ರೈಡರ್ ಗುಮಾನ್ ಸಿಂಗ್ ಅವರ ಅಮೋಘ ರೈಡಿಂಗ್ ನೆರವಿಂದ ಯೂ ಮುಂಬಾ ಪುಣೇರಿ ಪಲ್ಟಾನ್ ವಿರದ್ಧು 34-33 ಅಂಕಗಳಿಂದ ಗೆಲುವು ದಾಖಲಿಸಿದೆ.
ಪುಣೆಯ ಶಿವ ಛತ್ರಪತಿ ಸೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಒಂದು ಅಂಕದ ಅಂತರದಿಂದ ಯೂ ಮುಂಬಾ ಜಯ ಗಳಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳು 15-15 ಸಮಬಲದ ಹೋರಾಟ ನೀಡಿದವು.
ಯೂ ಮುಂಬಾ ಪರ ಗುಮಾನ್ ಸಿಂಗ್ ರೈಡಿಂಗ್‍ನಲ್ಲಿ 13 ಅಂಕ, ಆಶೀಶ್ 6 ಅಂಕ ತಂದುಕೊಟ್ಟರು. ಪುಣೇರಿ ಪರ ಮೋಹಿತ್ ಗೊಯತ್ 13 ಅಂಕ, ಪಂಕಜ್ 3 ಅಂಕ ತಂದುಕೊಟ್ಟರು.
ಇದಕ್ಕೂ ಮುನ್ನ ನಡೆದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ತಂಡ ಹರ್ಯಾಣ ಸ್ಟೀಲರ್ಸ್ ವಿರುದ್ಧ 40-34 ಅಂಕಗಳಿಂದ ಗೆಲುವು ಸಾಸಿತು. ಇದರೊಂದಿಗೆ ಸ್ಟೀಲರ್ಸ್ ಸತತ ಎರಡನೆ ಸೋಲು ಅನುಭವಿಸಿತು.
ಯೋಧಾಸ್ ಪರ ರೈಡರ್‍ಗಳಾದ ಸುರೇಂದರ್ ಗಿಲ್ 11 ಅಂಕ, ಪ್ರದೀಪ್ ನರ್ವಾಲ್ 8 ಅಂಕ ತಂದುಕೊಟ್ಟರು. ಹರ್ಯಾಣ ಪರ ರೈಡïಗಲಾದ ಮಂಜೀತ್ 12 ಅಂಕ, ಪ್ರಪಂಜನ್ 8 ಅಂಕ ತಂದುಕೊಟ್ಟರು.