ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಾಗೂ ಆ್ಯಲೆಕ್ಸ್ ಹೇಲ್ಸ್ ಮೊದಲ ವಿಕೆಟ್ಗೆ 170 ರನ್ ಜೊತೆಯಾಟ ನೀಡಿ ದಾಖಲೆ ಬರೆದರು.
ಇದೇ ವಿಶ್ವಕಪ್ನ ಸೂಪರ್ 12ರ ಹಂತದಲ್ಲಿ ಡಿಕಾಕ್ ಹಾಗೂ ರೈಲಿ ರುಸ್ಸೌ 2ನೇ ವಿಕೆಟಗ್ 168 ರನ್ ಚಚ್ಚಿತ್ತು. ಈ ದಾಖಲೆಯನ್ನು ಬಟ್ಲರ್ ಹಾಗೂ ಹೇಲ್ಸ್ ಮುರಿದಿದ್ದಾರೆ. ಇದಲ್ಲದೇ 10 ವಿಕೆಟ್ಗಳೊಂದಿಗೆ ಹೈಯೆಸ್ಟ್ ರನ್ ಚೇಸ್ ಮಾಡಿದ ಮೂರನೆ ತಂಡ ಎಂಬ ಗೌರವಕ್ಕೆ ಪಾತ್ರವಾಗಿದೆ.
ಇದಕ್ಕೂ ಮುನ್ನ ಇದೇ ವರ್ಷ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 200 ರನ್ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೇ ಚೇಸ್ ಮಾಡಿತ್ತು.
2016ರಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ ವಿಕೆಟ್ ನಷ್ಟವಿಲ್ಲದೇ 169 ರನ್ ಚೇಸ್ ಮಾಡಿತ್ತು.

2021ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾರತ ನೀಡಿದ್ದ 152 ರನ್ ಗುರಿಯನ್ನು ವಿಕೆಟ್ ನಷ್ಟವಿಲ್ಲದೇ ಚೇಸ್ ಮಾಡಿತ್ತು.
2013ರಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ವಿಕೆಟ್ ನಷ್ಟವಿಲ್ಲದೇ 140 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.