ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ನಲ್ಲಿ ಉಳಿದ ಪಂದ್ಯಗಳನ್ನು ಔಪಚಾರಿಕವಾಗಿ ಆಡಲಿದೆ. ಆದರೆ ಎದುರಾಳಿಯ ಲೆಕ್ಕಾಚಾರ ಉಲ್ಟಾ ಮಾಡಲು ಉಂಬೈ ತುದಿಗಾಗಲಲ್ಲಿ ನಿಂತಿದೆ. ಇನ್ನೊಂದು ಕಡೆಯಲ್ಲಿ ಗುಜರಾತ್ ಟೈಟಾನ್ಸ್ ಮೊದಲೆರಡು ಸ್ಥಾನ ಗಟ್ಟಿಮಾಡಿಕೊಳ್ಳುವ ಲೆಕ್ಕಾಚರದಲ್ಲಿದೆ.
ರಶೀದ್ ಕಂಟಕ:
ರಶೀದ್ ಖಾನ್ ರೋಹಿತ್ ಶರ್ಮಾ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ 5 ಇನ್ನಿಂಗ್ಸ್ ಗಳ ಪೈಕಿ 2 ಬಾರಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಮೊದಲೇ ಔಟ್ ಆಫ್ ಫಾರ್ಮ್ ನಲ್ಲಿರುವ ರೋಹಿತ್ ವಿರುದ್ಧ ರಶೀದ್ ಖಾನ್ ರನ್ನು ಬೌಲಿಂಗ್ಗೆ ಇಳಿಸಿದರೂ ಅಚ್ಚರಿ ಇಲ್ಲ.
ಸೂರ್ಯ- ಡೇವಿಡ್ ಮಿಂಚು:
ರಶೀದ್ ಖಾನ್, ಟಿಮ್ ಡೇವಿಡ್ ಮತ್ತು ಸೂರ್ಯ ಕುಮಾರ್ ಯಾದವ್ ವಿರುದ್ಧ ಪರಿಣಾಮಕಾರಿಯಾಗಿಲ್ಲ. qಇಮ್ ಡೇವಿಡ್ ರಶೀದ್ ಖಾನ್ ರ 19 ಎಸೆತಗಳಲ್ಲಿ 36 ರನ್ ಸಿಡಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ 28 ಎಸೆತಗಳಲ್ಲಿ 32 ರನ್ ಸಿಡಿಸಿದ್ದಾರೆ. ಆದರೆ ಇಬ್ಬರೂ ಕೂಡ ಈ ಲೆಗ್ ಸ್ಪಿನ್ನರ್ಗೆ ಔಟ್ ಆಗಿಲ್ಲ.
ಬೂಮ್ ಕಳೆದುಕೊಂಡ ಬುಮ್ರಾ:
ಬುಮ್ರಾ ಈ ಬಾರಿಯ ಐಪಿಎಲ್ನಲ್ಲಿ ಒಟ್ಟು 5 ವಿಕೆಟ್ ಮಾತ್ರ ಪಡೆದಿದ್ದಾರೆ. ಈ ಪೈಕಿ 3 ವಿಕೆಟ್ ಎಡಗೈ ಬ್ಯಾಟ್ಸ್ಮನ್ಗಳದ್ದಾಗಿದೆ. ಬುಮ್ರಾ ರಾಹುಲ್ ತೇವಾಟಿಯಾರನ್ನು ಒಮ್ಮೆ ಔಟ್ ಮಾಡಿದ್ದರೆ, ಡೇವಿಡ್ ಮಿಲ್ಲರ್ ಅವರನ್ನು 7 ಬಾರಿ ಎದುರಿಸಿದ್ದರೂ ಔಟ್ ಮಾಡಿಲ್ಲ.
ನಂಬರ್ ಗೇಮ್:
ಮುಂಬೈ ತಂಡ ಐಪಿಎಲ್ 2022ರಲ್ಲಿ ಕೇವಲ 40.3 ಓವರುಗಳ ಸ್ಪಿನ್ ಬೌಲಿಂಗ್ ಮಾಡಿದೆ. ಸನ್ ರೈಸರ್ಸ್ ಬಳಿಕ ಅತ್ಯಂತ ಕಡಿಮೆ ಓವರ್ ಸ್ಪಿನ್ ಬೌಲಿಂಗ್ ಮಾಡಿದ ತಂಡವಾಗಿದೆ.
ಜಸ್ಪ್ರಿತ್ ಬುಮ್ರಾ 9 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ವಿಕೆಟ್ ಪಡೆದಿಲ್ಲ. 2014ರ ಐಪಿಎಲ್ನಲ್ಲಿ ಬುಮ್ರಾ 7 ಪಂದ್ಯಗಳಲ್ಲಿ ವಿಕೆಟ್ ಪಡೆದಿರಲಿಲ್ಲ.
ಮುಂಬೈ ತಂಡದ ಆರಂಭಿಕ ಜೋಡಿಯ ಸರಾಸರಿ ಕೇವಲ 22 ರನ್. ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭಿಕರ ಸರಾಸರಿ ಕೇವಲ 14.40 ರನ್ ಆಗಿದೆ.
2018ರ ತನಕ ಮೊಹಮ್ಮದ್ ಶಮಿ ಮುಂಬೈ ಇಂಡಿಯನ್ಸ್ ವಿರುದ್ಧ 4 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದರು. ಆದರೆ ಆ ಬಳಿಕ 6 ಪಂದ್ಯಗಳಿಂದ 11 ವಿಕೆಟ್ ಕಬಳಿಸಿದ್ದಾರೆ.