ಪಿಂಕ್ ಪ್ಯಾಂಥರ್ಸ್, ಬೆಂಗಾಲ್ ವಾರಿಯರ್ಸ್‌ಗೆ ಜಯ
ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ ಮೂರನೇ ದಿನದ ಮೊದಲ ಎರಡು ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಜಯ ಗಳಿಸಿವೆ.
ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎದುರಾಳಿ ಪಾಟ್ನಾ ಪೈರೇಟ್ಸ್ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 45-25 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಜಯ ಗಳಿಸಿತು.
ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ (11) ಮತ್ತು ದೀಪಕ್ ಹೂಡಾ (11) ಈ ಬೃಹತ್ ಅಂತರದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಬೆಂಗಾಲ್ ವಾರಿಯರ್ಸ್‌ಗೆ ಈ ಜಯ ಆತ್ಮವಿಶ್ವಾಸವನ್ನು ತುಂಬಿತು. ತೆಲುಗು ಟೈಟಾನ್ಸ್ ಸತತ ಎರಡು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಹಿನ್ನಡೆ ಕಂಡಿತು.
ಪ್ರಥಮಾರ್ಧದಲ್ಲಿ ವಾರಿಯರ್ಸ್ ಮುನ್ನಡೆ: ತೆಲುಗು ಟೈಟಾನ್ಸ್ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆಂಗಾಲ್ ವಾರಿಯರ್ಸ್ ಪ್ರಥಮಾರ್ಧದಲ್ಲಿ 25-10 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ರೈಡಿಂಗ್‌ನಲ್ಲಿ ಒಟ್ಟು 17 ಅಂಕಗಳನ್ನು ಗಳಿಸಿದ ವಾರಿಯರ್ಸ್ 14 ಅಂಕಗಳನ್ನು ಗಳಿಸಿತು. ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿತಲ್ಲದೆ ಎರಡು ಬಾರಿ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು.

ಅರ್ಜುನ್ ದೆಶ್ವಾಲ್ (17 ಅಂಕಗಳು) ಅವರ ಅದ್ಭುತ ರೈಡಿಂಗ್ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನ ತನ್ನ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.
ಪಾಟ್ನಾ ಪೈರೇಟ್ಸ್ ತಂಡದ ಸಚಿನ್ (10)ಹಾಗೂ ರೋಹಿತ್ ಗುಲಿಯಾ(11) ದ್ವಿತಿಯಾರ್ಧದ ಕೊನೆಯಲ್ಲಿ ಉತ್ತಮ ಹೋರಾಟ ನೀಡಿ ಸೂಪರ್ 10 ಸಾಧನೆ ಮಾಡಿದರೂ ಆಗಲೇ ಕಾಲ ಮಿಂಚಿತ್ತು. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧ ಸಮಬಲ ಸಾಧಿಸಿತ್ತು.
ಅರ್ಜುನ್ ದೇಶ್ವಾಲ್(11) ಅವರು ರೈಡಿಂಗ್ ಮೂಲಕ ಸೂಪರ್ 10 ಸಾಧನೆ ಮಾಡುವುದರೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಥಮಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 18-14 ಅಂತರದಲ್ಲಿ ಮುನ್ನಡೆ ಕಾಣಲು ಕಾರಣಾರದರು. ಅಂಕುಶ್ ಟ್ಯಾಕಲ್ ಮೂಲಕ 2 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು.
ಪಾಟ್ನಾ ಪೈರೇಟ್ಸ್ ಪರ ಆಲ್ರೌಂಡರ್ ರೋಹಿತ್ ಗೂಲಿಯಾ 6 ಅಂಕ ಮತ್ತು ರೈಡಿಂಗ್‌ನಲ್ಲಿ ಸಚಿನ್ 4 ಅಂಕಗಳನ್ನು ಗಳಿಸಿ ಆರಂಬದಲ್ಲಿ ದಿಟ್ಟ ಸವಾಲು ನೀಡಿದ್ದರು.
Pro Kabaddi, Pink Panthers, Bengal Warriors