Saturday, January 28, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಶನಿವಾರದ ಸೂಪರ್​​ ಮ್ಯಾಚ್​​, ಫ್ರೆಶ್​​ ಆರಂಭದ ನಿರೀಕ್ಷೆಯಲ್ಲಿ ರಾಜಸ್ಥಾನ, ಪಂಜಾಬ್​​​

May 7, 2022
in Cricket, ಕ್ರಿಕೆಟ್
IPL 2022: ಶನಿವಾರದ ಸೂಪರ್​​ ಮ್ಯಾಚ್​​, ಫ್ರೆಶ್​​ ಆರಂಭದ ನಿರೀಕ್ಷೆಯಲ್ಲಿ ರಾಜಸ್ಥಾನ, ಪಂಜಾಬ್​​​

PBKS VS RR

Share on FacebookShare on TwitterShare on WhatsAppShare on Telegram

ರಾಜಸ್ಥಾ ರಾಯಲ್ಸ್​​​ ಮತ್ತು ಪಂಜಾಬ್​​ ಕಿಂಗ್ಸ್​​​ ತಂಡಗಳು ಐಪಿಎಲ್​​​ನ 52ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಆದರೆ ಎರಡೂ ತಂಡಗಳ ಕಥೆ ವಿಭಿನ್ನವಾಗಿದೆ. ರಾಜಸ್ಥಾನ ಆರಂಭದಲ್ಲಿ ಅಬ್ಬರಿಸಿ, ಈಗ ಸೋಲಿನ ಸಂಕಟ ಎದುರಿಸುತ್ತಿದೆ.  ಪಂಜಾಬ್​​​ ಕಿಂಗ್ಸ್​​ ಆರಂಭದಲ್ಲಿ ತೋರಿದ ಪ್ರದರ್ಶನವನ್ನು ಮುಂದುವರೆಸಿಲ್ಲ. ಕೊನೆಯ 5 ಪಂದ್ಯಗಳಲ್ಲಿ ಪಂಜಾಬ್​​ 3 ಬಾರಿ ಸೋಲಿನ ಕಹಿಯುಂಡಿದೆ. ರಾಜಸ್ಥಾನ ರಾಯಲ್ಸ್​​ ಸತತ 2 ಸೋಲುಗಳನ್ನು ಕಂಡಿದೆ.

ಪಾಯಿಂಟ್​ ಟೇಬಲ್​​ನಲ್ಲಿ ರಾಜಸ್ಥಾನ 3ನೇ ಸ್ಥಾನದಲ್ಲಿದೆ. ಪಂಜಾಬ್​​ ಕಿಂಗ್ಸ್​​ 7ರಲ್ಲಿದೆ. ಎರಡೂ ತಂಡಗಳಿಗೂ ತಲಾ 4 ಪಂದ್ಯಗಳು ಬಾಕಿ ಉಳಿದಿವೆ. ರಾಜಸ್ಥಾನ 12 ಅಂಕ ಪಡೆದುಕೊಂಡು ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಪಂಜಾಬ್​​​ 10 ಅಂಕ ಮಾತ್ರ ಪಡೆದಿದೆ. ಹೀಗಾಗಿ ಉಳಿದ ನಾಲ್ಕು ಪಂದ್ಯಗಳಲ್ಲೂ ಪಂಜಾಬ್​ಗೆ ಗೆಲುವು ಅನಿವಾರ್ಯ ರಾಜಸ್ಥಾನ ರಾಯಲ್ಸ್​​ಗೆ ಅಗ್ರ 2 ಸ್ಥಾನಗಳಲ್ಲಿ ಲೀಗ್​ ಹಂತ ಮುಗಿಸುವ ಕನಸು ಇರುವುದರಿಂದ ಅದಕ್ಕೂ ಗೆಲುವು ಬೇಕೇ ಬೇಕು.

ಪಂಜಾಬ್​​ ಕಿಂಗ್ಸ್​​ ನಾಯಕ ಮಯಾಂಕ್​​ ಅಗರ್ವಾಲ್​​ ಟೂರ್ನಿಯಲ್ಲಿ ಇಲ್ಲಿ ತನಕ ಬಿಗ್​​ ಸ್ಕೋರ್​​ ಗಳಿಸಿಲ್ಲ.  ಇವರ ಜೊತೆ ಜಾನಿ ಬೇರ್​​ ಸ್ಟೋವ್​​ ಕೂಡ ಎಡವಿದ್ದಾರೆ. ಹೀಗಾಗಿ ಬ್ಯಾಟಿಂಗ್​​​ ಹೊಣೆಯೆಲ್ಲವೂ ಶಿಖರ್​​ ಧವನ್​​, ಲಿಯಂ ಲಿವಿಂಗ್​​ ಸ್ಟೊನ್​​​ ಮತ್ತು ಭಾನುಕಾ ರಾಜಪಕ್ಸ ಹೆಗಲ ಮೇಲೆ ಬಿದ್ದಿದೆ. ವಿಕೆಟ್​​ ಕೀಪರ್​​ ಜಿತೇಶ್​​ ಶರ್ಮಾ ಕೂಡ ಮಿಂಚಿನ ಆಟ ಆಡುವ ಅನಿವಾರ್ಯತೆ ಇದೆ.

ಬೌಲಿಂಗ್​​ನಲ್ಲಿ ಪಂಜಾಬ್​​ ಬಲಿಷ್ಠವಾಗಿದೆ. ಕಗಿಸೋ ರಬಾಡಾ ಪರ್ಪಲ್​​ ಕ್ಯಾಪ್​​​ ಚೇಸಿಂಗ್​​ನಲ್ಲಿದ್ದಾರೆ. ಅರ್ಶದೀಪ್​​​ ಡೆತ್​ ಓವರ್​​ ಸ್ಪೆಷಲಿಸ್ಟ್​​ ಆಗಿದ್ದಾರೆ. ರಾಹುಲ್​​ ಚಹರ್​​​ ಟ್ರಂಪ್​​ ಕಾರ್ಡ್​ ಸ್ಪಿನ್ನರ್​. ರಿಷಿ ಧವನ್​​, ಸಂದೀಪ್​​ ಶರ್ಮಾ ಸ್ವಿಂಗ್​​ ಮೂಲಕ ಎದುರಾಳಿಯನ್ನು ಕಾಡುತ್ತಿದ್ದಾರೆ. ಲಿವಿಂಗ್​​ ಸ್ಟೊನ್​​ ಕೂಡ ಬೌಲಿಂಗ್​​ ಮಾಡಬಲ್ಲರು.

ರಾಜಸ್ಥಾನಕ್ಕೆ ಹೆಚ್ಚು ತಲೆನೋವಿಲ್ಲ. ಆದರೂ ಗೆಲುವು ದೂರವಾಗಿದೆ ಅನ್ನುವ ಯೋಚನೆ ಇದ್ದೇ ಇದೆ. ಜೋಸ್​​ ಬಟ್ಲರ್​​​​​, ನಾಯಕ ಸಂಜು ಸ್ಯಾಮ್ಸನ್​​​ ಮತ್ತು ಶಿಮ್ರನ್​​ ಹೆಟ್ಮಾಯರ್​​ ರನ್​​ ಬೇಟೆಯಲ್ಲಿದ್ದಾರೆ. ಆದರೆ ದೇವದತ್​​ ಪಡಿಕಲ್​​, ಕರುಣ್​​ ನಾಯರ್​​​​ ವೈಫಲ್ಯ ತಂಡಕ್ಕೆ ಚಿಂತೆ ಆಗಿದೆ. ರಿಯಾನ್​​ ಪರಾಗ್​​​​ ನಿಂತು ಆಡಿದರೆ ದೊಡ್ಡ ಮೊತ್ತ ಗ್ಯಾರೆಂಟಿ. ಬೌಲಿಂಗ್​​ ನಲ್ಲಿ ರಾಜಸ್ಥಾನಕ್ಕೆ ಚಿಂತೆ ಇಲ್ಲ. ಅಶ್ವಿನ್​​ ಮತ್ತು ಚಹಲ್​​ ಸ್ಪಿನ್​​ ಜೋಡಿ ಬೌಲಿಂಗ್​ಗೆ ಕಂಟ್ರೋಲ್​​ ಕೊಟ್ಟಿದೆ. ಕುಲ್​ ದೀಪ್​​ ಸೇನ್​​ ಮತ್ತು ಪ್ರಸಿಧ್​ ಕೃಷ್ಣ ವಿಕೆಟ್​ ಬೇಟೆಯಾಡಿದ್ದಾರೆ. ಟ್ರೆಂಟ್​​ ಬೋಲ್ಟ್​​ ಮಂಕಾಗಿದ್ದರೂ ಎಫೆಕ್ಟಿವ್​​ ಅನ್ನುವುದರಲ್ಲಿ ಸಂಶಯವಿಲ್ಲ.

ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುವುದರಿಂದ ವೇಗದ ಬೌಲರ್​​ ಗಳಿಂದ ಸೂಪರ್​​ ಪ್ರದರ್ಶನದ ನಿರೀಕ್ಷೆ ಇದೆ. ಶನಿವಾರದ ಮೊದಲ ಪಂದ್ಯವೂ ಇದಾಗಿರುವುದರಿಂದ  ವೀಕೆಂಡ್​​ ಮಸ್ಸಿ ಜೋರಾಗಿ ಇರಲಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022PBKSRR
ShareTweetSendShare
Next Post
IPL 2022: ಪಡಿಕಲ್ ಪರದಾಟ, ಬಟ್ಲರ್​​​ ಆಕರ್ಷಕ ಆಟ,  ಪಂಜಾಬ್​​, ರಾಜಸ್ಥಾನಕ್ಕೆ ಕಾಡುತ್ತಿದೆ ಸೋಲಿನ ಕಾಟ..!

IPL 2022: ಪಡಿಕಲ್ ಪರದಾಟ, ಬಟ್ಲರ್​​​ ಆಕರ್ಷಕ ಆಟ,  ಪಂಜಾಬ್​​, ರಾಜಸ್ಥಾನಕ್ಕೆ ಕಾಡುತ್ತಿದೆ ಸೋಲಿನ ಕಾಟ..!

Leave a Reply Cancel reply

Your email address will not be published. Required fields are marked *

Stay Connected test

Recent News

Ind vs Nz T20: ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ

Ind vs Nz T20: ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ

January 27, 2023
Tennis: ಕೊನೆಯ ಗ್ರ್ಯಾನ್ ಸ್ಲ್ಯಾಮ್‍ ನಲ್ಲಿ ಕೈಗೆಟಕದ ಪ್ರಶಸ್ತಿ: ಭಾವುಕರಾದ ಸಾನಿಯಾ

Tennis: ಕೊನೆಯ ಗ್ರ್ಯಾನ್ ಸ್ಲ್ಯಾಮ್‍ ನಲ್ಲಿ ಕೈಗೆಟಕದ ಪ್ರಶಸ್ತಿ: ಭಾವುಕರಾದ ಸಾನಿಯಾ

January 27, 2023
under-19 Womens T20 WC: ಭಾರತ-ಇಂಗ್ಲೆಂಡ್ ಫೈನಲ್ ಗೆ

under-19 Womens T20 WC: ಭಾರತ-ಇಂಗ್ಲೆಂಡ್ ಫೈನಲ್ ಗೆ

January 27, 2023
T20: ಭಾರತಕ್ಕೆ 177 ರನ್ ಗುರಿ ನೀಡಿದ ನ್ಯೂಜಿಲೆಂಡ್

T20: ಭಾರತಕ್ಕೆ 177 ರನ್ ಗುರಿ ನೀಡಿದ ನ್ಯೂಜಿಲೆಂಡ್

January 27, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram