Pro Kabaddi ದಬಾಂಗ್ ಡೆಲ್ಲಿ ಹ್ಯಾಟ್ರಿಕ್ ಸಾಧನೆ
ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ 44-42 ಅಂತರದಲ್ಲಿ ಯುಪಿ ಯೋಧಾಸ್ ವಿರುದ್ಧ ಜಯ ಗಳಿಸಿ ತನ್ನ ಅಜೇಯ ಓಟ ಮುಂದುವರೆಸಿದೆ. ಆಡಿದ ಸತತ ಮೂರು ಪಂದ್ಯಗಳನ್ನೂ ಡೆಲ್ಲಿ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಸುರೇಂದರ್ ಗಿಲ್ (10) ಅವರ ಸೂಪರ್ 10 ನೆರವಿನಿಂದ ಯೋಪಿ ಯೋಧಾಸ್ ತಂಡ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 25-19 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಯುಪಿ ಯೋಧಾಸ್ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆರಂಭದಲ್ಲೇ ದಬಾಂಗ್ ಡೆಲ್ಲಿಯ ನಾಯಕ ನವೀನ್ ಎಕ್ಸ್ಪ್ರೆಸ್ ಅವರನ್ನು ನಿಯಂತ್ರಿಸುವಲ್ಲಿ ಯೋಧಾಸ್ ಯಶಸ್ವಿಯಾಯಿತು. ಈ ನಿಯಂತ್ರಣವೇ ಯೋಧಾಸ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಪ್ರದೀಪ್ ನರ್ವಾಲ್ 5 ಅಂಕಗಳನ್ನು ಗಳಿಸಿ ತಂಡದ ಬೃಹತ್ ಮುನ್ನಡೆಗೆ ನೆರವಾದರು.
![Pro Kabaddi ದಬಾಂಗ್ ಡೆಲ್ಲಿ ಹ್ಯಾಟ್ರಿಕ್ ಸಾಧನೆ 3 U.P. Yoddhas vs Dabang Delhi K.C. 2](http://sportskarnataka.com/wp-content/uploads/2022/10/U.P.-Yoddhas-vs-Dabang-Delhi-K.C.-2-1024x579.jpg)
ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಪ್ರಥಮಾರ್ಧದ ಕೊನೆಯ ಕ್ಷಣದ ವರಗೆಗೂ ಬೃಹತ್ ಅಂತರದಲ್ಲಿ ಹಿನ್ನಡೆ ಕಂಡಿತ್ತು. ಆದರೆ ಯುವ ಆಟಗಾರ ಮಂಜೀರ್ ರೈಡಿಂಗ್ನಲ್ಲಿ 4 ಅಂಕಗಳನ್ನು ಗಳಿಸಿ ಡೆಲ್ಲಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. ನಾಯಕ ನವೀನ್ ಎಕ್ಸ್ಪೆಸ್ ಕೊನೆಯ ಕ್ಷಣದಲ್ಲಿ ತಂಡಕ್ಕೆ ನೆರವಾಗಿ 8 ಅಂಕಗಳನ್ನು ಗಳಿಸಿ ನಾಯಕನ ಜವಾಬ್ದಾರಿ ಮೆರೆದರು.
![Pro Kabaddi ದಬಾಂಗ್ ಡೆಲ್ಲಿ ಹ್ಯಾಟ್ರಿಕ್ ಸಾಧನೆ 4 U.P. Yoddhas vs Dabang Delhi K.C. 1](http://sportskarnataka.com/wp-content/uploads/2022/10/U.P.-Yoddhas-vs-Dabang-Delhi-K.C.-1-1024x461.jpg)
ನಾಯಕ ನವೀನ್ ಕುಮಾರ್ (13) ಹಾಗೂ ಮಂಜಿತ್ (12)ಅವರ ಸೂಪರ್ 10 ಸಾಧನೆಯ ನೆರವಿನಿಂದ ದಬಾಂಗ್ ಡೆಲ್ಲಿ ಜಯ ಗಳಿಸಿ ನೈಜ ಚಾಂಪಿಯನ್ ಎಂಬುದನ್ನು ಸಾಬೀತುಪಡಿಸಿತು. ಯುಪಿ ಯೋಧಾಸ್ ಪರ ಸುರಿಂದರ್ ಗಿಲ್ 21 ರೈಡಿಂಗ್ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಆದರೆ ಪ್ರಸಕ್ತ ಋತುವಿನಲ್ಲಿ ಪಂದ್ಯವೊಂದರಲ್ಲೇ ಅತಿ ಹೆಚ್ಚು ರೈಡಿಂಗ್ ಅಂಕ ಗಳಿಸಿದ ಗೌರವಕ್ಕೆ ಸುರಿಂದರ್ ಗಿಲ್ ಪಾತ್ರರಾದರು.
ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ ಪ್ರೋ ಕಬಡ್ಡಿ ಲೀಗ್ ಇತಿಹಾಸಲ್ಲಿ 45ನೇ ಬಾರಿಗೆ ಸೂಪರ್ 10 ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾದರು.
Pro Kabaddi, Patna Pirates, Telugu Titans