ವಿಶ್ವ ಕ್ರಿಕೆಟ್‌ನ “ಸ್ಪಿನ್ ಕಿಂಗ್” ಎನಿಸಿರುವ ರಶೀದ್ ಖಾನ್, ಟಿ20 ಕ್ರಿಕೆಟ್‌ನಲ್ಲಿ 450 ವಿಕೆಟ್‌ಗಳನ್ನ ಕಬಳಿಸುವ ಮೂಲಕ ಹೊಸದೊಂದು ಮೈಲುಗಲ್ಲು ದಾಟಿದ್ದಾರೆ.
ಪುಣೆಯಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದ ಅಫ್ಘನ್ ಸ್ಪಿನ್ ಚಾಣಾಕ್ಷ, 4/24 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಆ ಮೂಲಕ ಟಿ20ಯಲ್ಲಿ 450 ವಿಕೆಟ್‌ಗಳ ಗಡಿದಾಟಿದ ರಶೀದ್ ಖಾನ್, ಆ ಮೂಲಕ ಡ್ವೇನ್ ಬ್ರಾವೋ ಹಾಗೂ ಇಮ್ರಾನ್ ತಾಹಿರ್ ನಂತರ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿದರು. ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಗುಜರಾತ್ ಭರ್ಜರಿ ಗೆಲುವು ಸಾಧಿಸಿತು.

23 ವರ್ಷದ ರಶೀದ್ ಖಾನ್ ತಮ್ಮ ಶ್ರೇಷ್ಠ ಸ್ಪಿನ್ ಬೌಲಿಂಗ್ ಮೂಲಕ ವಿಶ್ವದ ಹಲವು ದಿಗ್ಗಜ ಆಟಗಾರರಿಗೆ ಮಣ್ಣುಮುಕ್ಕಿಸಿದ್ದಾರೆ. ಟಿ20ಯಲ್ಲಿ ಈವರೆಗೂ 322 ಪಂದ್ಯಗಳನ್ನ ಆಡಿರುವ ರಶೀದ್ ಖಾನ್, 17.40 ಸರಾಸರಿ ಹಾಗೂ 6.36 ಎಕಾನಮಿಯೊಂದಿಗೆ 450 ವಿಕೆಟ್ ಕಬಳಿಸಿದ್ದಾರೆ.
“ಕಳೆದ 2-3 ಪಂದ್ಯಗಳಲ್ಲಿ ಸರಿಯಾದ ಲೈನ್ ಮತ್ತು ಲೆಂಥ್‌ನಲ್ಲಿ ಬೌಲಿಂಗ್ ಮಾಡದ ಕಾರಣ ವಿಕೆಟ್ ಪಡೆಯಲು ಆಗಿರಲಿಲ್ಲ. ನನ್ನ ಆಕ್ಷನ್‌ನಲ್ಲಿ ಸ್ವಲ್ಪ ಸ್ಪೀಡ್ ಅಳವಡಿಸಿದ್ದ ಕಾರಣ, ನಾನು ಲೈನ್ & ಲೆಂಥ್ ಕಳೆದುಕೊಂಡಿದ್ದೆ. ಈ ಪಂದ್ಯದಲ್ಲಿ ಸರಿಯಾದ ಏರಿಯಾಗಳಲ್ಲಿ ಬೌಲಿಂಗ್ ಮಾಡುವ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದೆ” ಎಂದು ಪಂದ್ಯದ ಬಳಿಕ ರಶೀದ್ ಖಾನ್ ಹೇಳಿದರು.

ಹೆಚ್ಚು ವಿಕೆಟ್‌ಗಳು – ಟಿ20ಯಲ್ಲಿ
ಡ್ವೇನ್ ಬ್ರಾವೋ – 587 ವಿಕೆಟ್‌ಗಳು
ಇಮ್ರಾನ್ ತಾಹಿರ್ – 451 ವಿಕೆಟ್‌ಗಳು
ರಶೀದ್ ಖಾನ್ – 450 ವಿಕೆಟ್‌ಗಳು
ಸುನೀಲ್ ನರೈನ್ – 437 ವಿಕೆಟ್‌ಗಳು
ಶಕೀಬ್ ಅಲ್ ಹಸನ್ – 416 ವಿಕೆಟ್‌ಗಳು