭವಾಗಲಿ ಬ್ರದರ್ ಎಂದು ಗೌತಮ್ ಗಂಭೀರ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಬಿಸಿಸಿಐ ಕೂಡ ಹರ್ಭಜನ್ ಸಿಂಗ್ ಅವರ ದಾಖಲೆಗಳನ್ನು ಶೇರ್ ಮಾಡಿಕೊಂಡು ಶುಭಕೋರಿದೆ. Happy Birthday Harbhajan -Harbhajan as legendary Indian spinner turns 42
367 ಪಂದ್ಯ, 711 ವಿಕೆಟ್, 3569 ರನ್.. ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್. 2007ರ ಟಿ-20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆಲುವಿನ ಆಟಗಾರ. ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಅದ್ಭುತ ಆಟಗಾರ ಹರ್ಭಜನ್ ಸಿಂಗ್. ಹ್ಯಾಪಿ ಬರ್ತ್ ಡೇ ಎಂದು ಬಿಸಿಸಿಐ ಟ್ವಿಟರ್ ನಲ್ಲಿ ಬರದುಕೊಂಡಿದೆ.
2016ರ ನಂತರ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ ಹರ್ಭಜನ್ ಸಿಂಗ್ ಮಾಡಿರುವ ಸಾಧನೆ, ದಾಖಲೆಗಳು ಮಾತ್ರ ಎಂದಿಗೂ ನೆನಪಿನಲ್ಲಿರುತ್ತವೆ.