ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ಬ್ಯಾಟ್ಸ್ ಮನ್ಗಳದ್ದೇ ಮಾತು. ಬೌಂಡರಿ, ಸಿಕ್ಸರ್ಗಳ ಮಧ್ಯೆ ಶತಕಗಳ ಅಬ್ಬರ ಕೂಡ ನೋಡಿದ್ದೇವೆ. ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆಯ ರುತುರಾಜ್ ಗಾಯಕ್ವಾಡ್ ಅಬ್ಬರದ ಆಟ ಆಡಿದ್ದರು. ಆದರೆ ಶತಕದ ಬಳಿಯಲ್ಲಿ ರುತುರಾಜ್ ಎಡವಿದ್ದರು.
ಐಪಿಎಲ್ನಲ್ಲಿ ರುತುರಾಜ್ ಮೊದಲ ಬಾರಿಗೆ ನರ್ವಸ್ 99ಕ್ಕೆ ಬಲಿಯಾಗಿದ್ದಾರೆ. ಆದರೆ ಐಪಿಎಲ್ ಗೆ ಮಾತ್ರ ಇದು ಹೊಸತಲ್ಲ. 99 ರನ್ ಗೆ ಔಟಾದ ಆಟಗಾರರು ಒಂದು ರನ್ ಮಹತ್ವವನ್ನು ಅರಿತುಕೊಂಡಿದ್ದಾರೆ. ಅಷ್ಟೇ ಅಲ್ಲ ಒಂದೊಂದು ರನ್ಗೂ ಐಪಿಎಲ್ ನಲ್ಲಿ ಮಹತ್ವವಿದೆ ಅನ್ನುವುದನ್ನು ತಿಳಿದುಕೊಂಡಿದ್ದಾರೆ.
2013 ರಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ 99 ರನ್ಗಳಿಗೆ ಔಟಾದರು. ಕೊಹ್ಲಿ ಐಪಿಎಲ್ನಲ್ಲಿ ಒಟ್ಟು 5 ಶತಕಗಳನ್ನು ಸಿಡಿಸಿದ್ದು, 2013 ಆವೃತ್ತಿಯಲ್ಲಿ ಅತೀ ಹೆಚ್ಚು ರನ್ಗಳಿಸಿದ್ದರು.
ಪೃಥ್ವಿ ಶಾ ಅವರು 2019 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಶತಕವನ್ನು ಪೂರ್ಣಗೊಳಿಸುವುದನ್ನು ತಪ್ಪಿಸಿಕೊಂಡರು. ಶಾ 55 ಎಸೆತಗಳಲ್ಲಿ 99 ರನ್ ಗಳಿಸಿ ಔಟಾಗಿದ್ದರು.
ಇಶಾನ್ ಕಿಶನ್ 2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 99 ರನ್ ಗಳಿಸಿ ಔಟಾದರು. ಕಿಶನ್ ಅಂದು 56 ಎಸೆತಗಳಲ್ಲಿ 99 ರನ್ ಗಳಿಸಿದರು.