ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಚುಟುಕು ಕ್ರಿಕೆಟ್ ಮಹಾಸಮರದ ಅಂತಿಮ ಕದನಕ್ಕೆ ಐತಿಹಾಸಿಕ ಮೆಲ್ಬೋರ್ನ್(Melbourne) ಅಂಗಳ ಸಜ್ಜಾಗಿದೆ. ಟಿ20 ಚಾಂಪಿಯನ್‌ಪಟ್ಟಕ್ಕಾಗಿ ಪಾಕಿಸ್ತಾನ(Pakistan) ಹಾಗೂ ಇಂಗ್ಲೆಂಡ್(England) ತಂಡಗಳು ಹಣಾಹಣಿ ನಡೆಸಲಿವೆ.
ಫೈನಲ್ ಫೈಟ್‌ನಲ್ಲಿ ಯಾರು ಗೆಲ್ತಾರೆ, ಯಾರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಾರೆಂಬ ಎಲ್ಲಾ ಕುತೂಹಲಗಳಿಗೆ ನ.13ರಂದು ಉತ್ತರ ದೊರೆಯಲಿದೆ. ಪ್ರಸಕ್ತ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಎರಡು ತಂಡಗಳ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲೂ ಅಬ್ಬರಿಸೋಕ್ಕೆ ಸಜ್ಜಾಗಿದ್ದಾರೆ. ಇಂಗ್ಲೆಂಡ್ ತಂಡದ ಆರಂಭಿಕ ಜೋಡಿ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದರೆ. ಇವರಿಗೆ ಟಕ್ಕರ್ ಕೊಡೋಕ್ಕೆ ಪಾಕಿಸ್ತಾನದ ನಾಯಕ ಬಾಬರ್ ಆಜ಼ಂ ಹಾಗೂ ಮೊಹಮ್ಮದ್ ರಿಜ್ವಾನ್ ಸಹ ತಯಾರಾಗಿದ್ದಾರೆ.

ಮತ್ತೊಂದೆಡೆ ಪಾಕಿಸ್ತಾನದ ಮೊಹಮ್ಮದ್ ಹ್ಯಾರಿಸ್ ಸ್ಪೋಟಕ ಆಟದ ಮೂಲಕ ಅಬ್ಬರಿಸಲು ಕಾಯುತ್ತಿದ್ದರೆ. ಇಂಗ್ಲೆಂಡ್‌ನ ಲಿಯಮಾ ಲಿವಿಂಗ್‌ಸ್ಟೋನ್ ಸಹ ಬಿರುಸಿನ ಆಟವಾಡಲಿದ್ದಾರೆ. ಬೌಲಿಂಗ್‌ನಲ್ಲೂ ಎರಡು ತಂಡದಲ್ಲಿ ಬಲಾಢ್ಯ ಆಟವಾರರಿದ್ದು, ಶಾಹೀನ್ ಅಫ್ರೀದಿ, ಹ್ಯಾರಿಸ್ ರಾಫ್, ನಸೀಮ್ ಶಾ, ಶದಾಬ್ ಖಾನ್ ತಂಡದ ಪ್ರಮುಖ ಅಸ್ತ್ರಗಳಾಗಿದ್ದರೆ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಆದಿಲ್ ರಶೀದ್, ಕ್ರಿಸ್ ಜೋರ್ಡನ್ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಆದರೆ 2022ರ T20 ವಿಶ್ವಕಪ್ ಫೈನಲ್ ಆರಂಭಕ್ಕೂ ಮುನ್ನ ಈವರೆಗೂ ನಡೆದಿರುವ T20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಾರೆಲ್ಲಾ ʼಪ್ಲೇಯರ್ ಆಫ್ ದಿ ಮ್ಯಾಚ್ʼ ಪ್ರಶಸ್ತಿ ಪಡೆದು ಮಿಂಚಿದ್ದಾರೆ ಅನ್ನೋದನ್ನ ಗಮನಿಸೋಣ.
2007 – ಇರ್ಫಾನ್ ಪಠಾಣ್(ಭಾರತ)
2009 – ಶಾಹೀದ್ ಅಫ್ರಿದಿ(ಪಾಕಿಸ್ತಾನ)
2010 – ಕ್ರೆಗ್ ಕೈಸ್ವೆಟ್ಟರ್(ಇಂಗ್ಲೆಂಡ್)
2012 – ಮಾರ್ಲನ್ ಸ್ಯಾಮ್ಯಲ್ಸ್(ವೆಸ್ಟ್ ಇಂಡೀಸ್)
2014 – ಕುಮಾರ ಸಂಗಕ್ಕಾರ(ಶ್ರೀಲಂಕಾ)
2016 – ಮಾರ್ಲನ್ ಸ್ಯಾಮ್ಯಲ್ಸ್(ವೆಸ್ಟ್ ಇಂಡೀಸ್)
2021 – ಮಿಚೆಲ್ ಮಾರ್ಷ್(ಆಸ್ಟ್ರೇಲಿಯಾ)