Pro Kabaddi | ಸೆಮಿಫೈನಲ್ ಮೇಲೆ ಚಿತ್ತ ನೆಟ್ಟಿರುವ ಬೆಂಗಳೂರು ಬುಲ್ಸ್
ಸೆಮಿಫೈನಲ್ ಮೇಲೆ ಚಿತ್ತ ನೆಟ್ಟಿರುವ ಬೆಂಗಳೂರು ಬುಲ್ಸ್ ತಂಡ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ದಬಾಂಗ್ ದೆಹಲಿ ವಿರುದ್ಧ ಕಾದಾಟ ನಡೆಸಲಿದೆ.
ಬೆಂಗಳೂರು ತಂಡ ಟೂರ್ನಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದರೂ, ಕೊನೆಯಲ್ಲಿ ಸೋಲು ಕಂಡ ಕಾರಣ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಬುಲ್ಸ್ ಆಡಿದ 22 ಪಂದ್ಯಗಳಲ್ಲಿ 11 ಜಯ, 9 ಸೋಲು, 2 ಡ್ರಾ ಸಾಧಿಸಿದ್ದು 66 ಅಂಕಗಳನ್ನು ಸೇರಿಸಿದೆ. ಇನ್ನು ಜೈಂಟ್ಸ್ ತಂಡ 10 ಜಯ, 8 ಸೋಲು, 4 ಡ್ರಾ ಕಂಡಿದ್ದು 67 ಅಂಕಗಳನ್ನು ಸೇರಿಸಿದೆ.
ಪವರ್ ಸೆಹ್ರಾವತ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಆಡಿದ 22 ಪಂದ್ಯಗಳಲ್ಲಿ 274 ಅಂಕಗಳನ್ನು ಸೇರಿಸಿದ್ದು ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಇವರಿಗೆ ಭರತ್ ಉತ್ತಮವಾಗಿ ಸಾಥ್ ನೀಡಬಲ್ಲರು. ಇವರು 106 ಅಂಕಗಳನ್ನು ಸೇರಿಸಿದ್ದು ಭರವಸೆ ಮೂಡಿಸಿದ್ದಾರೆ.
ಎದುರಾಳಿ ಗುಜರಾತ್ ತಂಡದ ಪರ ರಾಕೇಶ್ ಸಹ ಅಂಕಗಳನ್ನು ಗುಡ್ಡೆ ಹಾಕಬಲ್ಲ ಆಟಗಾರ. ಇವರು ಪ್ರಸಕ್ತ ಟೂರ್ನಿಯಲ್ಲಿ 132 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೈಂಟ್ಸ್ ಪರ ಅಜಯ್ ಕುಮಾರ್ 76 ಅಂಕ ಸೇರಿಸಿದ್ದಾರೆ.
ರಕ್ಷಣಾ ವಿಭಾಗದಲ್ಲಿ ಬೆಂಗಳೂರು ತಂಡದ ಪರ ಸೌರಭ್ ನಡಾಲ್ ಮಿಂಚು ಹರಿಸಬಲ್ಲರು. 22 ಪಂದ್ಯಗಳಲ್ಲಿ ಇವರು 61 ಅಂಕಗಳನ್ನು ಸೇರಿಸಿ ಎದುರಾಳಿ ರೈಡರ್ ಗಳನ್ನು ಕಾಡಿದ್ದಾರೆ. ಗುಜರಾತ್ ಪರ ಪರವೇಶ್ ಸಹ ರಕ್ಷಣಾ ವಿಭಾಗದಲ್ಲಿ ಮಿಂಚು ಹರಿಸಬಲ್ಲರು.
Pro Kabaddi League 2022 bengaluru bulls