Prime Volleyball League – ಧೋನಿ, ಪಾಂಡ್ಯ, ರಾಹುಲ್ ಉತ್ತಮ ವಾಲಿಬಾಲ್ ಆಟಗಾರರು – ಆಶ್ವಲ್ ರೈ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕರ್ನಾಟಕದ ಕೆ.ಎಲ್. ರಾಹುಲ್ ಅವರು ಉತ್ತಮ ವಾಲಿಬಾಲ್ ಆಟಗಾರರು ಎಂದು ವಾಲಿಬಾಲ್ ಆಟಗಾರ ಅಶ್ವಲ್ ರೈ ಅವರು ಅಭಿಪ್ರಾಯಪಟ್ಟಿದ್ದಾರೆ.
ನನ್ನ ಪ್ರಕಾರ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರು ಉತ್ತಮ ವಾಲಿಬಾಲ್ ಆಟಗಾರರು ಆಗಬಹುದು. ಧೋನಿ ಮತ್ತು ಪಾಂಡ್ಯ ಪಾಸಿಂಗ್ ಮಾಡಿದ್ರೆ ಕೆ.ಎಲ್. ರಾಹುಲ್ ಸ್ಮಾಶ್ ಮಾಡಬಹುದು. ದುಬೈ ಬೀಚ್ ನಲ್ಲಿ ಇವರು ಆಡುತ್ತಿರುವ ವಿಡಿಯೋ ನೋಡಿದ್ದೇನೆ. ಅವರ ಜೊತೆ ನಮಗೆ ಆಡುವ ಅವಕಾಶ ಸಿಕ್ಕಿದ್ರೆ ತುಂಬಾನೇ ಖುಷಿಯಾಗುತ್ತದೆ ಎಂದು ಅಶ್ವಲ್ ರೈ ಹೇಳಿದ್ದಾರೆ.
ಅಶ್ವಲ್ ರೈ ಅವರು ರಾಷ್ಟ್ರೀಯ ವಾಲಿ ಬಾಲ್ ಆಟಗಾರ. ಇದೀಗ ಪ್ರೈಮ್ ವಾಲಿಬಾಲ್ ಟೂರ್ನಿಯಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
Prime Volleyball League – Dhoni, Pandya, Rahul good volleyball players- Ashwal Rai
ಫ್ರೈಮ್ ವಾಲಿಬಾಲ್ ಟೂರ್ನಿಯು ಫೆಬ್ರವರಿ 5ರಿಂದ ಹೈದ್ರಾಬಾದ್ ನ ಗಚ್ಚಿಗೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಹೈದ್ರಬಾದ್ ಬ್ಲ್ಯಾಕ್ ಹಾಕ್ಸ್ವ್ ಮತ್ತು ಕೊಚ್ಚಿ ಬ್ಲ್ಯು ಸ್ಪೈಕಸ್ ತಂಡಗಳು ಹೋರಾಟ ನಡೆಸಲಿವೆ.
ಫ್ರೈಮ್ ವಾಲಿಬಾಲ್ ಟೂರ್ನಿಯಲ್ಲಿ ಒಟ್ಟು ಏಳು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಒಟ್ಟು 23 ದಿನಗಳ ಪಂದ್ಯಗಳಲ್ಲಿ 24 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಫೆಬ್ರವರಿ 27ರಂದು ನಡೆಯಲಿದೆ.
ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲ್ಯೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದ್ರಬಾದ್ ಬ್ಲ್ಯಾಕ್ ಹಾಕ್ವ್ಸ್ , ಚೆನ್ನೈ ಬ್ಲಿಟ್Ð , ಬೆಂಗಳೂರು ಟೊರ್ಪೆಡೊಸ್ ಮತ್ತು ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡಗಳು. ಎಲ್ಲಾ ಪಂದ್ಯಗಳು ರೌಂಡ್ ರಾಬಿನ್ ಲೀಗ್ ನಲ್ಲಿ ನಡೆಯಲಿವೆ. ಗುಂಪಿನ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಇದು ಎಲ್ಲಾ ಆಟಗಾರರಿಗೂ ತಮ್ಮ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಅಶ್ವಲ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.