ತಾರಾ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಭಾತ್ರ ಏಷ್ಯನ್ ಕಪ್ ಟೇಬಲ್ ಟೆನಿಸ್‍ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ವಿಶ್ವದ 44ನೇ ರ್ಯಾಂಕ್ ಆಟಗಾರ್ತಿಯಾಗಿದ್ದ ಮಣಿಕಾ ಭಾತ್ರ 3ನೇ ಸ್ಥಾನಕ್ಕಾಗಿ ನಡೆದ ಕದನದಲ್ಲಿ ವಿಶ್ವದ ನಂ.6 ಜಪಾನ್‍ನ ಹಿನಾ ಹಯಾತಾ ವಿರುದ್ಧ 11-6, 6-11,11-7,12-10, 4-11, 11-2 ಅಂಕಗಳಿಂದ ಗೆಲುವು ಪಡೆದರು.
ಇದಕ್ಕೂ ಮುನ್ನ ಸೆಮಿಸ್‍ನಲ್ಲಿ ವಿಶ್ವದ ನಂ.5 ಶ್ರೇಷ್ಠ ಜಪಾನ್‍ನ ಮಿನಾ ಇಟೊ ವಿರುದ್ಧ ಸೋತಿದ್ದರು.