ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಿಗೆ ಇದು ಆಲ್ ಮೋಸ್ಟ್ ಡು ಆರ್ ಡೈ ಗೇಮ್. ರಾಜಸ್ಥಾನ ರಾಯಲ್ಸ್ಗೆ ಪ್ಲೇ-ಆಫ್ ಸ್ಥಾನ ಗಟ್ಟಿಮಾಡಿಕೊಳ್ಳಲಿರುವ ಅವಕಾಶ. ಆದರೆ ಎರಡೂ ತಂಡಗಳ ರಣತಂತ್ರ ಮಾತ್ರ ಗಮನ ಸೆಳೆಯುತ್ತಿದೆ.
ಗೇಮ್ ಪ್ಲಾನ್:
- ಈ ಬಾರಿಯ ಐಪಿಎಲ್ನಲ್ಲಿ ಬಟ್ಲರ್ ಸಿಡಿಸಿರುವ 3 ಶತಕಗಳ ಪೈಕಿ ಒಂದು ಶತಕ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧವೇ ಆಗಿದೆ. ಬಟ್ಲರ್ 60 ಎಸೆತಗಳಲ್ಲಿ 103 ರನ್ ಗಳಿಸಿದ್ದರು.
- ನರೈನ್ ಎದುರು ರಾಜಸ್ಥಾನ ಆರಂಭಿಕ ಜೋಡಿಯಾದ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕಲ್ ಸಾಕಷ್ಟು ಪರದಾಡಿದ್ದಾರೆ. ಬಟ್ಲರ್ ನರೈನ್ ವಿರುದ್ಧ 27 ಎಸೆತಗಳಲ್ಲಿ ಕೇವಲ 29 ರನ್ ಗಳಿಸಿರುವುದು ಮಾತ್ರವಲ್ಲ ಎರಡು ಬಾರಿ ಔಟ್ ಆಗಿದ್ದಾರೆ. ಪಡಿಕಲ್ ನರೈನ್ಗೆ ಒಮ್ಮೆ ಬಲಿಯಾಗದ್ದಾರೆ. ಹೀಗಾಗಿ ನರೈನ್ ಹೊಸ ಚೆಂಡಿನಲ್ಲಿ ಬೌಲಿಂಗ್ ಆರಂಭಿಸಿದರೂ ಅಚ್ಚರಿ ಇಲ್ಲ.
ಆಶ್ವಿನ್ ಫ್ಯಾಕ್ಟರ್:
- ಅಶ್ವಿನ್, ತಮ್ಮ ಬೌಲಿಂಗ್ ಮೂಲಕ ವೆಂಕಟೇಶ್ ಅಯ್ಯರ್ ಮತ್ತು ಆ್ಯಂಡ್ರೆ ರಸೆಲ್ ರನ್ನು ಕಟ್ಟಿ ಹಾಕಿದ್ದಾರೆ. ವೆಂಕಟೇಶ್ 94ರ ಸ್ಟ್ರೈಕ್ ರೇಟ್ ನಲ್ಲಿ ಅಶ್ವಿನ್ ವಿರುದ್ಧ ರನ್ ಗಳಿಸಿದರೆ, ರಸೆಲ್ ಎರಡು ಬಾರಿ ಔಟಾಗಿರುವುದಲ್ಲದರೆ 100ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
- ಆದರೆ ಸುನೀಲ್ ನರೈನ್ ಮತ್ತು ನಿತೀಶ್ ರಾಣಾ ಅಶ್ವಿನ್ ಬೌಲಿಂಗ್ ಅನ್ನು ಚಿಂದಿ ಉಡಾಯಿಸಿದ್ದಾರೆ. ನರೈನ್ ಅಶ್ವಿನ್ ವಿರುದ್ಧ 22 ಎಸೆತಗಳಲ್ಲಿ 60 ರನ್ ಸಿಡಿಸಿದ್ದರೆ, ನಿತೀಶ್ ರಾಣಾ 38 ಎಸೆತಗಳಲ್ಲಿ 76 ರನ್ ಸಿಡಿಸಿದ್ದಾರೆ. ಶ್ರೇಯಸ್ 55 ಎಸೆತಗಳಲ್ಲಿ 72 ರನ್ ಸಿಡಿಸಿದ್ದಾರೆ. ಹೀಗಾಗಿ ಅಶ್ವಿನ್ ಅವರನ್ನು ಇನ್ನಿಂಗ್ಸ್ ನ ಕೊನೆಯಲ್ಲಿ ಬೌಲಿಂಗ್ಗೆ ಇಳಿಸಿದರೂ ಅಚ್ಚರಿ ಇಲ್ಲ.
ನಂಬರ್ ಗೇಮ್:
- ಕೆಕೆಆರ್ ಆರಂಭಿಕರು ಈ ಬಾರಿಯ ಐಪಿಎಲ್ ನಲ್ಲಿ ಮುಗ್ಗರಿಸಿದ್ದಾರೆ. ಕೆಕೆಆರ್ ಆರಂಭಿಕರ ಸರಾಸರಿ ಕೇವಲ 14.2 ರಷ್ಟಿದೆ. ಚೆನ್ನೈ 12.6 ಸರಾಸರಿ ಹೊಂದಿದೆ. ಕೆಕೆಆರ್ 5 ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿದೆ.
- ಸಂಜು ಸ್ಯಾಮ್ಸನ್ ಐಪಿಎಲ್ ನಲ್ಲಿ ಸುನೀಲ್ ನರೈನ್ ವಿರುದ್ಧ 3 ಬಾರಿ ಔಟ್ ಆಗಿದ್ದಾರೆ. ಚಹಲ್ ಆರ್ ಸಿಬಿ ಪರ ಆಡುತ್ತಿದ್ದಾಗ ಸ್ಯಾಮ್ಸನ್ ಅವರನ್ನು 5 ಬಾರಿ ಔಟ್ ಮಾಡಿದ್ದರು.
- ವಾಂಖೆಡೆಯಲ್ಲಿ ಉಮೇಶ್ ಯಾದವ್ ಈ ಬಾರಿಯ ಐಪಿಎಲ್ ನಲ್ಲಿ 9 ವಿಕೆಟ್ ಪಡೆದಿದ್ದಾರೆ. ಕುಲ್ ದೀಪ್ ಯಾದವ್ ಬ್ರೆಬೋರ್ನ್ ಮೈದಾನದಲ್ಲಿ 9 ವಿಕೆಟ್ ಪಡೆದುಕೊಂಡಿದ್ದಾರೆ.
- ಬಟ್ಲರ್ ರಾಯಲ್ಸ್ ಪರವಾಗಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಬಟ್ಲರ್ ಸದ್ಯ 566 ರನ್ ಗಳಿಸಿದ್ದಾರೆ. ಈ ಹಿಂದೆ 2012ರಲ್ಲಿ ಅಜಿಂಕ್ಯಾ ರಹಾನೆ 5 60 ರನ್ ಗಳಿಸಿದ್ದೇ ರಾಯಲ್ಸ್ ಪರವಾಗಿ ಸೀಸನ್ ಒಂದರಲ್ಲಿ ಬೆಸ್ಟ್ ಸ್ಕೋರ್ ಆಗಿತ್ತು.