IPl 2022 ಕೈಲ್ ಜಾಮಿನ್ಸನ್ ಐಪಿಎಲ್ ನಲ್ಲಿ ಆಡಲ್ಲ… ಕಾರಣ ಇಷ್ಟೇ…!
ನ್ಯೂಜಿಲೆಂಡ್ ನ ಘಾತಕ ವೇಗಿ ಕೈಲ್ ಜಾಮಿನ್ಸನ್ ಅವರು 15ನೇ ಆವೃತ್ತಿಯ ಐಪಿಎಲ್ ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
2021ರ ಐಪಿಎಲ್ ನಲ್ಲಿ ದುಬಾರಿ ಬೆಲೆಯ ಆಟಗಾರನಾಗಿದ್ದ ಕೈಲ್ ಜಾಮಿನ್ಸನ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.
ಆದ್ರೆ ಈ ಬಾರಿಯ ಟೂರ್ನಿಯಿಂದ ಜಾಮಿನ್ಸನ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಹೊರಗುಳಿದಿದ್ದಾರೆ.
ಐಸೋಲೇಷನ್ ಮತ್ತು ಕ್ವಾರಂಟೈನ್ ನಿಂದಾಗಿ ಕೈಲ್ ಜಾಮಿನ್ಸನ್ ಅವರು ಐಪಿಎಲ್ ನಿಂದ ಹೊರನಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ ಮುಂದಿನ ಒಂದು ವರ್ಷಗಳ ಕಾಲ ನ್ಯೂಜಿಲೆಂಡ್ ನ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಆಡುವ ಉದ್ದೇಶದಿಂದ ಜಾಮಿನ್ಸನ್ ಅವರು ಐಪಿಎಲ್ ಗೆ ಬ್ರೇಕ್ ನೀಡಿ ವಿರಾಮ ಪಡೆದುಕೊಳ್ಳಲಿದ್ದಾರೆ.
ಇನ್ನು ಕಳೆದ ಎರಡು ವರ್ಷಗಳಿಂದ ನಾನು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹೋಲಿಕೆ ಮಾಡಿದ್ರೆ ನಾನು ಇನ್ನೂ ಕಿರಿಯ. ಹೀಗಾಗಿ ನನ್ನ ಆಟದಲ್ಲಿ ಸುಧಾರಣೆಯಾಗಬೇಕಿದೆ. ನಾನು ಸಾಕಷ್ಟು ಕಲಿಯಬೇಕಿದೆ. ಆರು ಏಳು ವಾರಗಳ ಮನೆಯಲ್ಲಿದ್ದುಕೊಂಡೇ ನನ್ನ ಬೌಲಿಂಗ್ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಕೈಲ್ ಜಾಮಿನ್ಸನ್ ಹೇಳಿದ್ದಾರೆ.
IPL 2022 – Why Kyle Jamieson decided to skip IPL
ಕೈಲ್ ಜಾಮಿನ್ಸನ್ ಅವರು 2020ರಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೈಲ್ ಜಾಮಿನ್ಸನ್ ಅವರು 12 ಟೆಸ್ಟ್ , 5 ಏಕದಿನ ಮತ್ತು ಎಂಟು ಟಿ-20 ಪಂದ್ಯಗಳನ್ನು ಆಡಿದ್ದರು.
ಕಳೆದ ಬಾರಿ ಕೈಲ್ ಜಾಮಿನ್ಸನ್ ಅವರನ್ನು 15 ಕೋಟಿ ರೂಪಾಯಿ ನೀಡಿ ಆರ್ ಸಿಬಿ ತಂಡ ಖರೀದಿ ಮಾಡಿತ್ತು. ಆದ್ರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿರಲಿಲ್ಲ. 9 ಪಂದ್ಯಗಳಲ್ಲಿ 9 ವಿಕೆಟ್ ಗಳನ್ನು ಮಾತ್ರ ಕಬಳಿಸಿದ್ದರು. ದುಬಾರಿ ಬೆಲೆಯ ಆಟಗಾರ ಆರ್ ಸಿಬಿಗೆ ದುಬಾರಿ ಬೌಲರ್ ಕೂಡ ಆಗಿದ್ದರು. 9.60ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಮಿನ್ಸನ್ ಅವರು, ಇದು ಒಳ್ಳೆಯದ್ದೋ ಕೆಟ್ಟದ್ದೋ ಅಂತ ಅನ್ನಿಸುತ್ತಿಲ್ಲ. ಇದು ನನಗೆ ಹೊಸ ಅನುಭವ. ಕಲಿಯಲು ಸಿಕ್ಕ ವೇದಿಕೆ ಎಂದು ಹೇಳ್ತಾರೆ.
ಖಂಡಿತವಾಗಿಯೂ ಐಪಿಎಲ್ ನನ್ನ ಕ್ರಿಕೆಟ್ ಬದುಕನ್ನು ಬದಲಾಯಿಸಿದೆ. ಐಪಿಎಲ್ ನಿಂದ ಅನುಭವ ಸಿಕ್ಕಿದೆ. ಸಾಕಷ್ಟು ಕಲಿಯಲು ಸಾಧ್ಯವಾಗಿದೆ ಎಂದು ಕೈಲ್ ಜಾಮಿನ್ಸನ್ ಹೇಳಿದ್ದಾರೆ.