ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನ.28ರಂದು ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.
ವೇಗಿ ವಿದ್ವತ್ ಕಾವೇರಪ್ಪ ಮಾರಕ ದಾಳಿಯ ನೆರೆವಿನಿಂದ ಕರ್ನಾಟಕ ತಂಡ ಜಾರ್ಕಂಡ್ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಶನಿವಾರ ಅಹಮದಾಬಾದ್‍ನಲ್ಲಿ ನಡೆದ ವಿಜಯ್ ಹಜಾರೆ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ 47.1 ಓವರ್‍ಗಳಲ್ಲಿ 187 ರನ್‍ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡ 40.5 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.
ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡಕ್ಕೆ ಕರ್ನಾಟಕ ವೇಗಿಗಳಾದ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ವೆಂಕಟೇಶ್ ಆಘಾತ ನೀಡಿದರು.
ಜಾರ್ಖಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರಾ 74 ರನ್, ಅನುಕೂಲ್ ರಾಯ್ 57 ರನ್ ಹೊಡೆದು ತಂಡದ ಸ್ಕೋರ್ ಹೆಚ್ಚಿಸಿದರು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 20ಕ್ಕೆ 3, ರೋನಿತ್ ಮೋರೆ 31ಕ್ಕೆ 3, ವೆಂಕಟೇಶ್ 51ಕ್ಕೆ 3 ವಿಕೆಟ್ ಪಡೆದರು.
188ರನ್ ಗುರಿ ಬೆನ್ನತ್ತಿದ ಕರ್ನಾಟಕ ಪರ ಆರ್. ಸಮರ್ಥ 53, ನಿಕಿನ್ ಜೋಸ್ ಅಜೇಯ 63, ಮಯಾಂಕ್ 12, ಮನೀಶ್ ಪಾಂಡೆ 18, ಎಸ್.ಗೋಪಾಲ್ 12 ರನ್‍ಗಳಿಸಿದರು.
ಕ್ವಾರ್ಟರ್ ಫೈನಲ್‍ಗೆ ಜಮ್ಮು ಕಾಶ್ಮೀರ
ವಿಜಯ್ ಹಜಾರೆ ಟೂರ್ನಿಯ ಪ್ರಿಕ್ವಾರ್ಟರ್‍ನಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡ ಕೇರಳ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 47,4ಓವರ್‍ಗಳಲ್ಲಿ 174 ರನ್‍ಗಳಿಗೆ ಆಲೌಟ್ ಆಯಿತು. ಜಮ್ಮು ಕಾಶ್ಮೀರ ತಂಡ 37.5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಜಮ್ಮು ಕಾಶ್ಮೀರ ಪರ ಕಮರಾನ್ ಇಕ್ಬಾಲ್ 51, ಖಾಜುರಿಯಾ 76 ರನ್, ವಿವ್ರಾಂತ್ ಶರ್ಮಾ 13, ಹೆನಾನ್ ನಜೀರ್ ಅಜೇಯ 14 ರನ್ ಗಳಿಸಿದರು.
ಕೇರಳ ಪರ ವಿನೂಪ್ ಮನೋಹರನ್ 62 ರನ್, ಸಿಜೊಮೊನ್ ಜೋಸೆï 32 ರನ್ ಗಳಿಸಿದರು. ಜಮ್ಮು ಕಾಶ್ಮೀರ ಪರ ಅಖೀಬ್ ನಬಿ 39ಕ್ಕೆ 4 ವಿಕೆಟ್ ಪಡೆದು ಮಿಂಚಿದರು.