ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಹಲವು ಯುವಕರು ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ಎಲ್ಲರ ಚಿತ್ತ ಕದ್ದಿದ್ದಾರೆ. ಇವರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಪಂಜಾಬ್ ಕಿಂಗ್ಸ್ ತಂಡದ ಜಿತೇಶ್ ಶರ್ಮಾ. ಅವರ ಈ ಯಶಸ್ವಿ ಪಯಣದ ಹಿಂದಿನ ಗುಟ್ಟನ್ನು ಅವರು ಬಿಚ್ಚಿಟ್ಟಿದ್ದಾರೆ.
ಜಿತೀಶ್ ಶರ್ಮಾ ಪ್ರತಿ ವರ್ಷ ಹೊಸ ಶಾಟ್ ಕಲಿಯುತ್ತಾರಂತೆ. ಇದರಿಂದ ಅವರ ಬ್ಯಾಟಿಂಗ್ ಸುಧಾರಣೆ ಆಗಿದೆಯಂತೆ. 2014 ರಿಂದ ವಿದರ್ಭ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಡುತ್ತಿರುವ 28 ವರ್ಷದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್, ಪಂಜಾಬ್ ಕಿಂಗ್ಸ್‌ಗಾಗಿ ತಮ್ಮ ಬಹುಮುಖ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಜಿತೇಶ್ ತನ್ನ IPL ಚೊಚ್ಚಲ ಪಂದ್ಯದಲ್ಲೇ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ ಆಟಗಾರ. ಹೀಗಾಗಿ ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ಬೆಂಬಲಿಸುತ್ತಿದೆ. ಇವರು ಪ್ರಸಕ್ತ ಐಪಿಎಲ್ ನ 7 ಇನ್ನಿಂಗ್ಸ್ ಗಳಲ್ಲಿ 162 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಬಾರಿ 30ಕ್ಕೂ ಹೆಚ್ಚು ರನ್ ಸೇರಿಸಿದ್ದು, ಅವರ ಸ್ಟ್ರೈಕ್ ರೇಟ್ 167 ರನ್ ಆಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಿತೇಶ್ 18 ಎಸೆತಗಳಲ್ಲಿ 38 ರನ್ ಬಾರಿಸಿ ಮಿಂಚಿದರು. ಇವರ ಇನ್ನಿಂಗ್ಸ್ ಕಂಡ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಇವರನ್ನು ವಿಶ್ವಕಪ್ ಗೆ ಮೀಸಲು ವಿಕೆಟ್‌ಕೀಪರ್ ಆಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳುವಂತೆ ತಿಳಿಸಿದ್ದಾರೆ. ಸೆಹ್ವಾಗ್ ನನ್ನ ಬಗ್ಗೆ ಈ ರೀತಿ ಹೇಳಿದ್ದಕ್ಕೆ ಧನ್ಯವಾದಗಳು ಆದರೆ ನನ್ನ ಹಿಡಿತದಲ್ಲಿರುವುದನ್ನು ಮಾತ್ರ ನಾನು ಮಾಡಬಲ್ಲೆ ಮತ್ತು ಆಯ್ಕೆಯು ಖಂಡಿತವಾಗಿಯೂ ನನ್ನ ಹಿಡಿತದಲ್ಲಿಲ್ಲ ಎಂದು ಜಿತೇಶ್ ಹೇಳಿದ್ದಾರೆ.
ಜಿತೇಶ್ ಮೈದಾನದ ಸುತ್ತಲೂ ಬೌಂಡರಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್-ಫಾರ್ಮ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅನ್ನು ಫ್ಲಿಕ್ ಮಾಡುವ ಮೂಲಕ ಅದ್ಭುತ ಸಿಕ್ಸರ್ ಅನ್ನು ಬಾರಿಸಿದರೆ, ಪ್ರಸಿದ್ಧ ಕೃಷ್ಣ ಅವರ ನಿಧಾನಗತಿಯ ಬೌಲಿಂಗ್ ನಲ್ಲಿ ಮಿಡ್-ಆಫ್ ಮೇಲೆ ಸಿಕ್ಸರ್ ಹೊಡೆದರು. ಪ್ರತಿ ವರ್ಷ ಹೊಸ ಶಾಟ್ ಕಲಿಯಲು ಪ್ರಯತ್ನಿಸಿದ್ದೇನೆ ಎಂದು ಜಿತೇಶ್ ಹೇಳಿದರು.
ಪ್ರತಿ ವರ್ಷ ನಾನು ಹೊಸ ಶಾಟ್ ಆಡಲು ಪ್ರಯತ್ನಿಸುತ್ತೇನೆ ಅಥವಾ ಹೊಸದನ್ನು ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಜಿತೇಶ್ ಹೇಳಿದ್ದಾರೆ.