ಇಂದಿನಿಂದ ಎಲಿಮಿನೇಟರ್ ಫೈಟ್: ಪುಣೇರಿ, ಯೋಧಾ ಸೆಣಸಾಟ
ಇಂದು ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಎಂಟನೇ ಆವೃತ್ತಿಯ ಪಂದ್ಯಗಳಲ್ಲಿ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.
ಸೋಮವಾರ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧಾ ಹಾಗೂ ಪುಣೇರಿ ಪಲ್ಟನ್ ತಂಡಗಳು ಕಾದಾಟ ನಡೆಸಲಿವೆ.
ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಮಿಫೈನಲ್ಸ್ ನಲ್ಲಿ ಸೆಣಸಾಟ ನಡೆಸಲಿದೆ.
ಪ್ರಸಕ್ತ ಸಾಲಿನ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ 22 ಪಂದ್ಯಗಳಿಂದ 12 ಜಯ ಸಾಧಿಸಿದ್ದು, 66 ಅಂಕಗಳೊಂದಿಗೆ ಆರನೇ ಸ್ಥಾನದೊಂದಿಗೆ ಎಲಿಮಿನೇಟರ್ ಗೆ ಪ್ರವೇಶ ಪಡೆದಿದೆ.
ಇನ್ನು ಯು.ಪಿ ಯೋಧಾ ತಂಡ ಇಷ್ಟೇ ಪಂದ್ಯಗಳಲ್ಲಿ 68 ಅಂಕ ಸೇರಿಸಿ ಮೂರನೇ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶ ಮಾಡಿತ್ತು.
ಎರಡೂ ತಂಡಗಳು ಭರ್ಜರಿ ಲಯದಲ್ಲಿವೆ. ಅಲ್ಲದೆ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ತಂಡಕ್ಕೆ ನೆರವಾಗಬಲ್ಲರು.
ಇನ್ನು ಯು.ಪಿ ಪರ ಸುರೇಂದ್ರ ಗಿಲ್ ಸೊಗಸಾದ ಆಟವನ್ನು ಪ್ರದರ್ಶಿಸುತ್ತಿದ್ದು ಅಂಕಗಳನ್ನು ಕಲೆ ಹಾಕಬಲ್ಲರು.
ಇವರು ಆಡಿದ 21 ಪಂದ್ಯಗಳಲ್ಲಿ 183 ಅಂಕ ಕಲೆ ಹಾಕಿ ಅಬ್ಬರಿಸಿದ್ದಾರೆ. ಇವರನ್ನು ಹೊರತು ಪಡಿಸಿದರೆ ಪ್ರದೀಪ್ ನರ್ವಾಲ್ ಅವರು 22 ಪಂದ್ಯಗಳಲ್ಲಿ 166 ಅಂಕ ಸೇರಿಸಿ ಮಿಂಚಿದ್ದಾರೆ.
ಪುಣೇ ತಂಡದ ಪರ ಅಸ್ಲಂ ಇನಾಂದಾರ ಜಯ ಉತ್ತಮವಾಗಿ ದಾಳಿ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು.
ಇವರು 22 ಪಂದ್ಯಗಳಲ್ಲಿ 159 ಅಂಕಗಳನ್ನು ಸೇರಿಸಿದ್ದಾರೆ. ಇವರಿಗೆ ಮೋಹಿತ್ ಗೋಯಟ್ ಉತ್ತಮ ಸಾಥ್ ನೀಡಬಲ್ಲರು. ಇವರು 156 ಅಂಕಗಳನ್ನು ಪೇರಿಸಿದ್ದರು ಎಲ್ಲರ ಚಿತ್ತ ಕದ್ದಿದ್ದಾರೆ.
Pro Kabaddi League 2022 Eliminator round of Season 8