ರೋಚಕ ಕದನದಲ್ಲಿ ಬೆಂಗಳೂರು ಬುಲ್ಸ್ ಎದುರಾಳಿ ಪುಣೇರಿ ಪಲ್ಟಾನ್ ವಿರುದ್ಧ ವಿರೋಚಿತ ಸೋಲು ಅನುಭವಿಸಿದೆ. ಪುಣೇರಿ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ರೋಚಕ ಕದನದಲ್ಲಿ ಬುಲ್ಸ್ ತಂಡ ಪುಣೇರಿ ವಿರುದ್ಧ 33-35 ಅಂಕಗಳಿಂದ ಸೋಲು ಕಂಡಿತು. ಮೊದಲ ಅವಯಲ್ಲಿ ಬುಲ್ಸ್ 10-20 ಅಂಕಗಳಿಂದ ಹಿನ್ನಡೆ ಅನುಭವಿಸಿತ್ತು.
ಪುಣೇರಿ ಪರ ರೈಡರ್‍ಗಳಾದ ಮೋಹಿತ್ ಗೊಯತ್ 9, ಆಕಾಶ್ ಶಿಂಧೆ 7, ಅಸ್ಲಾಮ್ ಇನಾಂಧಾರ್ 6 ಅಂಕ ಪಡೆದರು.ಬುಲ್ಸ್ ಪರ ರೈಡರ್‍ಗಳಾದ ನೀರಜ್ 10, ಭರತ್ 10 ಅಂಕ ತಂದುಕೊಟ್ಟರು.

ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 42-30 ಅಂಕಗಳಿಂದ ಗೆದ್ದುಕೊಂಡಿತು. ಮೊದಲಾರ್ಧದಲ್ಲಿ ಡೆಲ್ಲಿ 24-13 ಅಂಕಗಳಿಂದ ಮುನ್ನಡೆ ಪಡೆದಿತ್ತು.
ಡೆಲ್ಲಿ ಪರ ರೈಡರ್‍ಗಳಾದ ನವೀನ್ ಕುಮಾರ್ 15, ಅಶು ಮಲ್ಲಿಕ್ 10 ಅಂಕ ಪಡೆದರು. ಹರ್ಯಾಣ ಪರ ಮೀತು ಶರ್ಮಾ 4 ಅಂಕ ಮಂಜೀತ್ 7 ಅಂಕ ಪಡೆದರು.