ರಾಜಸ್ಥಾನ ರಾಯಲ್ಸ್ ಬೇಕಾದ ಸಮಯದಲ್ಲಿ ಎಡವುತ್ತಿದೆ. ಹೀಗಾಗಿ ಐಪಿಎಲ್ನ ಚೋಕರ್ಸ್ ಅನ್ನುವ ಹಣೆ ಪಟ್ಟಿ ಈ ತಂಡಕ್ಕಿದೆ. ಈ ಬಾರಿಯೂ ರಾಜಸ್ಥಾನ ಆರಂಭದಲ್ಲಿ ಅಬ್ಬರಿಸಿತ್ತು. ಆದರೆ ಈಗ ಮಂಕಾಗಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್ ಕೂಡ ಅದೇ ಹಾದಿಯಲ್ಲಿದೆ. ಹೀಗಾಗಿ ಎರಡೂ ತಂಡಗಳ ನಡುವಿನ ರಣತಂತ್ರ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದೆ.
ಪಡಿಕಲ್ ಪರದಾಟ:
ಐಪಿಎಲ್ ಸೀಸನ್ 15ರಲ್ಲಿ ದೇವದತ್ ಪಡಿಕಲ್ ರನ್ಗಾಗಿ ಪರದಾಡಿದ್ದಾರೆ. ಮುಂಬೈ ವಿರುದ್ಧ ಎದುರಿಸಿದ್ದ 15 ಬಾಲ್ಗಳಲ್ಲಿ 12 ಡಾಟ್ ಬಾಲ್ ಗಳನ್ನು ಆಡಿದ್ದರು. ಕೆಕೆಆರ್ ವಿರುದ್ಧ ಕೇವಲ 5 ಎಸೆತಗಳನ್ನು ಮಾತ್ರ ಎದುರಿಸಿ ಔಟಾಗಿದ್ದರು. ಆರ್ಸಿಬಿ ವಿರುದ್ಧ 7 ಬಾಲ್ ಗಳ ಇನ್ನಿಂಗ್ಸ್ ನಲ್ಲಿ 6 ಬಾಲ್ ಡಾಟ್ ಆಗಿತ್ತು. ಹೀಗಾಗಿ ಪಡಿಕಲ್ ಬದಲು ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಜೈಸ್ವಾಲ್ ಈ ಬಾರಿಯ ಐಪಿಎಲ್ನಲ್ಲಿ 3 ಪಂದ್ಯಗಳಿಂದ ಕೇವಲ 25 ರನ್ ಮಾತ್ರಗಳಿಸಿದ್ದರು.
ರಾಯಲ್ಸ್ ಕಳಪೆ ಆಟ
ರಾಯಲ್ಸ್ ಕೊನೆಯ ಮೂರು ಪಂದ್ಯಗಳಲ್ಲಿ 144, 158 ಮತ್ತು 152 ರನ್ ಮಾತ್ರ ಕಲೆಹಾಕಿದೆ. ಬಟ್ಲರ್ ಔಟಾದರೆ ರಾಯಲ್ಸ್ ಬ್ಯಾಟಿಂಗ್ ಬಲ ಕುಸಿಯುತ್ತದೆ ಅನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ನಂಬರ್ ಗೇಮ್:
ವಾಂಖೆಡೆಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಕಳೆದ 5 ಪಂದ್ಯಗಳಲ್ಲಿ 2 ಬಾರಿ ಗೆದ್ದಿವೆ. ಕಳೆದ ವಾರ ಈ ಮೈದನಾದಲ್ಲಿ ನಡೆದ ಹಗಲು ಹೊತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿತ್ತು.
ಪರ್ಪಲ್ ಕ್ಯಾಪ್ ಹೋರಾಟ ಬೌಲರ್ ಗಳ ನಡುವೆ ಹೋರಾಟದ ಕಿಚ್ಚು ಹತ್ತಿಸಿದೆ. ಚಹಲ್ 19 ವಿಕೆಟ್ ಗಳೊಂದು ಆರೇಂಜ್ ಕ್ಯಾಪ್ ಪಡೆದಿದ್ದರೆ, ರಬಾಡಾ 17 ವಿಕೆಟ್ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ 2016ರ ಐಪಿಎಲ್ ನಲ್ಲಿ 973 ರನ್ ಗಳಿಸಿ ಆರೇಂಜ್ ಕ್ಯಾಪ್ ಪಡೆದಿದ್ದರು. ಜೋಸ್ ಬಟ್ಲರ್ ಈ ಸಾಧನೆ ಮಾಡಬೆಕಾದರೆ ಇನ್ನೂ ಕೂಡ 385 ರನ್ಗಳು ಬೇಕಿದೆ.