ಪೈರೇಟ್ಸ್ ಮಣಿಸಿದ ಟೈಟಾನ್ಸ್
ಮಂಜಿತ್ ಅವರ ರೈಡಿಂಗ್ (8 ಅಂಕಗಳು) ಹಾಗೂ ಜೈದೀಪ್ ದಹಿಯಾ ಅವರ ಟ್ಯಾಕಲ್ (5 ಅಂಕಗಳು) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ತಮಿಳು ತಲೈವಾಸ್ ವಿರುದ್ಧ 27-22 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.
ಈ ಜಯದೊಂದಿಗೆ ಸ್ಟೀಲರ್ಸ್ ಸತತ ಎರಡನೇ ಜಯ ದಾಖಲಿಸಿದರೆ, ತಮಿಳು ತಲೈವಾಸ್ ಸತತ ಎರಡನೇ ಸೋಲನುಭವಿಸಿತು. ಪ್ರಥಮಾರ್ಧಲ್ಲಿ ಸ್ಟೀಲರ್ಸ್ ಪಡೆ ತಲೈವಾಸ್ ತಂಡವನ್ನು ಒಂದು ಬಾರಿ ಆಲೌಟ್ ಮಾಡುವ ಮೂಲಕ 15-10 ಅಂತರದಲ್ಲಿ ಮೇಲುಗೈ ಸಾಧಿಸಿತ್ತು.
![Pro Kabaddi: ಪೈರೇಟ್ಸ್ ಮಣಿಸಿದ ಟೈಟಾನ್ಸ್ 3 Fey7tKaaMAAO M6](http://sportskarnataka.com/wp-content/uploads/2022/10/Fey7tKaaMAAO-M6-1024x576.jpg)
ಡಿಫೆಂಡರ್ಗಳು ಉತ್ತಮ ಆಟವಾಡಿದ ಪರಿಣಾಮ ಟ್ಯಾಕಲ್ನಲ್ಲಿ 6 ಅಂಕಗಳನ್ನು ಗಳಿಸಿ ಯಶಸ್ಸಿನ ಹಾದಿ ತುಳಿದಿತ್ತು. ಮೊದಲಾರ್ಧದ ಮುನ್ನಡೆಯನ್ನೇ ಕಾಯ್ದುಕೊಂಡ ಸ್ಟೀಲರ್ಸ್ ದ್ವಿತಿಯಾರ್ಧದಲ್ಲೂ ಅದೇ 5 ಅಂಕಗಳ ಅಂತರದಲ್ಲಿ ಜಯ ಗಳಿಸಿರುವುದು ವಿಶೇಷವಾಗಿತ್ತು.
![Pro Kabaddi: ಪೈರೇಟ್ಸ್ ಮಣಿಸಿದ ಟೈಟಾನ್ಸ್ 4 Fey eoUacAAv Kl](http://sportskarnataka.com/wp-content/uploads/2022/10/Fey-eoUacAAv_Kl-1024x1024.jpg)
ನಾಯಕ ಪವನ್ ಶೆರಾವತ್ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದಿರುವುದು ತಮಿಳು ತಲೈವಾಸ್ ತಂಡದ ಸೋಲಿಗೆ ಕಾರಣವಾಗಿತ್ತು. ಅತ್ಯಂತ ದುಬಾರಿ ಬೆಲೆಯಲ್ಲಿ ಶೆರಾವತ್ ಅವರನ್ನು ಖರೀದಿಸಿದ ತಮಿಳ್ ತಲೈವಾಸ್ ಕೋಚ್ ಹಲವು ಬಾರಿ ಆಟಗಾರರನ್ನು ಬದಲಾಯಿಸುವ ಪ್ರಯೋಗ ಮಾಡಿದರೂ ಪ್ರಯೋಜನವಾಗಲಿಲ್ಲ. ಒಂದೆಡೆ ರೈಡರ್ಗಳು ವೈಫಲ್ಯಗೊಳ್ಳುತ್ತಿರುವಾಗ ಡಿಫೆಂಡರ್ಗಳು ತಂಡದ ಘನತೆ ಕಾಪಾಡಿದರು. ನಾಯಕ ಸಾಗರ್ ಟ್ಯಾಕಲ್ನಲ್ಲಿ 5 ಅಂಕಗಳನ್ನು ಗಳಿಸಿ ತನ್ನ ಜವಾಬ್ದಾರಿಯ ಆಟ ಪ್ರದರ್ಶಿಸಿದರು. ಹಿಮಾಂಶು ಮತ್ತು ಸಾಹಿಲ್ ಗೂಲಿಯಾ ಟ್ಯಾಕಲ್ನಲ್ಲಿ ತಲಾ 3ಅಂಕಗಳನ್ನು ಗಳಿಸಿ ತಂಡ ದಿಟ್ಟ ಹೋರಾಟ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು.
Pro Kabaddi, Telugu Titans, Patna Pirates