ಪ್ರದೀಪ್ ನರ್ವಾಲ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ ಯುಪಿ ಯೋಧಾಸ್ ತಂಡ ಯೂ ಮುಂಬಾ ವಿರುದ್ಧ 38-28 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸತತ ನಾಲ್ಕನೆ ಗೆಲುವು ದಾಖಲಿಸಿದೆ.
ಇಲ್ಲಿನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧಾದಲ್ಲಿ ಯುಪಿ ಯೋಧಾಸ್ ತಂಡ 19-14 ಅಂಕಗಳಿಂದ ಮುನ್ನಡೆ ಪಡೆದಿತ್ತು. ಯೋಧಾಸ್ ತಂಡದ ಪರ ರೈಡರ್ಗಳಾದ ಪ್ರದೀಪ್ ನರ್ವಾಲ್ 13, ರೋಹಿತ್ ತೋಮಾರ್ 8 ಅಂಕ ಪಡೆದರು.
ಯೂ ಮುಂಬಾ ಪರ ರೈಡರ್ಗಳಾದ ಗುಮಾನ್ ಸಿಂಗ್ 10 ಅಂಕ, ಆಶಿಶ್ ಹಾಗೂ ಹೈದರ್ ಅಲಿ ತಲಾ 3 ಅಂಕಗಳನ್ನು ತಂದುಕೊಟ್ಟರು. ಡಿಫೆಂಡರ್ ಸುರೇಂದರ್ ಸಿಂಗ್ 4 ಅಂಕ ತಂದುಕೊಟ್ಟರು. ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಪಾಟ್ನಾ ವಿರುದ್ಧ 40-34 ಅಂಕಗಳಿಂದ ಗೆಲುವು ದಾಖಲಿಸಿತು. ಗುಜರಾತ್ ಪರ ಮಹೇಂದ್ರ ರಜಪೂತ್ 12 ಅಂಕ ತಂದುಕೊಟ್ಟರು. ಪಾಟ್ನಾ ಪರ ರೋಹಿತ್ ಗುಳಿಯಾ ಆಲ್ರೌಂಡರ್ ರೋಹಿತ್ ಗುಳಿಯಾ 12 ಅಂಕ ತಂದುಕೊಟ್ಟರು.