ಸುಶೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲು
ಛತ್ರಸಾಲ್ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಜೂನಿಯರ್ ಕುಸ್ತಿಪಟು ಸಾಗರ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸೇರಿದಂತೆ 20 ಜನರ ವಿರುದ್ಧ ಕೊಲೆ, ಕೊಲೆ ಯತ್ನ, ಗಲಭೆ ಸೇರಿ ಇತರ ಆರೋಪಗಳನ್ನು ಹೊರಿಸಲಾಗಿದೆ.
ಸುಶೀಲ್ ಸೇರಿದಂತೆ 18 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ವಾಸ್ತವವಾಗಿ, ಕಳೆದ ವರ್ಷ ಏಪ್ರಿಲ್ 4 ರಂದು, ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಎರಡು ಗುಂಪುಗಳ ಕುಸ್ತಿಪಟುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಗುಂಡಿನ ದಾಳಿಯೂ ನಡೆದಿದೆ. ಇದರಲ್ಲಿ 5 ಕುಸ್ತಿಪಟುಗಳು ಗಾಯಗೊಂಡಿದ್ದಾರೆ. ಇವರಲ್ಲಿ ಸಾಗರ್ (23), ಸೋನು (37), ಅಮಿತ್ ಕುಮಾರ್ (27) ಮತ್ತು ಇತರ 2 ಕುಸ್ತಿಪಟುಗಳು ಸೇರಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಸಾವನ್ನಪ್ಪಿದ್ದಾರೆ. ಅವರು ದೆಹಲಿ ಪೊಲೀಸ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್‌ನ ಮಗ. ಈ ಪ್ರಕರಣದಲ್ಲಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಪ್ರಮುಖ ಆರೋಪಿಯಾಗಿದ್ದರು. ಪೊಲೀಸರು ಸುಶೀಲ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
2019 ರಲ್ಲಿ, ಡಿಸೆಂಬರ್ 10 ರಂದು, ಸುಶೀಲ್ ದೆಹಲಿಯ ಮಾಡೆಲ್ ಟೌನ್‌ನಲ್ಲಿ ತನ್ನ ಪತ್ನಿ ಸವಿ ಸೋಲಂಕಿ ಹೆಸರಿನಲ್ಲಿ 90 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿದ್ದರು. ಸುಶೀಲ್ ಕುಮಾರ್ ಅವರು ಫ್ಲಾಟ್ ನಂಬರ್ ಬಿ 10/6 ಖರೀದಿಸಿದ ನಂತರ ಅದನ್ನು ತಿಂಗಳಿಗೆ 40 ಸಾವಿರ ರೂಪಾಯಿ ಬಾಡಿಗೆಗೆ ನೀಡಿದರು. ಕುಸ್ತಿಪಟುಗಳಾದ ಸಾಗರ್ ಧಂಖರ್, ಸೋನು, ಭಕ್ತು ಮತ್ತು ಅಮಿತ್ ಈ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದರು.
ಭಕ್ತು ಮತ್ತು ಅಮಿತ್ ಕೂಡ ಛತ್ರಸಾಲ್ ಸ್ಟೇಡಿಯಂನಲ್ಲಿ ಕೊಠಡಿ ಪಡೆದರು. ಫೆಬ್ರವರಿ 2020 ರಲ್ಲಿ, ಸಾಗರ್ ತನ್ನ ನೆರೆಹೊರೆಯವರೊಂದಿಗೆ ಪಾರ್ಕಿಂಗ್ ವಿಷಯವಾಗಿ ಗಲಾಟೆ ಮಾಡಿಕೊಂಡಿದ್ದರು. ಅಕ್ಕಪಕ್ಕದವರು ಸುಶೀಲ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಫ್ಲಾಟ್ ಖಾಲಿ ಮಾಡುವಂತೆ ಸಾಗರ್ ಗೆ ಸುಶೀಲ್ ಹೇಳಿದರೂ ಸಾಗರ್ ಮಾಡಲಿಲ್ಲ.
ಏಪ್ರಿಲ್ 4, 2021 ರಂದು, ಸಾಗರ್ ಮತ್ತು ಕುಸ್ತಿಪಟು ಸುಶೀಲ್ ಕುಮಾರ್ ನಡುವೆ ಛತ್ರಸಾಲ್ ಸ್ಟೇಡಿಯಂನ ಪಾರ್ಕಿಂಗ್ ಬಗ್ಗೆ ವಿವಾದ ನಡೆದಿತ್ತು. ಅದರ ನಂತರ ಸುಶೀಲ್ ಪರವಿದ್ದ ಕುಸ್ತಿಪಟುಗಳು ಸಾಗರ್ ಮತ್ತು ಅವರ ಸಹಚರರನ್ನು ಥಳಿಸಿದರು. ಈ ಪ್ರಕರಣದ ವಿಡಿಯೋ ಕೂಡ ವೈರಲ್ ಆಗಿತ್ತು. ಇದರಲ್ಲಿ ಸುಶೀಲ್ ತನ್ನ ಕೈಯಲ್ಲಿದ್ದ ಹಾಕಿ ಸ್ಟಿಕ್ ನಿಂದ ಸಾಗರ್ ಗೆ ಥಳಿಸುತ್ತಿದ್ದ.
Charges framed, Sushil Kumar, murder, Case