ಪಂಕಜ್ ಮೋಹಿತೆ ಹಾಗೂ ಅಸ್ಲಾಮ್ ಇನಾಂದರ್ ಅವರ ಸೊಗಸಾದ ರೈಡಿಂಗ್ ನೆರವಿನಿಂದ ಬಲಿಷ್ಠ ಪುಣೇರಿ ಪಲ್ಟಾನ್ ತೆಲುಗು ಟೈಟಾನ್ಸ್ ವಿರುದ್ಧ 38-25ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.ಸತತ ಐದನೆ ಗೆಲುವು ದಾಖಲಿಸಿದೆ.
ಶನಿವಾರ ಇಲ್ಲಿನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪುನೇರಿ ಪಲ್ಟಾನ್ ತೆಲುಗು ಟೈಟಾನ್ಸ್ ವಿರುದ್ಧ 38-25 ಅಂಕಗಳಿಂದ ಗೆದ್ದುಕೊಂಡಿತು. ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದ
ಮೊದಲಾರ್ಧದಲ್ಲಿ ಪುಣೇರಿ 14-10 ಅಂಕಗಳಿಂದ ಮುನ್ನಡೆ ಪಡೆಯಿತು. ಪುಣೇರಿ ಪರ ರೈಡರ್ಗಳಾದ ಪಂಕಜ್ 8, ಅಸ್ಲಾಮ್ ಇನಾಂದರ್ 8 ಅಂಕ ಪಡೆದರು.
ತೆಲುಗು ಟೈಟಾನ್ಸ್ ಪರ ರೈಡರ್ ಆದರ್ಶ್ 9 ಅಂಕ ತಂದುಕೊಟ್ಟರು. ಕಳಪೆ ಪ್ರದರ್ಶನ ನೀಡಿರುವ ತೆಲುಗು ಟೈಟಾನ್ಸ್ಗೆ ಟೂರ್ನಿಯಲ್ಲಿ 16ನೇ ಸೋಲಾಗಿದೆ.
ಮತ್ತೊಂದು ಪಂದ್ಯದಲ್ಲಿ ಯೂ ಮುಂಬಾ ಬೆಂಗಾಲ್ ವಾರಿಯರ್ಸ್ ವಿರುದ್ಧ 49-41 ಅಂಕಗಳಿಂದ ಗೆದ್ದುಕೊಂಡಿತು. ಯೂ ಮುಂಬಾ ಪರ ರೈಡರ್ಗಳಾದ ಗುಮಾನ್ ಸಿಂಗ್ 14 ಅಂಕ ಆಶಿಶ್ 13 ಅಂಕ ಪಡೆದರು.
ಬೆಂಗಾಲ್ ಪರ ಮಣಿಂದರ್ ಸಿಂಗ್ 13 ಅಂಕ ಪಡೆದರು.ಮತ್ತೋರ್ವ ರೈಡರ್ ಶ್ರೀಕಾಂತ್ 8 ಅಂಕ ಸಂಪಾದಿಸಿದರು.
ಪಾಟ್ನಾ ವಿರುದ್ಧ ಯುಪಿ ಯೋಧಾಸ್ 35-33 ಅಂಕಗಳಿಂದ ಗೆದ್ದುಕೊಂಡಿತು.