ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಅಗ್ರಸ್ಥಾನಕ್ಕೇರಿದೆ.
ಪುಣೆಯ ಶಿಛತ್ರಪತಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ 49-38 ಅಂಕಗಳಿಂದ ಗೆಲುವು ಕಂಡಿತು.
ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ಬೆಂಗಳೂರು ಬುಲ್ಸ್ ವಿರುದ್ಧ 19-18 ಮುನ್ನಡೆ ಪಡೆದಿತ್ತು. ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತು ಟ್ಯಾಕಲ್ಲಿಂಗ್ ಮಿಂಚಿ ಅಂಕ ಹೆಚ್ಚಿಸಿಕೊಂಡಿತು. 31 ಅಂಕ ಹೆಚ್ಚಿಸಿ ಸುಲಭ ಗೆಲುವು ದಾಖಲಿಸಿತು. ಬುಲ್ಸ್ ಪರ ರೈಡರ್ಗಳಾದ ಭರತ್ 17 ಅಂಕ ನೀರಜ್ ನರ್ವಾಲ್ 13 ಅಂಕ ಸಂಪಾದಿಸಿದರು. ಡಿಫೆಂಡರ್ ಅಮಾನ್ 6 ಅಂಕ ಸಂಪಾದಿಸಿದರು.
ತೆಲುಗು ಟೈಟಾನ್ಸ್ ಪರ ಅಮಾನ್ ರೈಡಿಂಗ್ನಲ್ಲಿ 18 ಅಂಕ, ಮತ್ತೋರ್ವ ರೈಡರ್ ಅಭಿಷೇಕ್ ಸಿಂಗ್ 5 ಅಂಕ, ಡಿಫೆಂಡರ್ ಹಾಗೂ ನಾಯಕ ಸುರ್ಜಿತ್ ಸಿಂಗ್ 4 ಅಂಕ ಸಂಪಾದಿಸಿದರು.
ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂರ್ಥರ್ಸ್ ವಿರುದ್ಧ 32-22 ಅಂಕಗಳಿಂದ ಸುಲಭ ಗೆಲುವು ಪಡೆಯಿತು. ಜೈಪುರ ಪರ ರೈಡರ್ ಅರ್ಜುನ್ ದೇಶ್ವಾಲ್ 13 ಅಂಕ, ಡಿಫೆಂಡರ್ಗಳಾದ ಸಾಹುಲ್ ಕುಮಾರ್ 4 ಅಂಕ,ಅಂಕುಶ್ 3 ಅಂಕ ಪಡೆದರು.
ಯೂ ಮುಂಬಾ ಪರ ಗುಮಾನ್ ಸಿಂಗ್ 4,ರೈಡರ್ ಅಶೀಶ್ 4 ಅಂಕ ಪಡೆದರು.