ಮಹಾರಾಷ್ಟ್ರ ವಿರುದ್ಧ 5 ವಿಕೆಟ್‍ಗಳ ಗೆಲುವು ದಾಖಲಿಸಿದ ಸೌರಾಷ್ಟ್ರ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಎರಡನೆ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಶುಕ್ರವಾರ ಅಹಮದಾಬಾದ್‍ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ನಿಗದಿತ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಸೌರಾಷ್ಟ್ರ ತಂಡ 46.3 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿತು.

ಮಹಾರಾಷ್ಟ್ರ ಪರ ಋತುರಾಜ್ ಗಾಯಕ್ವಾಡ್ 108 ರನ್, ಅಜಿಂ ಖಾಜಿ 37 ರನ್ ಹೊಡೆದರು. ಸೌರಾಷ್ಟ್ರ ಪರ ಚಿರಾಗ್ ಜಾನಿ 43ಕ್ಕೆ 3 ವಿಕೆಟ್ ಪಡೆದು ಮಿಂಚಿದರು.
ಸೌರಾಷ್ಟ್ರ ಪರ ಓಪನರ್ ಶೆಲ್ಡನ್ ಜಾಕ್ಸನ್ ಅಜೇಯ 133 ರನ್, ಹಾರ್ವಿಕ್ ದೇಸಾಯಿ 50, ಚಿರಾಗ್ ಜಾನಿ ಅಜೇಯ 30 ರನ್ ಹೊಡೆದರು.