ರೈಡರ್ ಭರತ್ ಅಮೋಘ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ ವಿರುದ್ಧ 40-34 ಅಂಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಪುಣೆಯ ಶಿವ ಛತ್ರಪತಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಬುಲ್ಸ್ ತಂಡ 18-19 ಅಂಕಗಳಿಂದ ಹಿನ್ನಡೆ ಅನುಭವಿಸಿತ್ತು.
ಬೆಂಗಳೂರು ತಂಡದ ಪರ ರತ್ ರೈಡಿಂಗ್‍ನಲ್ಲಿ 14 ಅಂಕ ಪಡೆದರು. ನೀರಜ್ ನರ್ವಾಲ್ 6 ಅಂಕ ಸಂಪಾದಿಸುವ ಮೂಲಕ ಒಟ್ಟು 100 ರೈಡಿಂಗ್ ಅಂಕಗಳ ಪಡೆದ ಸಾಧನೆ ಮಾಡಿದರು.
ಡಿಫೆಂಡರ್ ಸೌರಭ್ ನರ್ವಲ್ 6 ಅಂಕ ಪಡೆದರು. ತಮಿಳ್ ತಲೈವಾಸ್ ಪರ ರೈಡರ್ ನರೇಂದರ್ 10 ಅಂಕ, ಮತ್ತೋರ್ವ ರೈಡರ್‍ಗಳಾದ ಅಜಿಂಕ್ಯ ಹಾಗೂ ಹಿಮಾನ್ಶು ತಲಾ 4 ಅಂಕ ಪಡೆದರು.
ಮತ್ತೊಂದು ಪಂದ್ಯದಲ್ಲಿ ಯೂ ಮುಂಬಾ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 36-23 ಅಂಕಗಳಿಂದ ಗೆಲುವು ಪಡೆಯಿತು. ಯೂ ಮುಂಬಾ ಪರ ಗುಮಾನ್ ಸಿಂಗ್ 13 ಅಂಕ ರೈಡರ್ ಆಶೀಶ್ 6 ಅಂಕ ತಂದುಕೊಟ್ಟರು.

ನಾಯಕ ರಿಂಕು ಸಿಂಗ್ 4 ಅಂಕ ಸಂಪಾದಿಸಿದರು.
ಪಾಟ್ನಾ ಪರ ಆಲ್ರೌಂಡರ್ ರೋಹಿತ್ ಗುಳಿಯಾ 7 ಅಂಕ ಪಡೆದರು. ರೈಡರ್ ಸಚಿನ್ 5 ಅಂಕ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.