Ranji Trophy 2022 – ಚೊಚ್ಚಲ ಪಂದ್ಯದಲ್ಲಿ ಎರಡು ಶತಕ.. ಯಶ್ ಧುಲ್ ಸಾಧನೆಗೆ ಸಲಾಂ..!
ಯಶ್ ಧುಲ್.. ಸದ್ಯ ಭಾರತೀಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಯುವ ಬ್ಯಾಟ್ಸ್ ಮೆನ್.
ದೆಹಲಿಯ 19ರ ಹರೆಯದ ಯಶ್ ಧುಲ್ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡದ ನಾಯಕ. ಇದೀಗ ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಗಮನ ಸೆಳೆದ ಯುವ ಪ್ರತಿಭೆ.
ತನ್ನ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ದಾಖಲಿಸಿ ದಾಖಲೆ ಬರೆದಿದ್ದ ಯಶ್ ಧುಲ್ ಈಗ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.
ತಮಿಳುನಾಡು ವಿರುದ್ದದ ಮೊದಲ ರಣಜಿ ಪಂದ್ಯ ಯಶ್ ಧುಲ್ ಪಾಲಿಗೆ ಚೊಚ್ಚಲ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 7 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದ್ರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶ್ ಧುಲ್ ಅವರು ಸಮಯೋಚಿತ ಆಟವನ್ನಾಡಿದ್ರು. ಜೊತೆಗೆ ಶತಕ ಕೂಡ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
ಅಷ್ಟೇ ಅಲ್ಲ, ಎರಡನೇ ಇನಿಂಗ್ಸ್ ನಲ್ಲೂ ಶತಕ ದಾಖಲಿಸಿ ಅಪರೂಪದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಸಿಕೊಂಡ್ರು. 202 ಎಸೆತಗಳಲ್ಲಿ 113 ರನ್ ಗಳಿಸಿದ್ದ ಯಶ್ ಧುಲ್ ಅವರು ಚೊಚ್ಚಲ ರಣಜಿ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಶತಕ ದಾಖಲಿಸಿದ್ದ ಭಾರತದ ಮೂರನೇ ಆಟಗಾರ ಎಂಬ ಗೌರವಕ್ಕೆ ಪಾತ್ರ ರಾದ್ರು.
ಈ ಹಿಂz 1952 – 53ರಲ್ಲಿ ನಾರಿ ಕಾಂಟ್ರಕ್ಟರ್, 2012-13ರಲ್ಲಿ ವಿರಾಗ್ ಆವಾಟೆ ಚೊಚ್ಚಲ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಶತಕ ದಾಖಲಿಸಿದ್ದರು. Ranji Trophy 2022 -Yash Dhull 3rd Indian to hit two tons on debut
ಐಪಿಎಲ್ ಟೂರ್ನಿಯಲ್ಲಿ ದೆಹಲಿ ತಂಡವನ್ನು ಸೇರಿಕೊಂಡಿರುವ ಯಶ್ ಧುಲ್ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಯಶ್ ಧುಲ್ ಅವರನ್ನು 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತ್ತು.
ಇನ್ನು ಯಶ್ ಧುಲ್ ನಾಯಕನಾಗಿಯೂ ಯಶ ಸಾಧಿಸಿದ್ದಾರೆ. 19 ವಯೋಮಿತಿ ಏಷ್ಯಾಕಪ್ ಗೆದ್ದ ನಂತರ ಭಾರತ ಕಿರಿಯರ ತಂಡವನ್ನು ವಿಶ್ವಕಪ್ ನಲ್ಲಿ ಮುನ್ನಡೆಸಿದ್ದರು. ಆದ್ರೆ ಮೊದಲ ಪಂದ್ಯದ ನಂತರ ಯಶ್ ಧುಲ್ ಕೋವಿಡ್ ಸೋಂಕಿನಿಂದ ಬಳಲಿದ್ರು. ಬಳಿಕ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲಿಸಿ ತಂಡವನ್ನು ಫೈನಲ್ ಗೇರಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು ಮಣಿಸಿ ಐದನೇ ಬಾರಿ ವಿಶ್ವಕಪ್ ಗೆಲ್ಲುವಂತೆ ಮಾಡಲು ಯಶ್ ಧುಲ್ ಕೊಡುಗೆ ಮಹತ್ವದ್ದಾಗಿತ್ತು.
ಒಟ್ಟಿನಲ್ಲಿ ಯಶ್ ಧುಲ್ ಆರಂಭ ಚೆನ್ನಾಗಿಯೇ ಇದೆ. ಇದೇ ರೀತಿಯಲ್ಲಿ ತನ್ನ ಪ್ರತಿಭೆ, ಸಾಮಥ್ರ್ಯವನ್ನು ಪ್ರದರ್ಶಿಸಿದ್ರೆ ಟೀಮ್ ಇಂಡಿಯಾ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.