IPL -2022- MI Vs GT ಬ್ರಬೊರ್ನ್ ಅಂಗಣದಲ್ಲಿ ಗುಜರಾತ್ – ಮುಂಬೈ ಫೈಟ್ -Gujarat Titans Probable XI

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಆಲ್ ಮೋಸ್ಟ್ ಫ್ಲೇ ಆಫ್ ಗೆ ಎಂಟ್ರಿಯಾಗಿದೆ. ಯಾರು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ತಂಡವನ್ನು ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ಗುಜರಾತ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ಮೇ 6ರಂದು ಮುಂಬೈನ ಬ್ರಬೊರ್ನ್ ಅಂಗಣದಲ್ಲಿ ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಗುಜರಾತ್ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಆಡಿರುವ 10 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ. ಎರಡು ಪಂದ್ಯಗಳನ್ನು ಮಾತ್ರ ಸೋತಿದೆ. IPL -2022-Match No 51 – MI Vs GT – Gujarat Titans Probable XI
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಬದಲಾವಣೆ ಏನು ಆಗಲ್ಲ. ಬಹುತೇಕ ಈ ಹಿಂದಿನ 11ರ ಬಳಗವನ್ನೇ ಕಣಕ್ಕಿಳಿಸಲಿದೆ. ಹೀಗಾಗಿ ಈ ಪಂದ್ಯದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿಲ್ಲ.
ಸಂಘಟಿತ ಆಟದ ಜೊತೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಕೂಡ ಗುಜರಾತ್ ಟೈಟಾನ್ಸ್ ತಂಡದ ಯಶಸ್ವಿನ ಸಿಕ್ರೇಟ್ ಕೂಡ ಹೌದು.

ಆರಂಭಿಕರಾದ ವೃದ್ದಿಮಾನ್ ಸಾಹಾ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಆದ್ರೆ ಇನ್ನೊಬ್ಬ ಆರಂಭಿಕ ಶುಬ್ಮನ್ ಗಿಲ್ ಸ್ವಲ್ಪ ಮಟ್ಟಿಗೆ ಮಂಕಾಗಿದ್ದಾರೆ. ಸಾಯಿ ಸುದರ್ಶನ್ ನಿರೀಕ್ಷೆಗೂ ಮೀರಿದ ಆಟವನ್ನಾಡುತ್ತಿದ್ದಾರೆ. ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಹಾರ್ದಿಕ್ ಪಾಂದ್ಯ ಆಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಸಮಯೋಚಿತವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಇನ್ನೊಂದೆಡೆ ರಶೀದ್ ಖಾನ್ ಮತ್ತು ರಾಹುಲ್ ಟೆವಾಟಿಯಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲಿ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿರುವುದು ತಂಡಕ್ಕೆ ವರದಾನವಾಗುತ್ತಿದೆ. ಹಾಗೇ ಬೌಲಿಂಗ್ ನಲ್ಲಿ ಅಲ್ಝಾರಿ ಜೊಸೇಫ್, ಲೂಕಿ ಫಗ್ರ್ಯುಸನ್ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ಮಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ದುಬಾರಿಯಾದ್ರೂ ಅಪಾಯಕಾರಿ ವೇಗಿ ಎಂಬುದನ್ನು ಮರೆಯುವ ಹಾಗಿಲ್ಲ. ಈ ನಡುವೆ, ಪ್ರದೀಪ್ ಸಂಗ್ವಾನ್ ಮತ್ತು ಯಶ್ ದಯಾಲ್ ನಡುವೆ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲು ಪೈಪೋಟಿ ಇದೆ.
ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಾವುದೇ ರೀತಿಯ ಒತ್ತಡವಿಲ್ಲದೆ ಆಡಲಿದೆ. ಆದ್ರೂ ಗೆಲುವನ್ನು ಎದುರು ನೋಡುತ್ತಿದೆ. ಪ್ರಯೋಗಕ್ಕೆ ಮುಂದಾಗುವ ಯಾವುದೇ ಸಾಧ್ಯತೆಗಳಿಲ್ಲ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಶುಬ್ಮನ್ ಗಿಲ್
ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್)
ಸಾಯಿ ಸುದರ್ಶನ್
ಹಾರ್ದಿಕ್ ಪಾಂಡ್ಯ (ನಾಯಕ)
ಡೆವಿಡ್ ಮಿಲ್ಲರ್
ರಾಹುಲ್ ಟೆವಾಟಿಯಾ
ರಶೀದ್ ಖಾನ್
ಅಲ್ಝಾರಿ ಜೊಸೇಫ್
ಪ್ರದೀಪ್ ಸಂಗ್ವಾನ್ / ಯಶ್ ದಯಾಲ್
ಲೂಕಿ ಫರ್ಗುಸನ್
ಮಹಮ್ಮದ್ ಶಮಿ