Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022:  ವಾಂಖೆಡೆಯಲ್ಲಿ ಬಿಗ್​​ ಫೈಟ್​​, ಕೆಕೆಆರ್​​ ಹಣೆಬರಹ ಇಂದೇ ನಿರ್ಧಾರ, ಪ್ಲೇ-ಆಫ್​​ ಸ್ಥಾನದ ಲೆಕ್ಕಾಚಾರದಲ್ಲಿ ರಾಜಸ್ಥಾನ ರಾಯಲ್ಸ್​​

May 2, 2022
in Cricket, ಕ್ರಿಕೆಟ್
IPL 2022:  ವಾಂಖೆಡೆಯಲ್ಲಿ ಬಿಗ್​​ ಫೈಟ್​​, ಕೆಕೆಆರ್​​ ಹಣೆಬರಹ ಇಂದೇ ನಿರ್ಧಾರ, ಪ್ಲೇ-ಆಫ್​​ ಸ್ಥಾನದ ಲೆಕ್ಕಾಚಾರದಲ್ಲಿ ರಾಜಸ್ಥಾನ ರಾಯಲ್ಸ್​​

RR VS KKR

Share on FacebookShare on TwitterShare on WhatsAppShare on Telegram

ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡಕ್ಕೆ ಈ ಬಾರಿಯ ಐಪಿಎಲ್​​ನಲ್ಲಿ ಯಾವುದೂ ಕೈ ಹಿಡಿದಿಲ್ಲ. ರಿಟೈನ್ಡ್​​ ಆಟಗಾರರಾದ ವೆಂಕಟೇಶ್​ ಅಯ್ಯರ್​ ಮತ್ತು ವರುಣ್​​ ಚಕ್ರವರ್ತಿ ಅಟ್ಟರ್​​ ಫ್ಲಾಫ್​​. ಮಿಲಿಯನ್​​ ಡಾಲರ್​​​ ಕೊಟ್ಟು ಖರೀದಿಸಿದ ಪ್ಯಾಟ್ ಕಮಿನ್ಸ್​​​ಗೆ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅಜಿಂಕ್ಯಾ ರಹಾನೆಯಿಂದ ತಂಡಕ್ಕೆ ಉಪಯೋಗ ಆಗಲಿಲ್ಲ. ಕಳೆದ 4 ಪಂದ್ಯಗಳಲ್ಲಿ 4 ಬಾರಿ ಆರಂಭಿಕರನ್ನು ಬದಲಿಸಿದರೂ ಫಲಿತಾಂಶ ಬದಲಾಗಲಿಲ್ಲ. ವೆಂಕಟೇಶ್​​ ಅಯ್ಯರ್​​ ಅವರನ್ನು ಆರಂಭಿಕನ ಸ್ಥಾನದಿಂದ, ಮಿಡಲ್​​ ಆರ್ಡರ್​​ ಮತ್ತು ಫಿನಿಷರ್​​ ಸ್ಥಾನಕ್ಕೆ ಬದಲಿಸಿದರೂ ಪ್ರಯೋಜನವಾಗಿಲ್ಲ. ಆರಂಭದಲ್ಲಿ 4 ಪಂದ್ಯಗಳ ಪೈಕಿ 3 ನ್ನು ಗೆದ್ದಿದ್ದ ಕೊಲ್ಕತ್ತಾ ನೈಟ್​​ ರೈಡರ್ಸ್​ ಕೊನೆಯ 5 ಪಂದ್ಯಗಳನ್ನು ಸೋತಿದೆ.  ಅಂಕಪಟ್ಟಿಯಲ್ಲಿ ಕೇವಲ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.​​

ವೈಫಲ್ಯಗಳ ಮಧ್ಯೆ ತಂಡಕ್ಕೆ ಆಧಾರವಾಗಿರುವುದು ಆ್ಯಂಡ್ರೆ ರಸೆಲ್​​, ನಾಯಕ ಶ್ರೇಯಸ್​​ ಅಯ್ಯರ್​​ ಮತ್ತು ಅನುಭವಿ ಉಮೇಶ್​ ಯಾದವ್​​ ಮಾತ್ರ. ರಸೆಲ್​​ ಮಸಲ್​​ ಪವರ್​ ತೋರಿದ್ರೆ, ಶ್ರೇಯಸ್​​ ಸ್ಥಿರತೆಯ ಆಟವಾಡಿದ್ದಾರೆ. ಉಮೇಶ್​​​ ಬೌಲಿಂಗ್​​ ನಲ್ಲಿ ಮಿಂಚಿದ್ದಾರೆ. ಸುನೀಲ್​​ ನರೈನ್​​, ಬಾಬಾ ಇಂದ್ರಜಿತ್​​, ನಿತೀಶ್​​ ರಾಣಾ ಸೇರಿದಂತೆ ಎಲ್ಲಾ ಆಟಗಾರರು ಮಿಂಚಿದರೆ ಮಾತ್ರ ತಂಡಕ್ಕೆ ಉಳಿಗಾಲ. ಒಂದು ವೇಳೆ ಈ ಪಂದ್ಯವನ್ನು ಸೋತರೆ ಕೊಲ್ಕತ್ತಾ ತಂಡದ ಪ್ಲೆ-ಆಫ್​ ಕನಸಿಗೆ ಪೆಟ್ಟು ಬೀಳುತ್ತದೆ.

ರಾಜಸ್ಥಾನ ರಾಯಲ್ಸ್​​ ತಂಡ ಹೆಚ್ಚು ಏನನ್ನೂ ಬಯಸುತ್ತಿಲ್ಲ. ಫಿನಿಷರ್​​ ಶಿಮ್ರನ್​​ ಹೆಟ್ಮಾಯರ್​​ ರಿಂದ ಸ್ಥಿರತೆ ಬಯಸುತ್ತಿದೆ.  ನಾಯಕ ಸಂಜು ಸ್ಯಾಮ್ಸನ್​​ ಮತ್ತು ಆರಂಭಿಕ ದೇವದತ್​​ ಪಡಿಕಲ್​ ತುಸು ಹೆಚ್ಚು ಕೊಡುಗೆ ನೀಡಬೇಕಿದೆ. ಬ್ಯಾಟಿಂಗ್​ ಲೀಡರ್​​ ಜೋಸ್​ ಬಟ್ಲರ್​ ಜೊತೆಗೆ ಇತರೆ ಬ್ಯಾಟ್ಸಮನ್​​ಗಳಾದ ಪರಾಗ್​​ ಮತ್ತು ಮಿಚೆಲ್​​ ಮಿಂಚಿದರೆ ಕಟ್ಟಿಹಾಕುವುದು ಕಷ್ಟ.  ಬೌಲಿಂಗ್​ ನಲ್ಲಿ ಯಜುವೇಂದ್ರ ಚಹಲ್​​ ಚಮಕ್​ ತೋರಿದ್ದಾರೆ. ಅಶ್ವಿನ್​​ ಸೈಲೆಂಟ್​ ಫರ್ಫಾಮರ್​​. ಪ್ರಸಿಧ್​ ಮತ್ತು ಕುಲ್​​ ದೀಪ್​​ ಸೇನ್​​ ವಿಕೆಟ್​​ ಬೇಟೆಯಾಡಿದ್ದಾರೆ. ಅನುಭವಿ ಟ್ರೆಂಟ್​ ಬೋಲ್ಟ್​ ಒಂಚೂರು ಮೊನಚು ಕಂಡುಕೊಳ್ಳಬೇಕಿದೆ. ಇಷ್ಟಾದರೆ ರಾಜಸ್ಥಾನ ತಂಡವನ್ನು ಸೋಲಿಸುವುದು ಕಷ್ಟ.

ಅಚ್ಚರಿ ಅಂದರೆ ರಾಜಸ್ಥಾನ ರಾಯಲ್ಸ್​​ 6 ಬಾರಿ ಮೊದಲು ಬ್ಯಾಟಿಂಗ್​​ ಮಾಡಿ ಪಂದ್ಯ ಗೆದ್ದಿದೆ. ಆದರೆ ಚೇಸಿಂಗ್​​ ನಲ್ಲಿ ಯಶಸ್ಸು ಸಾಧಿಸಿಲ್ಲ. ಹೀಗಾಗಿ ವಾಂಖೆಡೆಯಲ್ಲಿ ಸಖತ್​​ ಮ್ಯಾಚ್​​ ನಡೆಯಲಿದೆ. ರಾಜಸ್ಥಾನ ಗೆದ್ದರೆ ಪ್ಲೇ-ಆಫ್​​ ಗೆ ಹತ್ತಿರವಾಗಲಿದೆ. ಒಂದು ಸೋಲು ಕೆಕೆಆರ್​ ತಂಡವನ್ನು ಅಂತಿಮ 4ರ ಘಟ್ಟದಿಂದ ದೂರ ಮಾಡಲಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022kkrKKR VS RRRR
ShareTweetSendShare
Next Post
 IPL 2022:  KKR VS RR, ಇದು ಜಸ್ಟ್​ ನಂಬರ್​ ಗೇಮ್​​ ಅಲ್ಲ…!

 IPL 2022:  KKR VS RR, ಇದು ಜಸ್ಟ್​ ನಂಬರ್​ ಗೇಮ್​​ ಅಲ್ಲ…!

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram