ಬಿಲಿಯನ್ ಡಾಲರ್ ಲೀಗ್ನ ಕ್ರಿಕೆಟಿಗರಿಗಿಂತ ಪಾಕಿಸ್ತಾನ ಕ್ರಿಕೆಟಿಗರು ಎಷ್ಟೊ ಉತ್ತಮರು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮುಖ್ಯಸ್ಥ ರಮೀಜ್ ರಾಜಾ ಟೀಮ್ ಇಂಡಿಯಾದ ಕಾಲೆಳೆದಿದ್ದಾರೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ನಿಂದ ಹೊರ ಬಿದ್ದಿರುವ ಕುರಿತು ರಮೀಜ್ ರಾಜಾ ವ್ಯಂಗ್ಯವಾಡಿದ್ದಾರೆ. ಆಸ್ಟ್ರೇಲಿಯಾಗೆ ಬಂದಿರುವ ರಮೀಜ್ ರಾಜಾ,
ಬಿಲಿಯನ್ ಡಾಲರ್ ಲೀಗ್ ತಂಡಗಳು ನಮ್ಮ ಹಿಂದೆ ಬೀಳುತ್ತಿವೆ. ನಾವು ಸರಿಯಾದ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಂಡಿದ್ದಾರೆ.
ರಮೀಜ್ ರಾಜಾ ಭಾರತ ತಂಡವನ್ನು ಈ ಹಿಂದೆ ಕೂಡ ಟೀಕಿಸಿದ್ದರು. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಸೋಲಿಸಿದಕ್ಕೆ ನಾಯಕ ಬಾಬರ್ ಅಜಂ ಅವರನ್ನು ಅಭಿನಂದಿಸಬೇಕೆಂದಿದ್ದರು.
ಫೈನಲ್ ಪಂದ್ಯದ ಕುರಿತು ಇಲ್ಲಿ ಯಾರು ಫೇವರಿಟ್ ಅಲ್ಲ 50-50 ಎಂದಿದ್ದಾರೆ. ಬಾಬರ್ ಬಳಗ ತುಂಬ ರಿಲ್ಯಾಕ್ಸ್ ಆಗಿದೆ.ಇಮ್ರಾನ್ ಖಾನ್ ವಿಶ್ವಕಪ್ ವಿಜೇತ ತಂಡಕ್ಕಿಂತ ಶಾಂತವಾಗಿದ್ದಾರೆ ಎಂದಿದ್ದಾರೆ.
ನಾವು ಸ್ವಲ್ಪ ಆತಂಕಗೊಂಡಿದ್ದೇವೆ.ಅವರು ಈ ಕ್ಷಣವನ್ನು ಆನಂದಿಸುತ್ತಿದ್ದಾರೆ ಎಂದು ಹೆಳಿದರು.