ಸೋಲಿನ ಸರಪಳಿ ಕಳಚಿದ ಟೈಟಾನ್ಸ್
ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ 13ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಜಯ ಗಳಿಸಿವ ಮೂಲಕ ಹ್ಯಾಟ್ರಿಕ್ ಸೋಲಿನ ಭಿತಿಯಿಂದ ಪಾರಾಗಿದೆ.
ತೆಲುಗು ಟೈಟಾನ್ಸ್ 30-21 ಅಂತರದಲ್ಲಿ ಪಾಟ್ನಾ ಪೈರೇಟ್ಸ್‌ಗೆ ಸೋಲುಣಿಸಿದೆ. ಟೈಟಾನ್ಸ್ ಪರ ಮನು ಗೋಯತ್ ಅವರು ರೈಡಿಂಗ್‌ನಲ್ಲಿ ಸೂಪರ್ 10 ಸಾಧನೆ ಮಾಡುವ ಮೂಲಕ ತಂಡಕ್ಕೆ ಋತುವಿನ ಮೊದಲ ಜಯ ತಂದಿತ್ತರು. ಪಾಟ್ನಾ ಪೈರೇಟ್ಸ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಸಮಬಲದ ಫಲಿತಾಂಶ ಕಂಡಿದೆ.
ಸಿದ್ಧಾರ್ಥ್ ದೇಸಾಯಿ ಹಾಗೂ ಮನು ಗೋಯತ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ತೆಲುಗು ಟೈಟಾನ್ಸ್ ತಂಡ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 21-13 ಅಂಕಗಳ ಅಂತರದಲ್ಲಿ ಮುನ್ನಡೆ ಆರಂಭದಲ್ಲಿ ಕಾಯ್ದುಕೊಂಡಿತು. ಸಿದ್ಧಾರ್ಥ್ 6 ಮತ್ತು ಮನು 8 ಅಂಕಗಳನ್ನು ಗಳಿಸಿ ತಂಡದ ಬೃಹತ್ ಮುನ್ನಡೆಗೆ ನೆರವಾದರು. ನಾಯಕ ಸುರ್ಜಿತ್ ಸಿಂಗ್ ಟ್ಯಾಕಲ್‌ನಲ್ಲಿ 2 ಅಂಕಗಳನ್ನು ಗಳಿಸಿದರು.
ಒಂದು ಬಾರಿ ಆಲೌಟ್ ಆಗುವ ಮೂಲಕ ಹಿನ್ನಡೆ ಕಂಡ ಪಾಟ್ನಾ ಪೈರೇಟ್ಸ್ ಮತ್ತೆ ಚೇತರಿಸಿಕೊಳ್ಳಲಿಲ್ಲ, ರೋಹಿತ್ ಗೂಲಿಯಾ ಮತ್ತು ಸಚಿನ್ ತಲಾ 4 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಉತ್ತಮ ಪೈಪೋಟಿ ನೀಡಿದ್ದರು. 9-9 ಸಮಬಲದ ನಂತರ ಪಾಟ್ನಾ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಯಿತು.
Pro Kabaddi, Telugu Titans, Patna Pirates